ಕುಂಬಾರಿಕೆ ಕೌಶಲ್ಯ, ಮಣ್ಣಿನಲ್ಲಿ ಅರಳಿದ ಕಲಾಕೃತಿಗಳು

Team Udayavani, Apr 29, 2019, 3:00 AM IST

kumbarike

ತಿ.ನರಸೀಪುರ: ವೃತ್ತಿ ಯಾವುದೇ ಆದರೂ ಬದುಕು ರೂಪಿಸಿಕೊಳ್ಳುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇಲ್ಲೋರ್ವ ಕುಂಬಾರಿಕೆ ವೃತ್ತಿ ಕೈಗೊಂಡು ಆಕರ್ಷಕ ಮಣ್ಣಿನ ಕಲಾಕೃತಿಗಳನ್ನು ತಯಾರಿಸಿ ರಾಜ್ಯ, ಹೊರ ರಾಜ್ಯಗಳಲ್ಲಿ ತನ್ನದೇ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ತಾಲೂಕಿನ ಬನ್ನೂರು ಹೋಬಳಿ ದೊಡ್ಡಮುಲಗೂಡು ಗ್ರಾಮದ ಡಿ.ಗೋವಿಂದ ಅವರು ತಮ್ಮ ಅದ್ಭುತ ಕರ ಕುಶಲ ಕಲೆಯನ್ನು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೆಹಲಿ, ಗೋವಾ, ಚೆನ್ನೈ ಸೇರಿದಂತೆ ವಿವಿಧೆಡೆ ತಮ್ಮ ಕಲೆಯ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಿದ್ದಾರೆ.

ಬದುಕು ನಿರ್ವಹಣೆ: ತಮ್ಮ ಮನೆಯ ಹಿಂಭಾಗದ ಒಂದು ಸಣ್ಣ ಕೊಠಡಿಯಲ್ಲಿ ತಿರುಗುವ ಚಕ್ರದಲ್ಲಿ ಸಿಗುವ ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ತಯಾರಿಸಿ, ಅವುಗಳಿಗೆ ಬಣ್ಣ ಹಚ್ಚಿ ಸೌಂದರ್ಯದ ಕಳೆ ನೀಡಿ ಬಳಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನದ ಮೂಲಕ ಮಾರಾಟ ಮಾಡಿ ಬದುಕಿನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಬೆನ್ನೆಲುಬಾಗಿ ಇವರ ಪತ್ನಿ ಎಸ್‌.ಬಿ.ಶ್ರುತಿ ಸಹಕರಿಸುತ್ತಿದ್ದಾರೆ.

ಆಕರ್ಷಕ ಕಲಾಕೃತಿಗಳು: ಉತ್ತಮ ಕೌಶಲ್ಯದೊಂದಿಗೆ ಕುಂಬಾರಿಕೆಯನ್ನು ವೃತ್ತಿ ಮಾಡಿಕೊಂಡಿರುವ ಗೋವಿಂದ್‌ ದಂಪತಿ ಮಣ್ಣಿನ ಜಗ್‌, ಗಣಪತಿ, ಹೂವಿನ ಕುಂಡ, ಆಮೆಯ ಬಟ್ಟಲು, ಮಾಯ ದೀಪ(ಮ್ಯಾಜಿಕ್‌ ಲ್ಯಾಂಪ್‌) ಬುದ್ಧನ ವಿಗ್ರಹ, ತೊಟ್ಟಿಲು, ಬುಟ್ಟಿ ಗೋಡೆಗಳಿಗೆ ಬಳಸಬಹುದಾದ ವಿವಿಧ ಕಲಾಕೃತಿಗಳನ್ನು ತಯಾರಿಸುತ್ತಾರೆ.

