ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ
Team Udayavani, Aug 3, 2019, 3:00 AM IST
ಮೈಸೂರು: ಉತ್ತಮ ಸಮಾಜ ಕಟ್ಟುವಲ್ಲಿ ವಕೀಲರ ಪಾತ್ರವು ಪ್ರಮುಖವಾಗಿದ್ದು, ಸದೃಢ ಸಮಾಜ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಈಶ್ವರ್ ಭಟ್ ಸಲಹೆ ನೀಡಿದರು. ಕುವೆಂಪುನಗರದಲ್ಲಿರುವ ಜೆಎಸ್ಎಸ್ ಕಾನೂನು ಕಾಲೇಜಿನ ರಜತ ಮಹೊತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯ ಕೇಳಿ ಬರುವ ಜನರಿಗೆ ನ್ಯಾಯ ದೊರಕಿಸಿಕೊಟ್ಟು ನಂಬಿಕೆ ಉಳಿಸಿಕೊಳ್ಳಬೇಕು. ಹಣಕ್ಕಾಗಿ ಕಾರ್ಯನಿರ್ವಹಿಸದೆ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಬೇಕು. ಎಂಜಿನಿಯರ್ಗಳು ಯಾವ ರೀತಿ ಸುಂದರ ಕಟ್ಟಡವನ್ನು ನಿರ್ಮಿಸುವರೋ ಹಾಗೇ, ಸದೃಢ ಸಮಾಜ ನಿರ್ಮಾಣಕ್ಕೆ ವಕೀಲರು ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ಕಾನೂನು ಶಾಸ್ತ್ರದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಅರ್ಥಿಕ ವಿಷಯಗಳನ್ನು ಹೆಚ್ಚು ತಿಳಿಯಬೇಕು. ಅಲ್ಲದೇ, ಪ್ರಾದೇಶಿಕ ಭಾಷೆಯಲ್ಲಿನ ಸೂಕ್ಷ್ಮತೆ ಅರಿಯುವುದರ ಜೊತೆಗೆ ರಾಷ್ಟ್ರೀಯ ಭಾಷೆಯನ್ನು ಕಲಿಯಬೇಕು. ಇದರಿಂದ ಕಾನೂನಿನ ಬಗ್ಗೆ ವ್ಯಾಪಕವಾದ ಮಾಹಿತಿ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ವಿ.ಚಂದ್ರಶೇಖರ್ ಮಾತನಾಡಿ, ಕಾನೂನು ನಿಂತಿರುವುದೇ ಸಂವಿಧಾನದ ಮೇಲೆ. ಆದ್ದರಿಂದ ಕಾನೂನು ಸೇವೆ ಮಾಡಲು ಇಚ್ಛಿಸುವವರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸಬೇಕು. ಸಂವಿಧಾನದ ಆಶಯಗಳನ್ನು ತಿಳಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲ ಡಾ.ಎಸ್.ನಟರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಂಬಾಕು ಮಂಡಳಿ ನೀಡಿದ್ದು ರಸಗೊಬ್ಬರ, ಚೀಲದಲ್ಲಿ ಸಿಕ್ಕಿದ್ದು ರಂಗೂಲಿಪುಡಿ: ಆತಂಕದಲ್ಲಿ ರೈತರು
ಎನ್ಇಪಿನಲ್ಲಿ ಕೌಶಲ, ಜ್ಞಾನ ಸಂಪಾದನೆಗೆ ಒತ್ತು; ಸಚಿವ ಬಿ.ಸಿ.ನಾಗೇಶ್
ತಾಂಬೂಲ ಪ್ರಶ್ನೆಗಿಂತ ಹೆಚ್ಚಿನ ತೀರ್ಮಾನ ಕೇಶವ ಕೃಪಾದಲ್ಲಿ: ಹೆಚ್ ಡಿಕೆ
ಮತದಾರರ ನೋಂದಣಿಯಲ್ಲಿ ಬೋಗಸ್: ಲಕ್ಷ್ಮಣ್
ಜಿ.ಟಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿದ್ದರಾಮಯ್ಯ
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಈಡನ್ನಲ್ಲಿ ಆರ್ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್ ಜೈಂಟ್ಸ್
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ
ರಾಜ್ಯದಲ್ಲಿ ಕಾಂಗ್ರೆಸ್ “ಚಿಂತನ ಶಿಬಿರ’: ಕೆಪಿಸಿಸಿ ಸಮಿತಿ ರಚನೆ