Udayavni Special

ನಾಯಕತ್ವಕ್ಕಾಗಿ ಪರಾಕ್ರಮಿ ಶಿವಾಜಿಯ ಪುಸ್ತಕ ಓದಿ


Team Udayavani, Feb 20, 2020, 3:00 AM IST

nayakatva

ಮೈಸೂರು: ಮಹಾಪರಾಕ್ರಮಿ, ಮೃದು ಮನಸ್ಸಿನವನಾಗಿದ್ದ ಶಿವಾಜಿ ಪರಸ್ತ್ರೀಯರನ್ನು ತಾಯಿಯಂತೆ ಕಾಣುತ್ತಿದ್ದ. ಜೊತೆಗೆ ಉತ್ತಮ ಆಡಳಿತದ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರನಾಗಿದ್ದ ಎಂದು ಚಿಂತಕ ಪ್ರೊ.ಎಸ್‌.ಶಿವಾಜಿ ಜೋಯಿಸ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ ವತಿಯಿಂದ ಬುಧವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ “ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಮಾತನಾಡಿದರು.

ರಾಷ್ಟ್ರ, ಧರ್ಮವನ್ನು ಕಟ್ಟುವ ನಿಟ್ಟಿನಲ್ಲಿ ಶಿವಾಜಿ ಆದರ್ಶಗಳು ಮಾದರಿಯಾಗಿವೆ. ನಾಯಕತ್ವಕ್ಕೆ ರೂಪಿಸುವುದಕ್ಕೆ ಶಿವಾಜಿಯ 22 ಸೂತ್ರಗಳು ಉತ್ತಮ ಕೃತಿಯಾಗಿದ್ದು, ಶಿವಾಜಿಯ ಆಡಳಿತದ ಒಟ್ಟು ದಾಖಲೆಯಾಗಿದೆ. ಈ ಕೃತಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವನೆ ಬರೆದಿದ್ದು, ದೇಶದ ಸಮಸ್ಯೆ, ಆರ್ಥಿಕ ನೀತಿ, ಕೃಷಿತತ್ವ ಇತರೆ ಎಲ್ಲಾ ಮಾಹಿತಿಗಳು ಕೃತಿಯಲ್ಲಿ ಅಡಗಿವೆ ಎಂದು ಹೇಳಿದರು.

ದೇಶಪ್ರೇಮ ಮೂಡಿಸುವ, ದೇಶವನ್ನು ಸಮರ್ಥವಾಗಿ ಕಟ್ಟುವ ನಿಟ್ಟಿನಲ್ಲಿ ಶಿವಾಜಿಯ ಆಡಳಿತ ಸೂತ್ರಗಳು ಸಹಕಾರಿಯಾಗಿವೆ. ಶಿವಾಜಿ ಕುರಿತ ಪುಸ್ತಕಗಳನ್ನು ಯುವಸಮುದಾಯಕ್ಕೆ ತಲುಪಿಸುವ ಕಾರ್ಯವಾಗಬೇಕಿದೆ. ಶಿವಾಜಿಯ ಮೂಲದವರು ಕನ್ನಡದವರಾಗಿದ್ದು, ಗದಗದ ಸೊರಟೂರಿನವರು ಎಂದು ಸಂಶೋಧನೆಗಳು ಹೇಳುತ್ತವೆ. ಶಿವಾಜಿಯ ಕುರಿತು ಅನೇಕ ಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ. ಮತ್ತಷ್ಟು ಸಂಶೋಧನೆಗಳು ನಡೆಯುತ್ತಿವೆ ಎಂದರು.

ಪಾಲಿಕೆ ಮೇಯರ್‌ ತಸ್ನಿಂ ಮಾತನಾಡಿ, ಆಂಗ್ಲರಿಗೆ ಸಿಂಹಸ್ವಪ್ನವಾಗಿ, ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿದ್ದವರು ಛತ್ರಪತಿ ಶಿವಾಜಿ. ಸಾಕಷ್ಟು ರಾಜ, ಮಹಾರಾಜರು ಐತಿಹಾಸಿಕ ಸಾಧನೆ ಮಾಡಿದ್ದು, ಅವರಲ್ಲಿ ಛತ್ರಪತಿ ಶಿವಾಜಿ ಒಬ್ಬರಾಗಿದ್ದಾರೆ. ಮರಾಠರಿಗೂ ಕನ್ನಡಕ್ಕೂ ಅವಿನಾಭವ ಸಂಬಂಧವಿತ್ತು ಎಂಬುದಕ್ಕೆ ಇವರು ಸಾಕ್ಷಿ. ನಿಸ್ವಾರ್ಥ ಆಡಳಿತ ನಡೆಸಿದ ಅವರ ಕಾರ್ಯವನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.

