ಪ್ರಸಾದ್‌ ಪರ ಪುತ್ರಿ, ಅಳಿಯ ಮತಯಾಚನೆ

Team Udayavani, Apr 13, 2019, 3:00 AM IST

ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಪರ ಅವರ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ ಹಾಗೂ ಅವರ ಹಿರಿಯ ಪುತ್ರಿ ಪ್ರತಿಮಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಮತಯಾಚಿಸಿದರು.

ಹರ್ಷವರ್ಧನ ಪ್ರಚಾರ: ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ತಾಂಡವಪುರ, ಹದಿನಾರು , ಬಿಳಗೆರೆ ,ಸುತ್ತೂರು, ಹೊಸಕೋಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಹರ್ಷವರ್ಧನ ತೆರಳಿ, ತಮ್ಮ ಮಾವ ಶ್ರೀನಿವಾಸ ಪ್ರಸಾದ್‌ಗೆ ಮತ ನೀಡುವಂತೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ಐದು ಬಾರಿ ಸಂಸದರಾಗಿ, ಶಾಸಕರಾಗಿ, ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯಾಗಿದ್ದಾರೆ. ಕ್ಷೇತ್ರದಾದ್ಯಂತ ಚಿರ ಪರಿಚಿರತರಾಗಿರುವ ಪ್ರಸಾದರ ಪ್ರಾಮಾಣಿಕತೆ ಬೇರೆಯವರಿಗೆ ಮಾದರಿಯಾಗಿದೆ. ಅವರ ರಾಜಕೀಯ ಹಿರಿತನಕ್ಕೆ ಪ್ರಾಮಾಣಿಕತೆಗೆ ನೀವೆಲ್ಲ ಮತ ನೀಡಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯವಾಗಿದೆ. ಮೊದಲು ಅಂಬೇಡ್ಕರ್‌ ನಂತರ ಬಸವಲಿಂಗಪ್ಪ, ಕೊನೆಗೆ ಶ್ರೀನಿವಾಸ ಪ್ರಸಾದ್‌ ಸೇರಿದಂತೆ ಎಲ್ಲಾ ದಲಿತರಿಗೂ ಕಾಂಗ್ರೆಸ್‌ ಅನ್ಯಾಯ ಹಾಗೂ ಅವಮಾನ ಮಾಡಿದೆ ಎಂದು ದೂರಿದರು.

ಆರ್‌.ಧ್ರುವನಾರಾಯಣ ಸ್ವಾರ್ಥ ಹಾಗೂ ಅವಕಾಶವಾದಿ ರಾಜಕಾರಣಿಯಾಗಿದ್ದಾರೆ. ಒಬ್ಬರ ಮೇಲೆ ಮತ್ತೂಬ್ಬರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರು ಎಂದಿಗೂ ದಲಿತರ ಪರ ನಿಂತಿಲ್ಲ, ನಿಲ್ಲುವುದೂ ಇಲ್ಲ. ಈ ಬಾರಿ ಮತದಾರರು ಅವರನ್ನು ಸೋಲಿಸಿ ಪ್ರಪ್ರಥಮ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂದು ಕೋರಿದರು.

ಪುತ್ರಿ ಪ್ರತಿಮಾ ಪ್ರಚಾರ: ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್‌ ಅವರ ಹಿರಿಯ ಪುತ್ರಿ ಪ್ರತಿಮಾ ಚುನಾವಣಾ ಪ್ರಚಾರ ನಡೆಸಿದರು. ಪ್ರತಿ ಮನೆ ಮನೆಗೂ ತೆರಳಿ ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅವರು, 20 ವರ್ಷಗಳ ಬಳಿಕ ಲೋಕಸಭೆಗೆ ಸ್ಪರ್ಧಿಸಿರುವ ತಮ್ಮ ತಂದೆಯನ್ನು ಈ ಬಾರಿ ಸಂಸತ್‌ಗೆ ಕಳುಹಿಸಬೇಕು. ದೇಶಕ್ಕೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಿದ್ದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು.

ಈ ವೇಳೆ ಮುಖಂಡರಾದ ಕಾಪು ಸಿದ್ಧಲಿಂಗಸ್ವಾಮಿ, ಜಿಪಂ ಸದಸ್ಯ ಗುರುಸ್ವಾಮಿ, ಸದಾನಂದ, ತಾಪಂ ಅಧ್ಯಕ್ಷ ಬಿ ಮಹದೇವಪ್ಪ, ವರುಣಾ ಕ್ಷೇತ್ರದ ಅಧ್ಯಕ್ಷ ಶಿವಯ್ಯ, ಮುಖಂಡರಾದ ಮಾಂಬಳ್ಳಿ ಮೂರ್ತಿ, ತಾಂಡವಪುರ ಸಂದೀಪ್‌, ಸುತ್ತೂರು ಚಿಕ್ಕಮಾದಪ್ಪ, ತಾಪಂ ಸದಸ್ಯ ಸತೀಶ್‌ ಇತರರಿದ್ದರು.

ಪ್ರಸಾದ್‌ ಕುಟುಂಬದಿಂದ ಮತಬೇಟೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್‌ ಪ್ರಸಾದ್‌ ಅವರ ನಾಲ್ಕು ದಶಕಗಳ ರಾಜಕೀಯವ ಜೀವನದಲ್ಲಿ ಎಂದಿಗೂ ಅವರ ಪುತ್ರಿಯರು ಹಾಗೂ ಸಂಬಂಧಿಕರು ಭಾಗಿಯಾಗಿರಲಿಲ್ಲ.

ಆದರೆ, ಈ ಬಾರಿ ಅವರ ಮೂವರು ಪುತ್ರಿಯರು, ಅಳಿಯಂದರು ಹಾಗೂ ಹತ್ತಿರದ ಸಂಬಂಧಿಕರು ಉರಿ ಬಿಸಿಲನ್ನು ಲೆಕ್ಕಿಸದೇ ಹಳ್ಳಿಗಳನ್ನು ಸುತ್ತುತ್ತಾ ಮತಬೇಟಿಗೆ ಇಳಿದಿದ್ದಾರೆ. ಪ್ರಸಾದ್‌ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ್‌, ಮತ್ತೂಬ್ಬ ಅಳಿಯ ಡಾ|ಮೋಹನ್‌, ಹಿರಿಯ ಪುತ್ರಿ ಪ್ರತಿಮಾ ಸೇರಿದಂತೆ ಸಂಬಂಧಿಕರು ಕ್ಷೇತ್ರ ವ್ಯಾಪ್ತಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