ನಾವು ಮೊದಲೇ ಕಾಂಗ್ರೆಸ್‌ನಲ್ಲಿದ್ದೆವು, ಸಿದ್ದರಾಮಯ್ಯ ಕೊನೆಯಲ್ಲಿ ಸೇರಿದ್ರು: ಸೋಮಶೇಖರ್
Team Udayavani, Nov 1, 2020, 12:29 PM IST
ಮೈಸೂರು: ನಮ್ಮನ್ನು ಸಿದ್ದರಾಮಯ್ಯ ಬೆಳೆಸಿದ್ದಲ್ಲ. ನಾವು ಮೊದಲಿನಿಂದಲೇ ಕಾಂಗ್ರೆಸ್ ನಲ್ಲಿದ್ದೆವು, ಸಿದ್ದರಾಮಯ್ಯ ಕೊನೆಯಲ್ಲಿ ಸೇರಿದ್ದರು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನಾವೇನು ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ನಾವೇನು ಅವರ ಮೇಲೆ ಮುನಿಸಿಕೊಂಡು ಪಕ್ಷ ಬಿಟ್ಟಿಲ್ಲ. ಆಗ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಈಗ ಒದ್ದಾಡಿದರೆ ಏನೂ ಪ್ರಯೋಜನ ಹೇಳಿ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತ ನಂತರ ಯಾವ ನಾಯಿಯಾಗಿದ್ದಾರೆ? ವಿಶ್ವನಾಥ್ ಟೀಕೆ
ರಾಜರಾಜೇಶ್ವರಿ ನಗರ ಉಪಚುನಾವಣೆಯ ಬಗ್ಗೆ ಮಾತನಾಡಿದ ಅವರು, ಶೇ.100 ರಷ್ಟು ಮುನಿರತ್ನ ಅವರೇ ಗೆಲುತ್ತಾರೆ. ಆರ್ ಆರ್ ನಗರ ಕ್ಷೇತ್ರವನ್ನು ಮುನಿರತ್ನ ಅಭಿವೃದ್ಧಿ ಮಾಡಿದ್ದಾರೆ. ಸಿದ್ದರಾಮಯ್ಯ ಏನೂ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಮುನಿರತ್ನ ಏನೂ ಮನೆಯಿಂದ ಹಣ ತಂದು ಖರ್ಚು ಮಾಡಿಲ್ಲ. ಬೆಂಗಳೂರಿನಲ್ಲಿ ಆದಾಯ ಹೆಚ್ಚಿದೆ, ಹೀಗಾಗಿ ಅಭಿವೃದ್ಧಿ ಹಣ ಬಿಡುಗಡೆಯಾಗಿದೆ. ಬಜೆಟ್ ನಲ್ಲಿ ಕೊಟ್ಟ ಹಣವನ್ನು ಮುನಿರತ್ನ ಸರಿಯಾಗಿ ಅವರ ಕ್ಷೇತ್ರಕ್ಕೆ ಬಳಸಿದ್ದಾರೆ ಎಂದರು.