ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಪ್ರತಿಭಟನೆ


Team Udayavani, Aug 2, 2017, 11:51 AM IST

mys3.jpg

ನಂಜನಗೂಡು: ರಾಜ್ಯದ ಕೃಷಿಕರ ನಾಲೆಗೆ ನೀರು ಬಿಡದೆ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ತಾಲೂಕಿನ ರೈತ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಹರಿಯುತ್ತಿರುವ ಕಪಿಲೆಯ ದೇವರಾಜು ಅರಸು ಸೇತುವೆಯ ಮೇಲೆ ಮಂಗಳವಾರ ಜಮಾಯಿಸಿದ ರೈತ ಸಮೂಹ ನೀರು ನಿಲ್ಲಿಸಿ ಅದೇ ನೀರನ್ನು ನಾಲೆಗಳಲ್ಲಿ ಹರಿಸಿ ಎಂದು ಆಗ್ರಹಿಸಿ ನಾಲ್ಕು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ರೈತರನ್ನು ಸಮಾಧಾನಿಸಿಲು ಬಂದು ಅಧಿಕಾರಿಗಳಿಗೆ  ಛೀಮಾರಿ ಹಾಕಿದ ಕೃಷಿಕರು ನಿಮ್ಮ ಸಬೂಬಿನ ಒಣ ಮಾತು ಬೇಡ ನಮಗೆ ನೀರು ಕೊಡಿ ಎಂದರು. ಕಳೆದ ವಾರ ತಾಲೂಕಿನ ಹುಲ್ಲಹಳ್ಳಿ ರಾಂಪುರ ನಾಲೆಗಳಲ್ಲಿ ನೀರು ಬಿಡುತ್ತೆವೆ ಎಂಬ ನಿಮ್ಮ ಮಾತು ಏನಾಯಿತು ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದು, ನಾಲೆಯಲ್ಲಿ ಬಿಟ್ಟ ನೀರು ಕೆಲವೇ ಗಂಟೆಗಳಲ್ಲಿ ನಿಂತು ಹೊಗಿರುವುದು ಏಕೆ? ಜಲಾಶಯದ ನೀರೆ ಬರಿದಾಯಿತೆ ಎಂದು ಕಿಡಿಕಾರಿದರು.

ಎಂದಿನಂತೆ ಒಂದೆರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ರೈತರು ವಾಪಸಾಗುತ್ತಾರೆ ಎಂದು ಕೊಂಡಿದ್ದ ಅಧಿಕಾರಿಗಳ ನಂಬಿಕೆಯನ್ನು ಈ ಬಾರಿ ಹುಸಿ ಮಾಡಿದ ರೈತ ಸಮೂಹದ ಪ್ರತಿಭಟನೆ ನಾಲ್ಕು ತಾಸಿಗೂ ಹೆಚ್ಚು ನಡೆದು ಅದರ ಅಂತ್ಯ ಕಾಣದಿದ್ದಾಗ ಪೊಲೀಸರು ಪ್ರತಿಭಟನಾ ನಿರತ ರೈತರನ್ನು  ಬಂಧಿಸಿದರು.

ತಗಡೂರು ಜಿಪಂ ಸದಸ್ಯ ಸದಾನಂದ, ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್‌, ಅಶ್ವಥ್‌ ನಾರಾಯಣರಾಜೇ ಅರಸ್‌, ಶಿರಮಳ್ಳಿ ಸಿದ್ದಪ್ಪ, ಹೊಸಕೋಟೆ ಬಸವರಾಜು, ಸತೀಶ್‌ರಾವ್‌, ಬಂಗಾರಸ್ವಾಮಿ, ಗುರುಲಿಂಗೇಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ರೈತರನ್ನು ಬಂಧಿಸಿ ಮೈಸೂರಿನ ಮೀಸಲು ಸಶಸ್ತ್ರ ಪಡೆಗೆ ರವಾನಿಸಲಾಯಿತು. 

ರಸ್ತೆ ಸಂಚಾರ ಅಸ್ತವ್ಯಸ್ತ: 4 ಗಂಟೆಗಳಿಗೂ ಹೆಚ್ಚು ಕಾಲ ಮೈಸೂರು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಸಂಚಾರವು ಸ್ಥಗಿತಗೊಂಡ ಹಿನ್ನೆಲೆ ಪ್ರಯಾಣಿಕರು ವಾಹನ ಸವಾರರು ತೀವ್ರ ಪರದಾಡುವಂತಾಯಿತು.

ಪ್ರತಿಭಟನೆಯಲ್ಲಿ ಹೊಸಕೋಟೆ ಬಸವಾರಾಜು, ರೈತ ಸಂಘದ ಅಧ್ಯಕ್ಷ ವಿದ್ಯಾ ಸಾಗರ್‌, ಬಂಗಾರಸ್ವಾಮಿ, ಗುರುಲಿಂಗೇಗೌಡ, ಶಿರಮಳ್ಳಿ ಸಿದ್ದಪ್ಪ, ಜಿಪಂ ಸದಸ್ಯ ಸದಾನಂದ, ಮಹದೇವಸ್ವಾಮಿ, ಕರವೇ ಶಿವರಾಮೇಗೌಡ ಬಣದ ಅಧ್ಯಕ್ಷ ರವಿಕುಮಾರ್‌ಗೌಡ, ದಸಂಸ ಜಿಲ್ಲಾ ಸಂಚಾಲಕ ಶಿರಮಳ್ಳಿ ಸಿದ್ದಪ್ಪ, ಬಿಎಸ್ಪಿ ತಾಲೂಕು ಅಧ್ಯಕ್ಷ ಶ್ರೀಕಂಠ, ಬೊಕ್ಕಳ್ಳಿ ನಂಜುಂಡಸ್ವಾಮಿ, ಅಂಬಳೆ ಮಹದೇವಸ್ವಾಮಿ ಮಹೇಶ್‌, ಶ್ರೀಧರ್‌, ಮಾದಪ್ಪ, ವೆಂಕಟೇಗೌಡ, ಶಿವರಾಜು, ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ರೈತರು ಇದ್ದರು.

ಟಾಪ್ ನ್ಯೂಸ್

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ $1 ಟ್ರಿಲಿಯನ್ ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ ಹೇಳಿಕೆ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

mugilpete

ಸಂಬಂಧಗಳ ಸುತ್ತ ಮುಗಿಲ್‌ಪೇಟೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

ಹುಣಸೂರಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಹುಣಸೂರಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

1-rrr

ಸೋಲಿಸಿದವನ ಬಳಿಯೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

20lake

ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ $1 ಟ್ರಿಲಿಯನ್ ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

19election

ಉಪ ಚುನಾವಣೆ: ಸುಗಮ ಮತದಾನಕ್ಕೆ ಸಕಲ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.