Udayavni Special

ದೇವಿ ಸನ್ನಿಧಿಯಲ್ಲಿ ಮೈತ್ರಿ ಸರ್ಕಾರ ಕೆಡವಲು ಮುಹೂರ್ತ

Team Udayavani, Jul 30, 2019, 3:11 PM IST

mysuru-tdy-2

ಶಕ್ತಿದೇವತೆ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎಚ್.ವಿಶ್ವನಾಥ್‌.

ಮೈಸೂರು: ಆರಂಭದ ದಿನದಿಂದಲೂ ಶಾಸಕರ ಬಂಡಾಯವನ್ನು ಜೀರ್ಣಿಸಿಕೊಂಡೇ ಮುನ್ನಡೆದಿದ್ದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೆ ಶಕ್ತಿ ದೇವತೆ ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಡಗೂರು ಎಚ್.ವಿಶ್ವನಾಥ್‌ ಮುಹೂರ್ತ ಇಟ್ಟು ಸಫ‌ಲರಾದರಾ? ಹೌದು ಎನ್ನುತ್ತವೆ ಮೂಲಗಳು.

ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಉರುಳಿ ಸಲು ರಾಜ್ಯ ಬಿಜೆಪಿ ನಾಯಕರು ಹಲವಾರು ಬಾರಿ ಆಪರೇಷನ್‌ ಕಮಲಕ್ಕೆ ಕೈ ಹಾಕಿ ವಿಫ‌ಲರಾಗಿದ್ದರು. ಜೊತೆಗೆ ಕುಮಾರಸ್ವಾಮಿ ಅವರ ಮಂತ್ರಿ ಮಂಡಲ ದಲ್ಲಿದ್ದ ರಮೇಶ್‌ ಜಾರಕಿಹೊಳಿ, ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪವನ್ನು ಸಹಿಸದೆ ಬಂಡಾಯದ ಬಾವುಟವನ್ನು ಹಾರಿಸಿ ಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರಿಂದ ಈ ಸರ್ಕಾರವನ್ನು ಉರುಳಿಸಲೇಬೇಕು ಎಂದು ಸಮಾನ ಮನಸ್ಕ ಶಾಸಕ ರನ್ನು ಒಗ್ಗೂಡಿಸುವ ಕೆಲಸಕ್ಕೆ ಕೈಹಾಕಿದರಾದರೂ ಅವರ ಪ್ರಯತ್ನ ನಿರೀಕ್ಷಿತ ಫ‌ಲ ನೀಡಿರಲಿಲ್ಲ. ಆದರೆ, ಕಾಂಗ್ರೆಸ್‌ನಿಂದ ಹೊರಬಂದು ಅತಂತ್ರರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಶಾಸಕರಾಗಲು ಅವಕಾಶ ನೀಡುವ ಮೂಲಕ ರಾಜಕೀಯವಾಗಿ ಪುನರ್‌ಜನ್ಮ ನೀಡಿದರು ಎಂಬ ಕಾರಣಕ್ಕೆ ಜೆಡಿಎಸ್‌ ವರಿಷ್ಠ ಎಚ್. ಡಿ. ದೇವೇಗೌಡರ ಮಾತನ್ನು ಅಲ್ಲಗಳೆಯಲಾಗದೆ ಒಲ್ಲದ ಮನಸ್ಸಿನಿಂದಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡರಾದರೂ ಜೆಡಿಎಸ್‌ನಲ್ಲಿ ಗೌಡರ ಕುಟುಂಬದವರ ಮಾತು ಬಿಟ್ಟು ಆ ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ಯಾರ ಮಾತು ಕೇಳಲಾರರು.

