Udayavni Special

ನೆರವು ಬೇಡ, ಬೆಳೆಗೆ ಬೆಂಬಲ ಬೆಲೆ ಘೋಷಿಸಿ: ಕುಮಾರ್‌


Team Udayavani, Jul 6, 2019, 3:00 AM IST

neravu

ಹುಣಸೂರು: ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ರೂ.,ನ ನೆರವಿನ ಬದಲು ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತೆ ಕಾರ್ಯಕ್ರಮ ರೂಪಿಸಿದ್ದಲ್ಲಿ ಮಾತ್ರ ರೈತನ ಉಳಿಗಾಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಅಭಿಪ್ರಾಯಪಟ್ಟರು. ತಾಲೂಕಿನ ಬಿಳಿಕೆರೆ ಹೋಬಳಿ ಶಿರಿಯೂರು ಗ್ರಾಮದಲ್ಲಿ ರೈತರ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಗಳು ರೈತರ ಅಭ್ಯುದಯಕ್ಕಾಗಿ ವೈದ್ಯನಾಥನ್‌ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವ ಹಾಗೂ ಬೆಂಬಲ ಬೆಲೆ ನೀಡುವುದನ್ನು ಬಿಟ್ಟು ಹಣಕಾಸಿನ ನೆರವು ನೀಡಿದರೆ ರೈತರು ಉದ್ಧಾರವಾಗಲ್ಲವೆಂದು ಟೀಕಿಸಿದರು. ರೈತ ಸಂಘ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಲೇ ಬಂದಿದ್ದು, ಕಳೆದ 40 ವರ್ಷಗಳಿಂದ ರೈತರ ಸಂಘಕ್ಕೆ ಕೆ.ಎಸ್‌.ಪುಟ್ಟಣ್ಣಯ್ಯ ಹಾಗೂ ಚುಕ್ಕಿ ನಂಜುಂಡಸ್ವಾಮಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆಂದರು.

ಈ ರೈತಪರ ಸಂಘಟನೆ ಸೇರಿ ಮತ್ತಷ್ಟು ಸದೃಢಗೊಳಿಸಬೇಕು, ಕೆಲಸ ಕಾರ್ಯಗಳಿಗೆ ಹೋಗುವ ವೇಳೆ ರೈತರು ಹೆಗಲ ಮೇಲೆ ಹಸಿರು ಟವಲ್‌ ಹಾಕುವುದನ್ನು ಮರೆಯಬಾರದೆಂದರು. ತಾಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಗೌರವ ಅಧ್ಯಕ್ಷ ತಟ್ಟೆಕೆರೆರಾಮೇಗೌಡ ಮಾತನಾಡಿದರು.

ಹೊಸೂರು ಮಣಿ, ತಂಬಾಕು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣೇಗೌಡ, ಮುಖಂಡರಾದ ಉಂಡವಾಡಿಚಂದ್ರೇಗೌಡ, ಕೃಷ್ಣಪ್ಪ, ದೇವಪ್ಪನಾಯಕ, ಜಗದೀಶ್‌, ಸಹದೇವ, ಪುಟ್ಟರಾಮೇಗೌಡ, ಸೊಮಣ್ಣ, ತಮ್ಮಣ್ಣ, ರವಿ, ಈರಮ್ಮ, ರಮೇಶ, ಬಸವಣ್ಣ, ಮಹದೇವು ಮತ್ತಿತರರಿದ್ದರು.

ಪದಾಧಿಕಾರಿಗಳ ಆಯ್ಕೆ: ಶಿರಿಯೂರು ಗ್ರಾಮ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ, ಗೌರವ ಅಧ್ಯಕ್ಷರಾಗಿ ಬಸವರಾಜೇಗೌಡ, ಸೋಮಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್‌, ಶಿವಕುಮಾರ್‌,ಉಪಾಧ್ಯಕ್ಷರಾಗಿ ಲೋಕೇಶ್‌, ರವಿಕುಮಾರ್‌, ಮಹದೇವು, ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್‌ಕುಮಾರ್‌, ರಾಘವೇಂದ್ರ, ಬಸವರಾಜು, ಖಜಾಂಚಿಯಾಗಿ ಜಯಣ್ಣ, ಸಂಚಾಲಕರಾಗಿ ಸಂಜಯ್‌, ವಿನಯಕುಮಾರ್‌ ಆಯ್ಕೆಮಾಡಿ ಆದೇಶ ಪತ್ರವನ್ನು ಜಿಲ್ಲಾಧ್ಯಕ್ಷ ಹೊಸೂರುಕುಮಾರ್‌ ವಿತರಿಸಿದರು.

ಟಾಪ್ ನ್ಯೂಸ್

Untitled-1

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಣನೀಯ ಏರಿಕೆ !

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

Untitled-1

ಸಮುದ್ರ ಪ್ರಯೋಗಕ್ಕೆ ವಿಕ್ರಾಂತ  

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

Untitled-1

ನಿಯಮ ಪಾಲಿಸದ ಕೇರಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt-Hospital

ವರ್ಷ ಕಳೆದರೂ ಸಾರ್ವಜನಿಕ ಆಸ್ಪತ್ರೆ ದುರಸ್ತಿ ಕಾರ್ಯ ಅಪೂರ್ಣ

surjewala

ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶ : ಸುರ್ಜೆವಾಲಾ ಕಿಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

Mysore News, Piriyapattana Udayavani

ಕರಡಿಲಕ್ಕನ ಕೆರೆ ಏತನೀರಾವರಿ ಘಟಕದಿಂದ  ನೀರು ಬಿಡುವ ಕಾರ್ಯಕ್ಕೆ ಶಾಸಕ ಕೆ.ಮಹದೇವ್ ಚಾಲನೆ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

Untitled-1

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಣನೀಯ ಏರಿಕೆ !

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ತಂಡವಾಗಿ ಕಾರ್ಯ ನಿರ್ವಹಣೆ: ಸುನಿಲ್‌ ಕುಮಾರ್‌

ತಂಡವಾಗಿ ಕಾರ್ಯ ನಿರ್ವಹಣೆ: ಸುನಿಲ್‌ ಕುಮಾರ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

Untitled-1

ಸಮುದ್ರ ಪ್ರಯೋಗಕ್ಕೆ ವಿಕ್ರಾಂತ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.