ಕಾಡಿನಿಂದ ಹೊರಬಂದವರಿಗೆ ಪುನರ್ವಸತಿ

Team Udayavani, Mar 1, 2019, 7:13 AM IST

m2-kaadininda.jpg

ಎಚ್‌.ಡಿ.ಕೋಟೆ: ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನು ತಪ್ಪಿಸುವುದರ ಜತೆಗೆ ಕಾಡಿನಲ್ಲಿ ವಾಸಿಸುವ ಗಿರಿಜನರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಲ್ಲಿ ಸ್ವಇಚ್ಛೆಯಿಂದ ಕಾಡಿನಿಂದ ಹೊರಬಂದವರಿಗೆ ಪುನರ್ವಸತಿ ಕಲ್ಪಿಸಿ, ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ತಾಲೂಕಿನ ಭೀಮನಹಳ್ಳಿ ಸಮೀಪದ ನೂತನವಾಗಿ ನಿರ್ಮಾಣಗೊಂಡಿದ್ದ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಹಕಾರದಲ್ಲಿ ರಾಜ್ಯ ಸರ್ಕಾರ ತಲಾ 15 ಲಕ್ಷ ರೂ ವೆಚ್ಚದ ಪ್ಯಾಕೇಜ್‌ನಲ್ಲಿ ಪುನರ್ವಸತಿ ಕಲ್ಪಿಸಿದ್ದು, ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಸ್ವಇಚ್ಛೆಯಿಂದ ಕಾಡಿನಿಂದ ಹೊರಬಂದ 210 ಕುಟುಂಬಗಳು ವಾಸವಾಗಿದ್ದು, ನಾವು ಹೊರ ಬಂದ ಮೇಲೆ ಚೆನ್ನಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ, ಇವರುಗಳಂತೆ ಇನ್ನು ಬಹಳಷ್ಟು ಗಿರಿಜನರು ಕಾಡಿನಿಂದ ಹೊರಬರಬೇಕು ಎಂದು ಅಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆರಂಭದಲ್ಲೇ ಪುನರ್ವಸತಿ ಕೇಂದ್ರದಲ್ಲಿರುವ ಗಿರಿಜನರ ಸಮಸ್ಯೆಗಳನ್ನು ಅಲಿಸಿದ ಸಚಿವರು, ನೀವು ಕಾಡಿನಿಂದ ಸ್ವಇಚ್ಛೆಯಿಂದ ಕಾಡಿನಿಂದ ಹೊರಬಂದಿದ್ದೀರಿ, ಈಗಾಗಲೇ ಇಲ್ಲಿ ಶೇ,70 ರಷ್ಟು ಪುನರ್ವಸತಿ ಕಲ್ಪಿಸಿದ್ದಾರೆ, ಮುಂದಿನ ದಿನಗಳಲ್ಲಿ ನಿವೇಳಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅರಣ್ಯ ಇಲಾಖೆ ಅ ಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಸಂಸದ ಆರ್‌.ಧƒವನಾರಾಯಣ್‌ ಮಾತನಾಡಿ, ಮಾಸ್ತಿಗುಡಿ ಪುನರ್ವಸತಿ ಕೇಂದ್ರ ಈ ದಿನದಂದಿ ಅ ಕೃತವಾಗಿ ಉದ್ಘಾಟನೆಗೊಂಡಿದ್ದು, ಸ್ವಇಚ್ಛೆಯಿಂದ ಕಾಡಿನಿಂದ ಹೊರಬಂದ 210 ಕುಟುಂಬಗಳಿಗೆ ಅನುಕೂಲವಾಗಿದೆ, ಕಾಡಾನೆ ದಾಳಿಗೆ ತುತ್ತಾದ ದಕ್ಷ ಪ್ರಮಾಣಿಕ ಅ ಕಾರಿ ದಿ.ಮಣಿಕಂಠನ್‌ ಅವರು ಮಾಸ್ತಿಗುಡಿ ಪುನರ್ವಸತಿ ಕೇಂದ್ರ ನಿರ್ಮಾಣದ ಬಗ್ಗೆ ವಿಶೇಷ ಅಶಕ್ತಿ ವಹಿಸಿದ್ದರು ಎಂದು ಸ್ಮರಿಸಿದರು.

