Udayavni Special

ಅರಣ್ಯದಂಚಿನ ಮಾಳದಹಾಡಿ ಮಂದಿಗೆ ಹೊಸ ಸೂರು


Team Udayavani, Feb 17, 2020, 3:00 AM IST

aranyadanchina

ಎಚ್‌.ಡಿ.ಕೋಟೆ: ಬಹು ವರ್ಷಗಳಿಂದ ಅರಣ್ಯದಂಚಿನಲ್ಲೇ ವಾಸವಾಗಿದ್ದರೂ ಸ್ವಂತ ಸೂರು ನಿರ್ಮಿಸಿಕೊಳ್ಳಲು ಅರಣ್ಯ ಕಾಯ್ದೆಯಡಿ ಅವಕಾಶ ವಂಚಿತರಾಗಿದ್ದ ತಾಲೂಕಿನ ಮಾಳದಹಾಡಿಯಲ್ಲಿ ನೂತನ 16 ಮನೆಗಳು ಮತ್ತು 1 ಅಂಗನವಾಡಿ ಕಟ್ಟಡದ ಕಾಮಗಾರಿಗೆ ಶಾಸಕ ಅನಿಲ್‌ ಚಿಕ್ಕಮಾದು ಚಾಲನೆ ನೀಡಿದರು.

ಶಾಸಕ ಅನಿಲ್‌ ಚಿಕ್ಕಮಾದು ಸರ್ಕಾರದ ಯೋಜನೆ ಜಾರಿಗೊಳಿಸಿ ಅರಣ್ಯದಂಚಿನಲ್ಲಿ ಅಂಗನವಾಡಿ ಮತ್ತು ನಿರ್ಮಾಣಕ್ಕೆ ಸಹಕಾರ ನೀಡಿದ್ದಕ್ಕೆ ಹರ್ಷಿತರಾದ ಹಾಡಿಯ ಮಂದಿ ಆರಂಭದಲ್ಲಿಯೇ ಶಾಸಕರಿಗೆ ಆರತಿ ಬೆಳಗೆ ಹಾಡಿಗೆ ಸ್ವಾಗತಿಸಿದರು.

ಏನದು ಕಾರ್ಯಕ್ರಮ?: ಸರ್ಕಾರದ ಯೋಜನೆಗಳು ಗ್ರಾಮೀಣ ಪ್ರದೇಶಗಳ ಜನರಿಗೆ ದಕ್ಕುತ್ತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳ ಜನರು ಸವಲತ್ತು ವಂಚಿತರಾಗಿ ಮೂಲಭೂತ ಸೌಕರ್ಯಗಳಾದ ವಿದ್ಯುತ್‌, ಶಾಲೆ, ರಸ್ತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ ವಿಧವಾ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ, ಹೆಲ್ತ್‌ಕಾರ್ಡ್‌ ವಿತರಣೆ, ಆಧಾರ್‌ ಕಾರ್ಡ್‌ ನೋಂದಣಿ ಸೇರಿದಂತೆ ಇನ್ನಿತರ ನೋಂದಣಿ ಸೇರಿದಂತೆ ಇನ್ನಿತರ ಸರ್ಕಾರಿ ಸವಲತ್ತುಗಳಿಗಾಗಿ ಆ ಭಾಗದ ಜನರು ತಾಲೂಕು ಕೇಂದ್ರ ಸ್ಥಾನಕ್ಕೆ ಆಗಮಿಸಬೇಕು.