ಕನಸುಗಳಿಗೊಂದು ರೆಕ್ಕೆ ಕಟ್ಟಿ ಬೇಸಿಗೆ ರಜೆಯ ವೇಳೆ ಹಲವಾರು ಮಕ್ಕಳಿಗೆ ಕರಕುಶಲ ತರಬೇತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಉದ್ಯಮ ಶೀಲ ತರಬೇತಿ ಕಾರ್ಯಾಗಾರಗಳಲ್ಲಿ ಕೂಡ ಭಾಗವಹಿಸಿ ಫ‌ಲಾನುಭಗಳಿಗೆ ಕರಕುಶಲ ತರಬೇತಿ ನೀಡುತ್ತಿದ್ದಾರೆ.

ಬದುಕಿಗೆ ತಿರುವು ಕೊಟ್ಟ ತರಬೇತಿ: ಸ್ವಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಓದಿನ ನಂತರ ರಾಮನಗರದ ಭಾವನ ಮನೆಗೆ ಉದ್ಯೋಗ ಹುಡುಕಲೆಂದು ಹೊರಟ ಗೋವಿಂದ ಅವರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಡೆಸುತ್ತಿದ್ದ 9 ತಿಂಗಳ ಕರಕುಶಲ ತರಬೇತಿಗೆ ಸೇರಿದರು. ತರಬೇತಿ ಪಡೆಯುತ್ತಿದ್ದ ವೇಳೆ ಅವರಲ್ಲಿ ಮೂಡಿದ ಆಸಕ್ತಿ ಅದೇ ಬದುಕಿನ ವೃತ್ತಿಯಾಗುವಂತೆ ಮಾಡಿತು. ಅಲ್ಲಿಯೇ ಕಲಾಕೃತಿಗಳ ತಯಾರಿಕೆಗೆ ಅವಕಾಶ ದೊರಕಿದ್ದರಿಂದ ಸಾಕಷ್ಟು ಕೆಲಸ ಕಲಿತಿದ್ದಾರೆ.

ರಾಮನಗರದ ಮಣ್ಣು: ರಾಮನಗರ ಮೂಲದಿಂದ ಮಣ್ಣು ತಂದು ಅದನ್ನು ಹದ ಮಾಡಿ ಆಕೃತಿಗಳನ್ನು ತಯಾರಿಸುತ್ತಾರೆ. ಇವರ ಪ್ರದರ್ಶನಕ್ಕೆ ಹಲವಾರು ಪ್ರಮಾಣ ಪತ್ರ ಲಭ್ಯವಾಗಿದ್ದರೂ ಕಲೆಯನ್ನು ನಂಬಿರುವ ಇವರಿಗೆ ಅಗತ್ಯ ಪೋ›ತ್ಸಾಹ ದೊರಕುತ್ತಿಲ್ಲ.

ಸುಮಾರು 25 ವರ್ಷಗಳ ಸೇವೆ ಇದ್ದರೂ ಯಾರು ನಮ್ಮ ಕಲೆ ಗುರುತಿಸಿ ಗೌರವಿಸುತ್ತಿಲ್ಲ ಎಂಬ ನೋವಿದೆ ಆದರೂ ಕಲೆಯು ತಮಗೆ ಆತ್ಮ ತೃಪ್ತಿ ನೀಡುತ್ತಿದೆ. ಒಂದಷ್ಟು ಮಂದಿಯಾದರೂ ನಮ್ಮ ಪ್ರತಿಭೆಯನ್ನು ಪೋ›ತ್ಸಾಸಿ ಕಲಾಕೃತಿಗ‌ಳನ್ನು ಖರೀದಿಸುತ್ತಿದ್ದಾರೆ. ನಾವು ಕಲಿತ ಹಾಗೆ ಹಲವರಿಗೆ ತರಬೇತಿ ನೀಡಿ ಇಂತಹ ವೃತ್ತಿಗಳು ಸಮಾಜದಿಂದ ಅಳಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎನ್ನುತ್ತಾರೆ ಗೋವಿಂದ್‌.

* ಎಸ್‌.ಬಿ. ಪ್ರಕಾಶ್‌

ಟಾಪ್ ನ್ಯೂಸ್

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.