ಪುನರ್ವಸತಿ ಕೇಂದ್ರಕ್ಕೆ ಬಂದಿರುವ ಗಿರಿಜನರಿಗೆ ಇನ್ನು ಆಧಾರ್‌, ರೇಷನ್‌ ಕಾರ್ಡ್‌ ಸಿಗದಿರುವ ಬಗ್ಗೆ ತಿಳಿಸಿದ್ದೀರಿ, ಮುಂದಿನ ಸೋಮವಾರವೇ ತಾಲೂಕು ಆಡಳಿತ ಅ ಧಿಕಾರಿಗಳೇ ಇಲ್ಲಿಗೆ ಬಂದು ನಿಮಗೆ ನೊಂದಣಿ ಮಾಡಿಕೊಡಲು ಸೂಚಿಸಿದ್ದೇನೆ. ಇನ್ನು ಇಲ್ಲಿ ಶೀಘ್ರ ಅಂಗನವಾಡಿ ತೆರೆಯಲು ಸಂಬಂಧಪಟ್ಟ ಅ ಕಾರಿಗೆ ಹೇಳಿದ್ದೇನೆ, ಮುಂದಿನ ಶೈಕ್ಷಣಿಕ ವರ್ಷದಿಂದ ಪುನರ್ವಸತಿ ಕೇಂದ್ರದಲ್ಲೇ ಶಾಲೆಯನ್ನು ಆರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೆ ವೇಳೆ ನನ್ನ ಚಾಮರಾಜ ಲೋಕಸಭಾ ಕ್ಷೇತ್ರದಲ್ಲಿಮೂರ್‍ನಾಲ್ಕು ಹುಲಿ ಸಂರಕ್ಷಿತಾ ಅಭ¿å ಅರಣ್ಯಗಳನ್ನು ಇದ್ದು ಶೇ, 40 ರಷ್ಟು ಕಾಡಿನಿಂದ ತವಾಗಿದೆ, ಈ ಭಾಗದಲ್ಲಿ ಅನೆ ಹಾವಳಿ ಹೆಚ್ಚಾಗಿದ್ದು, ಹಾವಳಿ ತಡೆಗೆ ರೈಲ್ವೆ ಕಂಬಿ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಕೋಡಬೇಕು, ಪ್ರಾಣಿಗಳಿಂದ ಪ್ರಾಣ ಹಾನಿಯಾದಾಗ ಇರುವ 5 ಲಕ್ಷ ರೂಗಳನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು, ಕಾಡು ಪ್ರಾಣಿಗಳಿಂದ ಬೆಳೆ ನಾಶಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ಅನಿಲ್‌ಚಿಕ್ಕಮಾದು, ಜಿಪಂ ಅಧ್ಯಕ್ಷೆ ಪರಿಮಳಶ್ಯಾಂ, ಸದಸ್ಯ ವೆಂಕಟಸ್ವಾಮಿ, ತಾಪಂ ಸದಸ್ಯರಾದ ಸುಂದರನಾಯ್ಕ, ಸರೋಜಿನಿ ಬಲರಾಮ್‌, ಪುರಸಭೆ ಸದಸ್ಯ ಎಚ್‌.ಸಿ.ನರಸಿಂಹಮೂರ್ತಿ, ಭೀಮನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯ ಶಂಕರ್‌, ಮೈಮುಲ್‌ ನಿರ್ದೇಶಕ ಹಿರೇಗೌಡ, ಕಾಂಗ್ರೆಸ್‌ ಮುಖಂಡರಾದ ಚಂದ್ರೇಗೌಡ, ಬಿ.ವಿ.ಬಸವರಾಜು, ಭೀಮನಹಳ್ಳಿ ಮಹದೇವ್‌,

ಗಿರಿಜನ ಮುಖಂಡರಾದ ಶೆ„ಲೇಂದ್ರ, ವಿಜಯಕುಮಾರ್‌, ಪುಟ್ಟಬಸವಯ್ಯ, ಕಾಳಕಲ್ಕರ್‌, ಅರಣ್ಯ ಪಡೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಪುನಾಟಿ ಶ್ರೀಧರ್‌, ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಯರಾಂ, ನಾಗರಹೊಳೆ ಸಿ.ಎಫ್‌ ನಾರಾಯಣಸ್ವಾಮಿ, ವಾನಪಾಲಕಿ ಕೃತಿಕಾ ಸೇರಿದಂತೆ ಇನ್ನಿತರರು ಇದ್ದರು.

ಟಾಪ್ ನ್ಯೂಸ್

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.