ಈ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ತಾಲೂಕಿನ ಎನ್‌.ಬೆಳತ್ತೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶಾಸಕ ಅನಿಲ್‌ ಚಿಕ್ಕಮಾದು, ಮುಂಜಾನೆಯೇ ಮಾಳದ ಹಾಡಿಯಲ್ಲಿ ನೂತನ ಅಂಗನವಾಡಿ ಕಟ್ಟಡ ಮತ್ತು ಆರಂಭದಲ್ಲಿ 7 ಮನೆಗಳ ನಿರ್ಮಾಣ ಸೇರಿದಂತೆ ಹಾಡಿಯ ರಸ್ತೆ ಕಾಮಗಾರಿ ಸೇರಿ 50 ಲಕ್ಷ ಅಂದಾಜು ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಮಾನವೀಯತೆ ಮೆರೆದ ಶಾಸಕ: ಹಾಡಿಯಲ್ಲಿ ಹಲವು ದಿನಗಳಿಂದ ನಿತ್ರಾಣಗೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ಇಲಾಖೆ 108ಗೆ ಕರೆ ಮಾಡಿದರೂ ವಾಹನ ಲಭ್ಯವಾಗಿಲ್ಲ ಎನ್ನುವ ಹಾಡಿ ಮಹಿಳೆಯರ ಆರೋಪ ಆಲಿಸಿದ ಶಾಸಕರು ರೋಗಿ ಬಳಿ ಧಾವಿಸಿ, ಆತನ ಆರೋಗ್ಯ ವಿಚಾರಿಸಿ ಸ್ಥಳದಲ್ಲಿಯೇ ಆರೋಗ್ಯ ಇಲಾಖೆಗೆ ಕರೆ ಮಾಡಿ ರೋಗಿಯನ್ನು ಈ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಹಾಡಿಯ ಶುದ್ಧ ನೀರಿನ ಘಟಕ ನಿರ್ಮಾಣಗೊಂಡಾಗಿನಿಂದ ಕಾರ್ಯನಿರ್ವಹಿಸುತ್ತಿಲ್ಲ. ಕಲುಷಿತ ನೀರಿನ್ನೇ ಸೇವಿಸಬೇಕು ಅನ್ನುವ ಹಾಡಿ ಮಂದಿ ಆರೋಪ ಆಲಿಸಿ, ಕೂಡಲೇ ನೀರಿನ ಘಟಕ ದುರಸ್ತಿಗೊಳಿಸುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಶಾಸಕ ಮಾನವೀಯತೆ ಮರೆದರು.

ಕಲಿಕೆಗೆ ಆದ್ಯತೆ ನೀಡಿ: ಸರ್ಕಾರ ಆದಿವಾಸಿಗರ ಅಭಿವೃದ್ಧಿಗೆ ಅನುದಾನದ ಹೊಳೆಯನ್ನೇ ಹರಿಸುತ್ತಿದೆ. ಆದಿವಾಸಿಗರು ಯೋಜನೆಯ ಉಪಯೋಗ ಪಡೆದುಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಕಲಿಕೆಗೆ ಆದ್ಯತೆ ನೀಡಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪೋಷಕರಿಗೆ ಕಿವಿ ಮಾತು ಹೇಳಿದ ಶಾಸಕರು, ಮಕ್ಕಳ ಬಗ್ಗೆ ಎಚ್ಚರವಹಿಸುವಂತೆ ಹಾಡಿ ಮಂದಿಯಲ್ಲಿ ಮನವಿ ಮಾಡಿಕೊಂಡಿದ್ದೇ, ಅಲ್ಲದೆ ಗಿರಿಜನ ಅಭಿವೃದ್ಧಿ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆಗಳ ಸಂದರ್ಭದಲ್ಲಿ ಹಾಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದಾರೆಯೇ ಎಂದು ಸಮಗ್ರ ಮಾಹಿತಿ ಪಡೆದುಕೊಂಡರು.

ಹೆಚ್ಚಿನ ಅನುದಾನ ಮಂಜೂರು: ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಎಚ್‌.ಡಿ.ಕೋಟೆ ತೀರ ಹಿಂದುಳಿದ ತಾಲೂಕು ಅನ್ನುವ ಹಣೆಪಟ್ಟಿ ಕಳಚುವ ಸಲುವಾಗಿ ನನ್ನ ಅಧಿಕಾರವಧಿಯಲ್ಲಿ ಜನಪರ ಅಭಿವೃದ್ಧಿ ಕೆಲಸಗಳನ್ನು ನೆರವೇರಿಸಲು ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿಸುತ್ತಿದ್ದೇನೆ ಎಂದರು.

2 ದಿನ ಸವಲತ್ತು ವಿತರಣೆ: ಅದೇ ರೀತಿ ಗ್ರಾಮೀಣ ಭಾಗದ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ತಾಲೂಕಿನಲ್ಲಿ 3ನೇ ಗ್ರಾಮವಾಸ್ತವ್ಯ ಹೂಡಲು ಸಿದ್ಧತೆ ನಡೆದಿದ್ದು, ತಾಲೂಕಿನ ಜನರ ಮೂಲಭೂತ ಸಮಸ್ಯೆ ಪರಿಹರಿಸುವುದೇ ವಾಸ್ತವ್ಯದ ಉದ್ದೇಶ. ಎನ್‌.ಬೆಳತ್ತೂರು ಭಾಗದ ಉದೂರು ಗಿರಿಜನ ಆಶ್ರಯ ಶಾಲೆಯಲ್ಲಿ ವಾಸ್ತವ್ಯ ಹೂಡುವುದೇ ಅಲ್ಲದೆ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿಸುವ ಸಲುವಾಗಿ ಎನ್‌.ಬೆಳತ್ತೂರು ಗ್ರಾಮದಲ್ಲಿ 2 ದಿನಗಳ ಕಾಲ ಸರ್ಕಾರಿ ಸವಲತ್ತುಗಳ ವಿತರಣೆ ಮತ್ತು ನೋಂದಣಿ ಮಾಡಿಸುವುದಾಗಿ ತಿಳಿಸಿದರು.

ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ, ತಹಶೀಲ್ದಾರ್‌ ಆರ್‌.ಮಂಜುನಾಥ್‌, ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ, ನಿಂಗೇಗೌಡ, ಇಬ್ರಾಹಿಂ, ಸರ್ಕಲ್‌ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ ಸೇರಿದಂತೆ ಗ್ರಾಪಂ, ತಾಪಂ ಸದಸ್ಯರು ಪಾಲ್ಗೊಂಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಅಭಿಮಾನಿಗಳು ಗ್ರಾಮಸ್ಥರು ಹಾಜರಿದ್ದರು. ಎನ್‌.ಬೆಳತ್ತೂರು ಆಸುಪಾಸಿನ ಹಲವು ಗ್ರಾಮಗಳ ನೂರಾರು ಮಂದಿ ಸರ್ಕಾರಿ ಸವಲತ್ತುಗಳ ಮಂಜೂರಾತಿಗೆ ನೋಂದಣಿ ಮಾಡಿಸಿಕೊಂಡರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ:

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಯಾದಗಿರಿ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಯಾದಗಿರಿಯ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಮುಳುವಾದ ಆದೇಶಗಳ ಅಸಮರ್ಪಕ ಅನುಷ್ಠಾನ

ಮುಳುವಾದ ಆದೇಶಗಳ ಅಸಮರ್ಪಕ ಅನುಷ್ಠಾನ

ಲಾಕ್ ಡೌನ್ ನಡುವೆ ಟ್ಯಾಕ್ಟರ್ ನಲ್ಲಿ ಗದ್ದೆ ಉಳುಮೆ ಮಾಡಿದ ಸಚಿವ ಸಿ ಟಿ ರವಿ

ಲಾಕ್ ಡೌನ್ ನಡುವೆ ಟ್ಯಾಕ್ಟರ್ ನಲ್ಲಿ ಗದ್ದೆ ಉಳುಮೆ ಮಾಡಿದ ಸಚಿವ ಸಿ ಟಿ ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಂಜನಗೂಡಿಗೆ ಹೋಗಲು ಒಪ್ಪದ ಸಿಬ್ಬಂದಿ

ನಂಜನಗೂಡಿಗೆ ಹೋಗಲು ಒಪ್ಪದ ಸಿಬ್ಬಂದಿ

ನಿಲುವಾಗಿಲು ಕೊಪ್ಪಲಿಗೆ ವಿದ್ಯುತ್‌ ಸಂಪರ್ಕ

ನಿಲುವಾಗಿಲು ಕೊಪ್ಪಲಿಗೆ ವಿದ್ಯುತ್‌ ಸಂಪರ್ಕ

mysuru-tdy-1

ಕುಡಿವ ನೀರು ಕಲ್ಪಿಸಲು ಗ್ರಾಪಂ ನಿರ್ಲಕ್ಷ್ಯ

ಮೈಸೂರು ಜಿಲ್ಲೆಯ ಮೊದಲ ಸೋಂಕಿತ ಗುಣಮುಖನಾಗಿ ಬಿಡುಗಡೆ

ಮೈಸೂರು ಜಿಲ್ಲೆಯ ಮೊದಲ ಸೋಂಕಿತ ಗುಣಮುಖನಾಗಿ ಬಿಡುಗಡೆ

mysuru-tdy-1

ಜುಬಲಿಯಂಟ್ಸ್‌ ವಿರುದ್ಧ ತನಿಖೆ ಆರಂಭ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ  ರೈತಾಪಿ ವರ್ಗ

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ ರೈತಾಪಿ ವರ್ಗ

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ:

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ

07-April-40

ನಿಗದಿತ ದರಕ್ಕೆ ಮಾಂಸ ಮಾರಾಟ ಮಾಡಿ

07-April-39

ವೈದ್ಯರು-ಪೊಲೀಸರು, ಸೈನಿಕರಿಗೆ ಸಹಕಾರ ನೀಡಿ