ಮಾಜಿ ಶಾಸಕ ಮಾರುತಿರಾವ್‌ ಪವಾರ್‌ ಮಾತನಾಡಿ, ಶಿವಾಜಿಯು ಅಪ್ರತಿಮ ಪರಾಕ್ರಮಿ. ಶಿವಾಜಿಯ ಗೆರಿಲ್ಲಾ ಯುದ್ಧ ತಂತ್ರವು ಅನೇಕ ದೇಶಗಳ ಸ್ವಾತಂತ್ರ್ಯಕ್ಕೆ ಸ್ಪೂರ್ತಿದಾಯಕವಾಗಿದೆ. ಶಿವಾಜಿಯು ರಾಷ್ಟ್ರದ ಆಸ್ತಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣದ ಗಜಾನನ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಪಾಲಿಕೆ ಸದಸ್ಯೆ ಶೋಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ಕೃಷ್ಣೋಜಿರಾವ್‌ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

14ಕ್ಕೆ ರಣರಂಗಕ್ಕೆ ಇಳಿದು 19ಕ್ಕೆ ಕೋಟೆ ಕಟ್ಟಿದ ಶಿವಾಜಿ: ಸರ್ಕಾರ ಕಳೆದ ಹತ್ತು ವರ್ಷದಿಂದ ಶಿವಾಜಿ ಸಾಧನೆ ಗುರುತಿಸುವ ಕಾರ್ಯ ಮಾಡುತ್ತಿದೆ. 14ನೇ ವಯಸ್ಸಿಗೆ ರಣರಂಗಕ್ಕೆ ಇಳಿದು 19ನೇ ವಯಸ್ಸಿಗೆ ಕೋಟೆಯೊಂದನ್ನು ಕಟ್ಟುತ್ತಾನೆ. 35ವರ್ಷಗಳ ಕಾಲ ಯುದ್ಧನಿರತನಾಗಿ ಸ್ವರಾಜ್ಯ ಕಟ್ಟುತ್ತಾನೆ. ಶಿವಾಜಿ ಆತ್ಮಭಿಮಾನಿಯಾಗಿದ್ದ ಹೊರತು ಆಹಂಕಾರಿಯಾಗಿರಲಿಲ್ಲ ಎಂದು ಚಿಂತಕ ಪ್ರೊ.ಎಸ್‌.ಶಿವಾಜಿ ಜೋಯಿಸ್‌ ಸ್ಮರಿಸಿದರು.

ಅದ್ಧೂರಿ ಮೆರವಣಿಗೆ: ಛತ್ರಪತಿ ಶಿವಾಜಿ ಮಹಾರಾಜ್‌ ಜಯಂತ್ಯುತ್ಸವ ಮೆರವಣಿಗೆಗೆ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ಕಲಾ ತಂಡಗಳೊಂದಿಗೆ ಹೊರಟ ಮೆರವಣಿಗೆಯೂ ದೇವಸ್ಥಾನದಿಂದ ಕೆ.ಆರ್‌.ವೃತ್ತ, ದೇವರಾಜ ಅರಸು ರಸ್ತೆ, ಮೆಟ್ರೋಪೋಲ್‌ ರಸ್ತೆ ಮಾರ್ಗವಾಗಿ ಕಲಾಮಂದಿರ ತಲುಪಿತು.

ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ವೇಷಧಾರಿ, ಕುದುರೆಯ ಮೇಲೆ ಕುಳಿತು, ಕೈಯಲ್ಲಿ ಖಡ್ಗ ಹಿಡಿದು ಸಾಗುವ ದೃಶ್ಯ ಶಿವಾಜಿಯನ್ನೇ ಹೋಲುವಂತಿತ್ತು, ವೇಷಧಾರಿಗಳಾಗಿದ್ದ ಚಿಣ್ಣರೂ ಇದಕ್ಕೆ ಸಾಥ್‌ ನೀಡಿದರು. ಮಾಜಿ ಸಚಿವ ಎಚ್‌.ವಿಶ್ವನಾಥ್‌, ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌, ಜಯಂತ್ಯುತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್‌.ಗೋಪಾಲ್‌ ರಾವ್‌ ಜಾದವ್‌, ಪ್ರಧಾನ ಕಾರ್ಯದರ್ಶಿ ಕೆ.ನಾಗೇಂದ್ರ ಅವತಾಡೆ, ಎಂ.ಜೆ.ಗಾರ್ಗೆ, ಖಜಾಂಚಿ ಎಸ್‌.ವೆಂಕೋಬ ರಾವ್‌ ಕಿರದಂತ್‌, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟೆR ಇತರರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ: ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಇಂದು ಸಂಜೆ 3.30ಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ: ಪೋಷಕರಿಗೆ ಸಚಿವರ ಕಿವಿಮಾತು

ಇಂದು ಸಂಜೆ 3.30ಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ: ಪೋಷಕರಿಗೆ ಸಚಿವರ ಕಿವಿಮಾತು

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆಯನ್ನು ತಾತ್ಕಾಲಿಕ ಬಂದ್

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆ ತಾತ್ಕಾಲಿಕ ಬಂದ್

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಧಾನಿಗಳ ಕೃಷಿ ಕ್ರಾಂತಿಗೆ ಸಚಿವರ ಅಭಿನಂದನೆ

ಪಧಾನಿಗಳ ಕೃಷಿ ಕ್ರಾಂತಿಗೆ ಸಚಿವರ ಅಭಿನಂದನೆ

ಹಂದಿ ಬೇಟೆಗೆ ಇಟ್ಟ ಉರುಳಿಗೆ ಸಿಲುಕಿ ಚಿರತೆ ಸಾವು

ಹಂದಿ ಬೇಟೆಗೆ ಇಟ್ಟ ಉರುಳಿಗೆ ಸಿಲುಕಿ ಚಿರತೆ ಸಾವು

ಜಿಲ್ಲೆಯಲ್ಲಿ ತುಸು ತಗ್ಗಿದ ಮಳೆಯ ಪ್ರಮಾಣ

ಜಿಲ್ಲೆಯಲ್ಲಿ ತುಸು ತಗ್ಗಿದ ಮಳೆಯ ಪ್ರಮಾಣ

Mysuru-tdy-2

ಜಿಲ್ಲೆಯಲ್ಲಿ ಮಳೆ ಅಬ್ಬರ; ಮತ್ತೆ ಪ್ರವಾಹ ಭೀತಿ

ಜನ, ಜಾನುವಾರು ರಕ್ಷಣೆಗೆ ಮುಂದಾಗಿ

ಜನ, ಜಾನುವಾರು ರಕ್ಷಣೆಗೆ ಮುಂದಾಗಿ

MUST WATCH

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavaniಹೊಸ ಸೇರ್ಪಡೆ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ: ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಸೋಂಕಿತರ ಸಂಖ್ಯೆ 2,603ಕ್ಕೇರಿಕೆ

ಸೋಂಕಿತರ ಸಂಖ್ಯೆ 2,603ಕ್ಕೇರಿಕೆ

hasan-tdy-1

ಕ್ವಿಟ್‌ ಇಂಡಿಯಾ ನೆನಪು ಕಾರ್ಯಕ್ರಮ

ನರಸಾಪುರ ಗ್ರಾಮದ ನಾಲ್ವರಿಗೆ ಕೋವಿಡ್ ಪಾಸಿಟಿವ್‌

ನರಸಾಪುರ ಗ್ರಾಮದ ನಾಲ್ವರಿಗೆ ಕೋವಿಡ್ ಪಾಸಿಟಿವ್‌

ಸರ್ಕಾರಿ ಶಾಲೆ-ಅಂಗನವಾಡಿಗೆ ಹೈಟೆಕ್‌ ಸ್ಪರ್ಶ

ಸರ್ಕಾರಿ ಶಾಲೆ-ಅಂಗನವಾಡಿಗೆ ಹೈಟೆಕ್‌ ಸ್ಪರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.