ಬೂತ್‌ಮಟ್ಟದ ಕಾರ್ಯಕರ್ತ ಕೂಡ ಗೌಡರು, ಕುಮಾರಣ್ಣ ಹೇಳಿದರೆ ಮಾತ್ರ ನಾವು ಕೇಳುವುದು ಎಂಬ ಮನಸ್ಥಿತಿ ತೋರಿದ್ದಲ್ಲದೆ, ತಮಗೆ ಪಕ್ಷದ ನಾಮಕಾವಾಸ್ತೇ ರಾಜ್ಯಾಧ್ಯಕ್ಷ ಸ್ಥಾನನೀಡಿ, ಯಾವುದೇ ಅಧಿಕಾರ ನೀಡದೆ, ತಮ್ಮ ಹಿರಿತನ ಮತ್ತು ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣಕ್ಕೆ ಅಸಮಾಧಾನಗೊಂಡಿದ್ದ ವಿಶ್ವನಾಥ್‌ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಎಂಬ ಹುದ್ದೆ ಹೊರತುಪಡಿ ಸಿದರೆ ಯಾವುದೇ ಅಧಿಕಾರ ಚಲಾಯಿಸಲಾಗದೆ ಅಸಹಾಯಕರಾಗಿದ್ದರು. ಲೋಕಸಭಾ ಚುನಾವಣೆ ಯಲ್ಲೂ ತಮ್ಮನ್ನು ಬಳಸಿಕೊಳ್ಳಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ರಾಗಿದ್ದು ಯಾವಾಗ? ಎಲ್ಲಿ? ಚುನಾವಣಾ ಪ್ರಚಾರ ಸಭೆಗಳು ನಡೆಯುತ್ತವೆ ಎಂಬುದನ್ನು ಮೂರನೇ ವ್ಯಕ್ತಿಯಿಂದ ತಿಳಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದಲ್ಲದೆ, ತವರು ಜಿಲ್ಲೆ ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್‌ ಪರ ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ.ಕುಮಾರ ಸ್ವಾಮಿ ಅವರು ಸಮಾವೇಶ ನಡೆಸಿದರಾದರೂ ಅಲ್ಲಿಂದಲೂ ಇವರನ್ನು ಹೊರಗಿಡಲಾಗಿತ್ತು.

ಅಷ್ಟೇ ಅಲ್ಲದೇ ತಾವು ಚುನಾವಣಾ ರಾಜಕೀಯ ಆರಂಭಿಸಿ ಮೂರು ಬಾರಿ ಶಾಸಕರಾಗಿದ್ದ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಿಂದಲೂ ಹೊರಗಿಡ ಲಾಗಿತ್ತು. ನಂತರದ ದಿನಗಳಲ್ಲಿ ನಡೆದ ಕೆ.ಆರ್‌.ನಗರ ಪುರಸಭೆ ಚುನಾವಣೆಯಲ್ಲಿ ತಾವು ಶಿಫಾರಸು ಮಾಡಿದವರಿಗೆ ಟಿಕೆಟ್ ನೀಡದೆ, ಮುಖ್ಯಮಂತ್ರಿ ಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಪ್ತರು ಎಂಬ ಕಾರಣಕ್ಕೆ ಎಲ್ಲ ವಿಚಾರಗಳಲ್ಲೂ ಸಚಿವರಾಗಿದ್ದ ಸಾ.ರಾ.ಮಹೇಶ್‌ ಅವರಿಗೆ ಆದ್ಯತೆ ನೀಡುತ್ತಾ, ತಮ್ಮನ್ನು ಕಡೆಗಣಿಸಿದ್ದರಿಂದ ಕೆರಳಿದ್ದ ಎಚ್. ವಿಶ್ವನಾಥ್‌ ಸಂದರ್ಭಕ್ಕಾಗಿ ಕಾದು ಕುಳಿತಿದ್ದರು.

ದೇವಿ ದರ್ಶನ: ಎಚ್.ಡಿ.ದೇವೇಗೌಡರ ಮನವೊಲಿಕೆಗೆ ಬಗ್ಗದೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವುದಾಗಿ ಹೇಳಿದ್ದ ಎಚ್.ವಿಶ್ವನಾಥ್‌ ಅವರು ಜುಲೈ 1ರಂದು ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ (ಅತೃಪ್ತ ಶಾಸಕರಲ್ಲ) ಅಸ್ಸಾಂನ ಗುವಾಹಟಿ ತೆರಳಿ ತಂಗಿದ್ದರು.

