ಜಿಲ್ಲೆಗೆ ಇನ್ನೂ ಹೆಚ್ಚಿನ ಆಕ್ಸಿಜನ್ ಪೂರೈಸಿ
Team Udayavani, May 18, 2021, 1:20 PM IST
ಮೈಸೂರು: ಜಿಲ್ಲೆಯಲ್ಲಿ 3,500 ಆಮ್ಲಜನಕಯುಕ್ತ ಹಾಸಿಗೆಗಳಿದ್ದು, ಪ್ರಸ್ತುತ46ಕೆ.ಎಲ್. ಆಕ್ಸಿಜನ್ ಮಾತ್ರ ಬರುತ್ತಿದೆ. ಆಕ್ಸಿಜನ್ ಬೇಡಿಕೆ ಪೂರೈಸಲು ಜಿಲ್ಲೆಗೆ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿತರಿಗೆ ಆರಂಭದಲ್ಲೇ ಚಿಕಿತ್ಸೆ ನೀಡಿ ಗುಣಪಡಿಸುವ ಉದ್ದೇಶದಿಂದ ಕೋವಿಡ್ ಮಿತ್ರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳ ಮೂಲಕ10 ಸಾವಿರಕ್ಕೂ ಹೆಚ್ಚು ಜನರಿಗೆ ಟ್ರಯೇಜ್ ಮಾಡಲಾಗಿದೆ ಎಂದು ಹೇಳಿದರು.
ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಜಿಲ್ಲೆಯ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಮಿತ್ರವನ್ನು ತೆರೆಯಲಾಗಿದೆ. ಮೊದ ಮೊದಲು ನಗರ ಪ್ರದೇಶಗಳಲ್ಲಿ ಶೇ. 90ರಷ್ಟು ಕೋವಿಡ್ ಪ್ರಕರಣಗಳು ಹಾಗೂ ಶೇ.10 ರಷ್ಟು ಕೋವಿಡ್ ಪ್ರಕರಣಗಳು ತಾಲೂಕುಗಳಲ್ಲಿ ದಾಖಲಾಗುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದ್ದು, ಶೇ.50ರಷ್ಟು ಕೋವಿಡ್ ಪ್ರಕರಣಗಳು ನಗರ ಪ್ರದೇಶಗಳಲ್ಲಿ ಬರುತ್ತಿದ್ದರೆ ಶೇ.50 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಪಂ ಸಿಇಒ ಎ.ಎಂ.ಯೋಗೀಶ್, ಎಸ್ಪಿ ಸಿ.ಬಿ.ರಿಷ್ಯಂತ್, ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ನಂಜರಾಜ್ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?
ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್
ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ
ಚಾಮುಂಡಿ ಬೆಟ್ಟದಲ್ಲಿರುವವರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ; ಸ್ಪಷ್ಟನೆ
ಹುಣಸೂರು ತಾಲೂಕಿನಲ್ಲಿ ಭಾರಿ ಮಳೆ: ಎರಡು ಮನೆ ಸಂಪೂರ್ಣ ಹಾನಿ
MUST WATCH
ಹೊಸ ಸೇರ್ಪಡೆ
ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?
ನವದೆಹಲಿ: 12 ನೇ ತರಗತಿ ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಇರಿದ ಯುವಕ
ಶ್ರೀನಗರದ ಶೂರ್ಯಾರ್ ಮಂದಿರದಲ್ಲಿ ರಾಮಾನುಜರ ಪ್ರತಿಮೆ ಅನಾವರಣ
ಉನ್ನತ ಅಧಿಕಾರಿಗಿಂತ ರೈತ ಆಗುವುದು ಶ್ರೇಷ್ಠ; ನಳಿನಾಕ್ಷಿ
ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ: ಹಾನಿಗೆ 50 ಸಾವಿರ; ಆರ್ ಅಶೊಕ್