ಕ್ಷೇತ್ರದ ಅಭಿವೃದ್ಧಿಗೆ ಜನತೆ ಬೆಂಬಲಿಸಿ


Team Udayavani, May 5, 2018, 12:31 PM IST

m4-khestrada.jpg

ತಿ.ನರಸೀಪುರ: ಪ್ರಸಕ್ತ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ರಣತಂತ್ರವನ್ನು ಅಭ್ಯರ್ಥಿಯಾಗಿ ನಾನು ರೂಪಿಸುವುದಕ್ಕಿಂತ ಮತದಾರರೆ ರೂಪಿಸಿದ್ದಾರೆ ಎಂದು ಜೆಡಿಎಸ್‌ ಅಭ್ಯರ್ಥಿ ಎಂ.ಅಶ್ವಿ‌ನ್‌ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಮೂಗೂರು ಗ್ರಾಮದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಮತವನ್ನು ಪಡೆದು ಗೆದ್ದ ನಂತರ ಜನರ ಕೈಗೆ ಸಿಗದ ಸಚಿವ ಮಹದೇವಪ್ಪರನ್ನು ಸೋಲಿಸಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಶಕ್ತಿ ಏನೆಂದು ಜನರೇ ತೋರಿಸುತ್ತಾರೆ.

ತಿ.ನರಸೀಪುರವನ್ನು ಸಿಂಗಾಪುರ ಮಾಡಿದ್ದೇನೆ ಎಂದು ವೇದಿಕೆಗಳಲ್ಲಿ ಮಾರುದ್ದ ಭಾಷಣ ಮಾಡುತ್ತಾರೆ. ಆದರೆ ಮೂಗೂರು ಗ್ರಾಮದ ಅಭಿವೃದ್ಧಿ ನೋಡಿದರೆ ಹಾಗೂ ಈ ಭಾಗದ ರೈತರ ನೋವನ್ನು ಗಮನಿಸಿದರೆ ಸಚಿವರು ಸಿಂಗಾಪುರ ಮಾಡಿಲ್ಲ, ನರಕಪುರ ಮಾಡಿದ್ದಾರೆಂದು ಟೀಕಿಸಿದರು.

ಎಂ.ಆರ್‌.ಶಿವಮೂರ್ತಿ ಮಾತನಾಡಿ, ಕಳೆದ 25 ವರ್ಷಗಳಿಂದ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದ ಮೂಗೂರು ರಾಚೇಗೌಡರ ಕುಟುಂಬಕ್ಕೆ ಸಚಿವರು ಕಳೆದ 5 ವರ್ಷಗಳಿಂದ ನೀಡಿದ ಮಾನಸಿಕ ಹಿಂಸೆಯಿಂದ ಬೇಸತ್ತು ಈ ಬಾರಿ ಜೆಡಿಎಸ್‌ ಪಕ್ಷ ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದೇವೆ.

ಮಹದೇವಪ್ಪ ಅವರನ್ನು ನಮ್ಮ ಕುಟುಂಬದಲ್ಲಿ ಒಬ್ಬರೆಂದು ಭಾವಿಸಿ ಅವರ ಗೆಲುವಿಗೆ ಶ್ರಮಿಸುತ್ತ ಬಂದೆವು. ಬಳಿಕ ಸಚಿವರು ನಮ್ಮ ಕುಟುಂಬವನ್ನು ತಾತ್ಸಾರವಾಗಿ ಕಂಡರು. ಅದರಲ್ಲೂ ಲೋಕೊಪಯೋಗಿ ಸಚಿವರಾದ ಮೇಲೆ ನಮಗೆ ಮಾನಸಿಕ ಹಿಂಸೆ ನೀಡಿದರು. ರಾಜಕೀಯವಾಗಿ ತುಳಿಯಲು ಪ್ರಯತ್ನಿಸಿದರು.

ಇದರಿಂದ ರೋಸಿಹೋದ ನಾವು ನಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅವರು ಕೊಟ್ಟಂತ ತೊಂದರೆ ಸವಾಲಾಗಿ ಸ್ವೀಕರಿಸಿ ಸಚಿವರ ಸೋಲಿಗೆ ಟೊಂಕ ಕಟ್ಟಿ ನಿಂತ್ತಿದ್ದೇವೆ ಎಂದರು. ಕ್ಷೇತ್ರಾದ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಮೂಗೂರು ಬಸವಣ್ಣ, ಮಾಜಿ ಅದ್ಯಕ್ಷರಾದ ಗೌಡ್ರು ಜಗದೀಶ್‌ಮೂರ್ತಿ, ಕುರುಬೂರು ವೀರೇಶ್‌, ಅಧ್ಯಕ್ಷರಾದ ಶಿವಕುಮಾರ್‌, ಮುಖಂಡರಾದ ಕು.ಶಿ.ಬೃಂಗೀಶ್‌, ಕನ್ನಹಳ್ಳಿ ಚಿಕ್ಕಸ್ವಾಮಿ,

ಯುವ ಘಟಕದ ಅಧ್ಯಕ್ಷ ದಿಲೀಪ್‌ಕುಮಾರ್‌, ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೊಸಪುರ ಕೆ.ಮಲ್ಲು, ಬಿಎಸ್‌ಪಿ ಮುಖಂಡರಾದ ಕೆ.ಎನ್‌.ಪ್ರಭುಸ್ವಾಮಿ, ಬಿ.ಮಹದೇವಸ್ವಾಮಿ, ಜೆಡಿಎಸ್‌ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೂದಹಳ್ಳಿ ಸಿದ್ದರಾಜು, ಕುಮಾರ್‌, ಅರವಿಂದ್‌  ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.