ಜುಲೈ 2ರ ಮಂಗಳವಾರ ಅಮಾ ವಾಸ್ಯೆಯ ಗ್ರಹಣದ ದಿನ ಗುವಾಹಟಿಯ ನೀಲಾಚಲ ಬೆಟ್ಟದಲ್ಲಿ ನೆಲೆಸಿರುವ ಶಕ್ತಿ ದೇವತೆ ಕಾಮಾಕ್ಯ ದೇವಿಯ ದರ್ಶನ ಪಡೆದು, ದೇವಿಯ ಸನ್ನಿಧಿಯಲ್ಲಿ ನಿಂತು ಕುಮಾರಸ್ವಾಮಿ ಸರ್ಕಾರ ಕಿತ್ತೂಗೆಯುವ ಸಂಕಲ್ಪ ಮಾಡಿದವರು, ಅಲ್ಲಿಂದ ದೆಹಲಿಗೆ ತೆರಳಿ ಜು.3ರಂದು ಕರ್ನಾಟಕ ಭವನದಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿ ಕೊಂಡರು. ಜು.4ರಂದು ಬೆಂಗಳೂರಿಗೆ ಬಂದು ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದವರೇ ಮುಂಬೈ ವಿಮಾನ ಹತ್ತಿದರು. ಅದರೊಂದಿಗೆ ಆರಂಭವಾದ ಎಚ್. ಡಿ.ಕುಮಾರಸ್ವಾಮಿ ಸರ್ಕಾರದ ಪತನ ಪರ್ವ ಜು.2ರಂದು ಶಕ್ತಿದೇವತೆ ಕಾಮಾಕ್ಯ ದೇವಿಯ ಮುಂದೆ ಮಾಡಿದ ಸಂಕಲ್ಪದಂತೆ 21 ದಿನಗಳಲ್ಲಿ ಅದೂ ಕೂಡ ಮಂಗಳವಾರವೇ ಮೈತ್ರಿ ಸರ್ಕಾರ ಪತನವಾಯಿತು ಎನ್ನುತ್ತಾರೆ ಎಚ್. ವಿಶ್ವನಾಥ್‌ ಜತೆಗಿದ್ದವರು.

● ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

sadu

ಫಾ ಡು ಪ್ಲೆಸಿಸ್‌ಗೆ ಜೀವ ಬೆದರಿಕೆ! ದಶಕದ ಹಿಂದೆ ನಡೆದ ಘಟನೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಬಿನಿ ಜಲಾಶಯಕ್ಕೆ ಒಳಹರಿವು ಏರಿಕೆ

ಕಬಿನಿ ಜಲಾಶಯಕ್ಕೆ ಒಳಹರಿವು ಏರಿಕೆ

ಜಿಲ್ಲೆಗೆ ಇನ್ನೂ ಹೆಚ್ಚಿನ ಆಕ್ಸಿಜನ್‌ ಪೂರೈಸಿ

ಜಿಲ್ಲೆಗೆ ಇನ್ನೂ ಹೆಚ್ಚಿನ ಆಕ್ಸಿಜನ್‌ ಪೂರೈಸಿ

ನಿಂದಿಸಿ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸಬೇಡಿ

ನಿಂದಿಸಿ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸಬೇಡಿ

covid effect

ಕೋವಿಡ್ ಸೋಂಕು ನಿರ್ಮೂಲನೆಗೆ ಜಿಲ್ಲಾಡಳಿತಕ್ಕೆ ಹೆಗಲು ಕೊಟ್ಟ ಸಹೃದಯಿ ವೈದ್ಯರು

Get ready for a competitive test during lockdown

ಲಾಕ್‌ಡೌನ್‌ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ

MUST WATCH

udayavani youtube

ಉಡುಪಿ ಮಲ್ಲಿಗೆ ಬೆಳೆದು ಆದಾಯ ಗಳಿಸಿದ ಪುತ್ತೂರಿನ ಲೋಬೋ..!

udayavani youtube

ಮಳೆಗೆ ಉರುಳಿದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ..!

udayavani youtube

ಆಪತ್ಬಾಂಧವ ಆಟೋ ಡ್ರೈವರ್ – ಮಹೇಶ್ ಮಣಿಪಾಲ

udayavani youtube

ಕೊರೊನಾ ವಿಷಮ ಸ್ಥಿತಿ ಯಲ್ಲಿರುವ ಭಾರತಕ್ಕೆ “ಸಂಜೀವಿನಿ’

udayavani youtube

ಲಾಕ್​ಡೌನ್ ನಿಯಮ ಉಲ್ಲಂಘಿಸಿದ ಯುವಕರಿಗೆ ನಾಗಿಣಿ ಡ್ಯಾನ್ಸ್ ಶಿಕ್ಷೆ

ಹೊಸ ಸೇರ್ಪಡೆ

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

sadu

ಫಾ ಡು ಪ್ಲೆಸಿಸ್‌ಗೆ ಜೀವ ಬೆದರಿಕೆ! ದಶಕದ ಹಿಂದೆ ನಡೆದ ಘಟನೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.