ಮೈಸೂರು: ಭೀಕರ ಅಪಘಾತ ಮೂವರ ದುರ್ಮರಣ
Team Udayavani, Nov 14, 2017, 10:08 AM IST
ಮೈಸೂರು: ಇಲ್ಲಿನ ಹುಣಸೂರು ರಸ್ತೆಯ ಬಸರಿಕಟ್ಟೆ ನಡುವೆ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಉಳ್ಳಾಲ ಮೂಲದ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಟೆಂಪೋ ಟ್ರಾವೆಲರ್ ಲಾರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಅವಘಡ ನಡೆದಿದ್ದು, ಟೆಂಪೋ ದಲ್ಲಿದ್ದ 15 ಮಂದಿ ಪೈಕಿ ಮೂವರು ಸಾವನ್ನಪ್ಪಿದ್ದು 12 ಮಂದಿ ಗಾಯಗೊಂಡಿದ್ದಾರೆ.
ಮೃತರು ಹಮೀದ್(5೦), ಅವರ ಪುತ್ರ ಹಕೀಬ್ (18), ಸಹೋದರ ಇಕ್ಬಾಲ್ (36 ) ಎಂದು ತಿಳಿದು ಬಂದಿದೆ.
ಹಮೀದ್ ಅವರು ಸ್ಟಿಕ್ಕರ್ ಕಟ್ಟಿಂಗ್ ಅಂಗಡಿ ನಡೆಸುತ್ತಿದ್ದರೆ, ಇಕ್ಬಾಲ್ ವಿದೇಶದಲ್ಲಿದ್ದು ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದರು. ಹಕೀಬ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಕುಟುಂಬ ಸದಸ್ಯರೆಲ್ಲಾ ಜೊತೆಯಾಗಿ ಊಟಿ ಪ್ರವಾಸಕ್ಕೆಂದು ತೊಕ್ಕೊಟ್ಟುವಿನಿಂದ ಸೋಮವಾರ ಸಂಜೆ ಹೊರಟಿದ್ದರು.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಣಸೂರು ಠಾಣೆಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಚ್ಚಿನ ವಿವರಗಳನ್ನುನಿರೀಕ್ಷಿಸಲಾಗುತ್ತಿದೆ.