Udayavni Special

ಪುಟ್ಟಣ್ಣ ಕಣಗಾಲ್‌ರ ಚಿತ್ರಗಳ ಗೀತ ಗಾಯನ ಸ್ಪರ್ಧೆ


Team Udayavani, Dec 3, 2018, 11:14 AM IST

m1-putanna.jpg

ಮೈಸೂರು: ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ 85ನೇ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ನಗರದಲ್ಲಿ ನಡೆಸಲಾಗಿತ್ತು. 

ಪಿರಿಯಾಪಟ್ಟಣದ ಪುಟ್ಟಣಕಣಗಾಲ್‌ ವೇದಿಕೆ ವತಿಯಿಂದ ನಗರದ ಶ್ರೀರಾಜೇಂದ್ರ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ, ಮೈಸೂರಿನ ಶಾಂಬ ಮೂರ್ತಿ ಪ್ರಥಮ ಬಹುಮಾನ ಪಡೆದರು. ಕೆ.ಆರ್‌.ನಗರದ ಎಚ್‌.ರûಾ ರಾವ್‌ ದ್ವಿತೀಯ ಮತ್ತು ಮೈಸೂರಿನ ಆರ್‌.ಸಹನ ತೃತೀಯ ಬಹುಮಾನಗಳನ್ನು ಪಡೆದರು.

ಇವರೊಂದಿಗೆ ಯಾಚೇನಹಳ್ಳಿಯ ಲಕ್ಷ್ಮಮ್ಮ, ಮೈಸೂರಿನ ಜಿ.ಗೋವಿಂದ್‌, ಪೂರ್ಣಿಮಾ ಹರೀಶ್‌, ಶ್ರೀರಂಗಪಟ್ಟಣದ ಪಿ.ಎನ್‌.ಶ್ರುತಿ, ಜಯಲಕ್ಷಿನಾಯ್ಡು, ಎಸ್‌.ವಿ.ನಾಗರಾಜ್‌, ಎನ್‌.ಸುಪ್ರಿಯಾ ಅವರು ಸಮಾಧಾನಕರ ಬಹುಮಾನ ಪಡೆದರು. ವಿಜೇತರಿಗೆ ನಟರಾಜ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದಾ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಭಾರತೀಯ ಚಿತ್ರರಂಗದಲ್ಲಿ ಕನ್ನಡವನ್ನು ಮೆರೆಸಿದ ಕೀರ್ತಿ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್‌ ಅವರಿಗೆ ಸಲ್ಲುತ್ತದೆ. ನಿರ್ದೇಶಕರಷ್ಟೇ ಅಲ್ಲದೇ ಸಿನಿಮಾದ ಎಲ್ಲ ವಿಭಾಗಗಳಲ್ಲೂ ಪರಿಣಿತಿ ಹೊಂದಿದ್ದ ಏಕೈಕ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರಾಗಿದ್ದರು.

ಇಂದು ಅರ್ಹರಲ್ಲದವರು ಪ್ರಶಸ್ತಿಗಳು ಲಭಿಸುತ್ತಿದ್ದು, ಯಾವುದೇ ನಿರೀಕ್ಷೆ ಇಲ್ಲದೆ ಕನ್ನಡದ ಕೆಲಸ ಮಾಡುವ ಅರ್ಹರಿಗೆ ಪ್ರಶಸ್ತಿಗಳು ಸಿಗುವಂತಾಗಬೇಕು ಎಂದರು. ನಿವೃತ್ತ ಪ್ರಾಂಶುಪಾಲ ಜಯಪ್ರಕಾಶ್‌, ಸಾಹಿತಿ ಡಾ.ಹುಲಿವಾನ ನರಸಿಂಹಸ್ವಾಮಿ, ನಾದಸಂಗಮ ಸುಗಮ ಸಂಗೀತ ಸಂಸ್ಥೆ ಕೆ.ಆರ್‌.ಮಂಜುಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಇದಕ್ಕೂ ಮುನ್ನ ಪುಟ್ಟಣ್ಣ ಕಣಗಾಲ್‌ ಅವರ ಸಹೋದರ ಎಸ್‌.ಆರ್‌.ನರಸಿಂಹಯ್ಯ ಕಣಗಾಲ್‌ ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉದ್ಯಾನವನ ಸಂರಕ್ಷಕ ಮರಿಯಪ್ಪ, ವೇದಿಕೆ ಅಧ್ಯಕ್ಷ ಕಂಪ್ಲಾಪುರ ಮೋಹನ್‌ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

vhfghftght

ಕೋವಿಡ್: ರಾಜ್ಯದಲ್ಲಿಂದು 310 ಹೊಸ ಪ್ರಕರಣ ಪತ್ತೆ | 347 ಸೋಂಕಿತರು ಗುಣಮುಖ 





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mysore news

ತಿರಸ್ಕರಿಸಿದ ಹಾಲನ್ನು ಏನ್‌ ಮಾಡಲಿ?

ಹುಣಸೂರು: ನಗರಸಭೆ ನೂತನ ಅಧ್ಯಕ್ಷೆ ಸೌರಭ ಸಿದ್ದರಾಜು ಅಧಿಕಾರ ಸ್ವೀಕಾರ

ಹುಣಸೂರು: ನಗರಸಭೆ ನೂತನ ಅಧ್ಯಕ್ಷೆ ಸೌರಭ ಸಿದ್ದರಾಜು ಅಧಿಕಾರ ಸ್ವೀಕಾರ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

Untitled-1

ಮಾಹಿತಿ ನೀಡಲು ವಿಫಲವಾದ ಹುಣಸೂರು ನಗರಸಭೆ ಅಧಿಕಾರಿಗೆ ಎರಡನೇ ಬಾರಿಗೆ 5 ಸಾವಿರ ರೂ ದಂಡ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

fhfcghftyt

ಕೆಟ್ಟು ನಿಂತ ಆಂಬ್ಯುಲೆನ್ಸ್‌  | ಮೈಮರೆತ ಕಿಮ್ಸ್‌  

Dr. Death of Geeta no more

ಖ್ಯಾತ ಪ್ರಸೂತಿ ತಜ್ಞೆ ಡಾ. ಗೀತಾ ಮುರಳೀಧರ ನಿಧನ

bhatkala news

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.