ನಂಜನಗೂಡು: ಪೌಲ್ಟ್ರಿ ಫಾರಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ
ಇದು ಸಾವಲ್ಲ ಕೊಲೆ ಎಂದ ಮೃತನ ಪತ್ನಿ
Team Udayavani, May 22, 2022, 8:01 PM IST
ನಂಜನಗೂಡು : ತಾಲ್ಲೂಕಿನ ಸೂರಳ್ಳಿ ಗ್ರಾಮದ ಪೌಲ್ಟ್ರಿ ಫಾರಂ ಮತ್ತು ಮೇಕೆ ಸಾಕಣೆಯ ಖಾಸಗಿ ಮಾಲೀಕನ ಜಮೀನಿನ ಕೊಠಡಿಯಲ್ಲಿ ಅನುಮಾನಾ ಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಕೂಲಿ ಕಾರ್ಮಿಕನ ಶವ ಕಂಡು ಬಂದಿದೆ.
*ಸೂರಳ್ಳಿ ಗ್ರಾಮದ ಶ್ರೀನಿವಾಸ ಶೆಟ್ಟಿ (40) ಮೃತ ಕೂಲಿ ಕಾರ್ಮಿಕ. ಮೈಸೂರು ಮೂಲದ ಉಮೇಶ್ ಎಂಬುವರ ಮಾಲೀಕನಿಗೆ ಸೇರಿದ ಫಾರಂ ನಲ್ಲಿ 1 ವರ್ಷಗದಿಂದ ಶ್ರಿನಿವಾಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇದು ಸಾವಲ್ಲ ಕೊಲೆ ಎಂದ ಮೃತನ ಪತ್ನಿ ರಾಜೇಶ್ವರಿ ಮಗಳು ಸುಕನ್ಯ ಆರೋಪಿಸಿದ್ದಾರೆ. ಕುಟುಂಬಸ್ಥರ ಜತೆಗೂಡಿ ಸ್ಥಳಕ್ಕೆ ಭೇಟಿ ನೀಡಿದ ನಂತರ ನಂಜಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನನಗೂ ಘಟನೆಗೂ ಸಂಭಂದವೇ ಇಲ್ಲಾ ಎಂದಪೌಲ್ಟ್ರಿ ಮಾಲೀಕ ಉಮೇಶ್ ಹೇಳಿದ್ದಾರೆ.
ಸೂರಳ್ಳಿ ಮತ್ತು ಮಸಗೆ ಗ್ರಾಮಸ್ಥರು ರಿಂದ ಸರ್ಕಾರಿ ಆಸ್ಪತ್ರೆಯ ಶವ ಸಂಸ್ಕಾರ ಘಟಕದ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲಾಗಿದ್ದು,ನಂತರ ಸ್ಥಳಕ್ಕೆ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ ಐ ಜಯರಾಮ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಲೀಕನ ಬಂಧನ ಅಥವಾ ಸೂಕ್ತ ಪರಿಹಾರ ಅಗುವವರಿಗೂ ಶವ ಪಡೆಯಲು ಕುಟುಂಬದವರ ನಿರಾಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಣಸೂರು: ಸಾಲಿಗ್ರಾಮ ಠಾಣಾ ಪಿ.ಎಸ್.ಐ. ಹೃದಯಾಘಾತದಿಂದ ನಿಧನ
ಹುಣಸೂರು : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಶಾಲಾ ಶಿಕ್ಷಕ ಸಾವು
ಚುನಾವಣೆ : ಆಣೆ ಪ್ರಮಾಣಕ್ಕಾಗಿ ಗೆಲುವಿನ ಸಂಭ್ರಮ ಮರೆತು ಬಸ್ ಹತ್ತಿದ ಗ್ರಾ.ಪಂ. ಸದಸ್ಯರು
ಫ್ಲೆಕ್ಸ್ನಲ್ಲಿ ಕೆಂಪೇಗೌಡರ ಬದಲು ವೀರಮದಕರಿ ಫೋಟೋ ಮುದ್ರಣ
ಶೀಲ ಶಂಕಿಸಿ ಪತ್ನಿ ರುಂಡವನ್ನೇ ಕತ್ತರಿಸಿದ ಪತಿ! : ಮೈಸೂರಿನಲ್ಲಿ ಭೀಕರ ಕೃತ್ಯ