Udayavni Special

ತಂಬಾಕು ಬೆಲೆ ದಿಢೀರ್‌ ಕುಸಿತ: ರೈತರಿಂದ ಪ್ರತಿಭಟನೆ


Team Udayavani, Nov 7, 2019, 3:00 AM IST

tambaku-bele

ಪಿರಿಯಾಪಟ್ಟಣ: ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ದಿಢೀರ್‌ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಹರಾಜು ಪ್ರಕ್ರಿಯೆ ತಡೆದು ಪ್ರತಿಭಟಿಸಿದರು. ತಾಲೂಕಿನ ಕಗ್ಗುಂಡಿಯ ತಂಬಾಕು ಮಾರಾಟ ಕೇಂದ್ರ ಪ್ಲಾಟ್‌ ಫಾಂ ನಂ.04, 05, 06 ರಲ್ಲಿ ರೈತರ ತಂಬಾಕಿಗೆ ನಿರ್ದಿಷ್ಟ ಮೊತ್ತ ಬೆಲೆ ನೀಡದೆ ತಂಬಾಕು ಖರೀದಿ ಕಂಪನಿಗಳು ಹರಾಜು ಪ್ರಕ್ರಿಯೆಯನ್ನು ಯಥಾ ಪ್ರಕಾರ ಮುಂದುವರಿಸಿದರು.

ಇದನ್ನು ಮನಗಂಡ ರೈತರು, ಬುಧವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ತಂಬಾಕಿನಲ್ಲಿ ಬೆಲೆಯಲ್ಲಿ 20 ರಿಂದ 30 ರೂ.,ಗಳ ಕುಸಿತ ಕಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಹರಾಜು ಕಂಪನಿ ಮತ್ತು ಅಧೀಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾರುಕಟ್ಟೆ ಬಾಗಿಲು ಮುಚ್ಚಿಸಿ ಮಾತನಾಡಿದ ರೈತರು, ಮಾರುಕಟ್ಟೆಯಲ್ಲಿ ರೈತರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ.

ರೈತರ ತಂಬಾಕನ್ನು ಖರೀದಿ ಮಾಡಿದ ನಂತರ ಇಲ್ಲಿನ ನೌಕರರು ಬೇಲುಗಳನ್ನು ಕಂಪನಿಗಳಿಗೆ ಸಾಗಿಸಲು ಪ್ರತಿ ಬೇಲಿಗೆ ತಲಾ 500 ರಿಂದ 1000 ರೂ.,ಗೆ ಬೇಡಿಕೆ ಇಡುತ್ತಿದ್ದಾರೆ. ಕೆಲವು ಪ್ಲಾಟ್‌ ಫಾಂಗಳಲ್ಲಿ ಐಟಿಐ ಕಂಪನಿ ಖರೀದಿ ಮಾಡಿದ ಬೇಲುಗಳನ್ನು ಕಂಪನಿ ಪರೀಕ್ಷಕ ಕಡಿಮೆ ಗುಣಮಟ್ಟದ ತಂಬಾಕು ಎಂದು ಹಿರಿಯ ಅಧಿಕಾರಿಗೆ ಗಮನಕ್ಕೆ ತರುತ್ತಿರುವುದರಿಂದ ತಂಬಾಕು ಬೆಲೆ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದರು.

ಪೊಲೀಸ್‌ ಉಪ ನಿರೀಕ್ಷಕ ಗಣೇಶ್‌ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಿ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕರನ್ನು ಸ್ಥಳಕ್ಕೆ ಬರುವಂತೆ ಕರೆ ಮಾಡಿ ಪರಿಸ್ಥತಿ ನಿಯಂತ್ರಿಸಿದರು. ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ತಲಪ ಸಾಯಿ ಮಾತನಾಡಿ, ನೆರೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಳದರ್ಜೆ ತಂಬಾಕು ಉತ್ಪತ್ತಿಯಾಗುತ್ತಿದ್ದು, ಇದರ ಪರಿಣಾಮದಿಂದ ಇಲ್ಲಿನ ರೈತರ ತಂಬಾಕಿಗೆ ಕಡಿಮೆ ಬೆಲೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಂಪನಿ ಮತ್ತು ಮಂಡಳಿ ಜೊತೆ ಚರ್ಚಿಸಿ ಸೂಕ್ತ ಬೆಲೆ ನೀಡುವ ಭರವಸೆ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 19 ಕಾಟದ ನಡುವೆ ಉಗ್ರ ಸಂಚು

ಕೋವಿಡ್ 19 ಕಾಟದ ನಡುವೆ ಉಗ್ರ ಸಂಚು

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ದ್ವಿಶತಕದತ್ತ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ

ದ್ವಿಶತಕದತ್ತ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಹೆಚ್ಚಾದ ಹೋಂಕ್ವಾರಂಟೈನ್‌ ಸಂಖ್ಯೆ

ಮತ್ತೆ ಹೆಚ್ಚಾದ ಹೋಂಕ್ವಾರಂಟೈನ್‌ ಸಂಖ್ಯೆ

mysuru-tdy-1

ಅಲೆಮಾರಿಗಳ ತಪಾಸಣೆ

18 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುವ ಅನಿವಾರ್ಯತೆ

ಹತೋಟಿಗೆ ಬರುತ್ತಿಲ್ಲ ಸೋಂಕು: 18 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುವ ಅನಿವಾರ್ಯತೆ

mysuru-tdy-3

ಪರಿಹಾರ ನಿಧಿಗೆ ಸದಸ್ಯರು ಹಣ ಪಾವತಿ

mysuru-tdy-2

ಅನವಶ್ಯಕ ತಿರುಗಾಡುತ್ತಿದ್ದ 200ಕ್ಕೂ ಹೆಚ್ಚು ವಾಹನ ವಶ

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ

ಕೋವಿಡ್ 19 ಕಾಟದ ನಡುವೆ ಉಗ್ರ ಸಂಚು

ಕೋವಿಡ್ 19 ಕಾಟದ ನಡುವೆ ಉಗ್ರ ಸಂಚು

ರುದ್ರಭೂಮಿ ಕಾರ್ಮಿಕನಿಂದ ಪಿಎಂ ನಿಧಿಗೆ ದೇಣಿಗೆ!

ರುದ್ರಭೂಮಿ ಕಾರ್ಮಿಕನಿಂದ ಪಿಎಂ ನಿಧಿಗೆ ದೇಣಿಗೆ!

ಸರಕು ವಾಹನಕ್ಕೆ ರಾಜ್ಯದೊಳಗೆ ಪಾಸ್‌ ಬೇಡ

ಸರಕು ವಾಹನಕ್ಕೆ ರಾಜ್ಯದೊಳಗೆ ಪಾಸ್‌ ಬೇಡ

ವಿಂಬಲ್ಡನ್‌ ರದ್ದು : ಕ್ಲಬ್‌ಗ 100 ಮಿ. ಡಾಲರ್‌ ವಿಮಾ ಹಣ

ವಿಂಬಲ್ಡನ್‌ ರದ್ದು : ಕ್ಲಬ್‌ಗ 100 ಮಿ. ಡಾಲರ್‌ ವಿಮಾ ಹಣ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