ಚಂದನ್, ನಿವೇದಿತಾಗೆ ದೇವಿ ಆರು ತಿಂಗಳಲ್ಲಿ ಶಿಕ್ಷೆ ನೀಡುತ್ತಾಳೆ: ವಿ. ಸೋಮಣ್ಣ ಕೆಂಡಾಮಂಡಲ
Team Udayavani, Oct 5, 2019, 11:05 AM IST
ಮೈಸೂರು: ಗಾಯಕ ಚಂದನ್ ಶೆಟ್ಟಿ ಅವರು ಶುಕ್ರವಾರ ರಾತ್ರಿ ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿರುವ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣಇದರಿಂದ ಕೆಂಡಾಮಂಡಲವಾಗಿದ್ದುಇದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಚಂದನ್ ಮತ್ತು ನಿವೇದಿತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸೋಮಣ್ಣ, ಯುವ ದಸರಾ ವೇದಿಕೆ ಚಾಮುಂಡಿಶ್ವರಿಯ ದೇವರ ಸನ್ನಿಧಿ. ಆ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ. ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದಿದ್ದಾರೆ.
ಇವರು ಕನ್ನಡದವರು ಸಂಸ್ಕ್ರತಿ ಗೊತ್ತಿರುವವರು ಅಂದುಕೊಂಡಿದ್ದೆ. ಆದರೆ ಇವರಿಗೆ ಸಂಸ್ಕ್ರತಿ ಇಲ್ಲ. ಇವರ ವಿರುದ್ದ ಕಾನೂನು ಕ್ರಮಕ್ಕೆ ಪೋಲಿಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಕಾರಣ ಕೇಳಿ ನೋಟಿಸ್ ನೀಡುವುದಕ್ಕೆ ಎಸ್ಪಿಗೂ ಡೈರೈಕ್ಷನ್ ಮಾಡಿದ್ದೇನೆ. ಇದು ಯುವ ದಸರಾ ಉಪಸಮಿತಿಯ ತಪ್ಪಲ್ಲ. ಅವರೇ ಮಾಡಿಕೊಂಡಿರುವ ಯಡವಟ್ಟು. ಎಷ್ಟೇ ದೊಡ್ಡವರಾದ್ರೂ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯೇಂದ್ರ ಮುಂದೇನು? ಶುರುವಾಗಿದೆ ಲೆಕ್ಕಾಚಾರ ,ಸಿಗಲಿದೆಯೇ ಪ್ರ.ಕಾರ್ಯದರ್ಶಿ ಹುದ್ದೆ ?
ತೆರೆದ ಪುಸ್ತಕ ಪರೀಕ್ಷೆಗೆ ಮರುಜೀವ; ಈ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕವಾಗಿ ಜಾರಿ
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