Udayavni Special

ಚಾ.ಬೆಟ್ಟದಲ್ಲಿಸಪ್ತಪದಿ ತುಳಿದ 14 ಜೋಡಿ


Team Udayavani, Mar 16, 2021, 12:02 PM IST

ಚಾ.ಬೆಟ್ಟದಲ್ಲಿಸಪ್ತಪದಿ ತುಳಿದ 14 ಜೋಡಿ

ಮೈಸೂರು: ಧಾರ್ಮಿಕ ದತ್ತಿ ಇಲಾಖೆಯಿಂದ ಚಾಮುಂಡಿಬೆಟ್ಟದಲ್ಲಿ ಸೋಮವಾರ ಆಯೋಜಿಸಿದ್ದ”ಸಪ್ತಪದಿ’ ಸಾಮೂಹಿಕ ಸರಳ ವಿವಾಹದಲ್ಲಿ 14 ವಧು-ವರರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಚಾಮುಂಡೇಶ್ವರಿ ದೇವಸ್ಥಾನದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಎನ್‌. ಶಶಿಶೇಖರ್‌ ದೀಕ್ಷಿತ್‌ ಅವರ ನೇತೃತ್ವದಲ್ಲಿ ಮಂತ್ರ ಘೋಷಣೆಯೊಂದಿಗೆ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಲಾಯಿತು. ಸಾಮೂಹಿಕ ವಿವಾಹ ಬಂಧನಕ್ಕೆ ಒಳಗಾದವಧುವಿಗೆ 40 ಸಾವಿರ ರೂ. ಮೌಲ್ಯದ ಮಾಂಗಲ್ಯ,ಎರಡು ಚಿನ್ನದ ಗುಂಡು, ವಸ್ತ್ರ ಖರೀದಿಗಾಗಿ 10ಸಾವಿರ ರೂ. ನಗದು, ವರನಿಗೆ 5 ಸಾವಿರ ರೂ. ನೀಡಲಾಯಿತು. ಜಿಲ್ಲೆಯಲ್ಲಿ ಒಟ್ಟು 16 ಜೋಡಿಗಳುನೋಂದಣಿಯಾಗಿದ್ದರೂ, ಕೊನೆ ಗಳಿಗೆಯಲ್ಲಿ ನಂಜನಗೂಡಿನಿಂದ ಬರಬೇಕಿದ್ದ ಎರಡು ಜೋಡಿಗಳು ಗೈರಾಗಿ ದ್ದರಿಂದ 14 ಜೋಡಿಗಳು ಹಸೆಮಣೆ ಏರಿದರು.

ವಧು-ವರರನ್ನು ಆರ್ಶೀರ್ವದಿಸಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಮಕ್ಕಳ ಮದುವೆಗಾಗಿ ಸಾಲ ಮಾಡಿಕೊಂಡವರೆ ಹೆಚ್ಚು. ಜೊತೆಗೆ ಮದು ವೆಗೆ ಮಾಡಿದ್ದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇವೆ. ಹಾಗಾಗಿ ಅದ್ಧೂರಿಮದುವೆ ಮಾಡಿ ಜನರು ಸಂಕಷ್ಟಕ್ಕೀಡಾಗಬಾರದುಎನ್ನುವ ಉದ್ದೇಶದಿಂದ ಸರ್ಕಾರವೇ ತಾಳಿ, ಬಟ್ಟೆಕೊಟ್ಟು ಸರಳವಾಗಿ ಸಾಮೂಹಿಕ ವಿವಾಹ ಮಾಡಿಸಲುಮುಂದಾಗಿದೆ. ಜನರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳದೆ ಮಕ್ಕಳಿಗೆ ಸಾಮೂಹಿಕ ವಿವಾಹ ಮಾಡಿ ಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಸರಳ ಮದುವೆಗೆ ಹೆಚ್ಚು ಪ್ರೋತ್ಸಾಹ ನೀಡುವ ಅಗತ್ಯವಿದೆ. ಜನರು ಅದ್ಧೂರಿ ಮದುವೆ ಬಿಟ್ಟು ಸರಳ ರೀತಿಯಲ್ಲಿ ಮದುವೆ ಮಾಡಲು ಮುಂದಾಗಬೇಕುಎಂದರು. ಈ ಸಂದರ್ಭದಲ್ಲಿ ಜಿÇÉಾ ಪಂಚಾಯಿತಿಅಧ್ಯಕ್ಷೆ ಪರಿಮಳಾ ಶ್ಯಾಂ, ಮೃಗಾಲಯ ಪ್ರಾಧಿಕಾರದಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ, ಕನ್ನಡ ಪುಸ್ತಕಪ್ರಾಧಿ ಕಾರದ ಅಧ್ಯಕ್ಷ ನಂದೀಶ್‌ ಹಂಚೆ, ಮೈಲ್ಯಾಕ್‌ಅಧ್ಯಕ್ಷ ಎನ್‌.ವಿ.ಫ‌ಣೀಶ್‌, ಗ್ರಾಪಂ ಅಧ್ಯಕ್ಷ ಕೆ.ಭರತ್‌,ಉಪಾಧ್ಯಕ್ಷೆ ತುಳಸಿ, ಮುಡಾ ಮಾಜಿ ಅಧ್ಯಕ್ಷ ವಿಜಯ್‌,ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎನ್‌.ಯತಿರಾಜ್‌ ಸಂಪತ್‌ಕುಮಾರ್‌ ಇತರರು ಉಪಸ್ಥಿತರಿದ್ದರು.

ವಿವಿಧೆಡೆ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ :

ಮುಜರಾಯಿ ಇಲಾಖೆಯಿಂದ ಆಯೋಜಿಸಿರುವ ಜಿಲ್ಲೆಯ ವಿವಿಧೆಡೆ ಸಪ್ತಪದಿ ಸಾಮೂಜಿಕ ವಿವಾಹ ಆಯೋಜಿಸಲಾಗಿದ್ದು, ಏಪ್ರಿಲ್‌ 22ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ, ಮೇ 17ರಂದು ಮುಡುಕುತೊರೆ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನ, ಜೂನ್‌ 17ರಂದು ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ವಿವಾಹ ನೆರವೇರಲಿದೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.

ಟಾಪ್ ನ್ಯೂಸ್

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

ಬ್ಗಜಹಹಗಗ

ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ!

ಇಂಧನ ಪಂಪ್‌ನಲ್ಲಿ ದೋಷ :  77,954 ಹೋಂಡಾ ಕಾರುಗಳು ವಾಪಸ್‌!

ಇಂಧನ ಪಂಪ್‌ನಲ್ಲಿ ದೋಷ :  77,954 ಹೋಂಡಾ ಕಾರುಗಳು ವಾಪಸ್‌!

ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್‌ಸಿಸಿ ಐಚ್ಛಿಕ ವಿಷಯವಾಗಿ ಅಳವಡಿಸಲು ನಿರ್ದೇಶನ

ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್‌ಸಿಸಿ ಐಚ್ಛಿಕ ವಿಷಯವಾಗಿ ಅಳವಡಿಸಲು ನಿರ್ದೇಶನ

ಎಲ್‌ಐಸಿ ನೌಕರರಿಗೆ ವೇತನ ಹೆಚ್ಚಳ, ವಾರಕ್ಕೆ 5 ದಿನ ಕೆಲಸ?

ಎಲ್‌ಐಸಿ ನೌಕರರಿಗೆ ವೇತನ ಹೆಚ್ಚಳ, ವಾರಕ್ಕೆ 5 ದಿನ ಕೆಲಸ?

ಚ್ಗಜಹ್ಗ್‍‍

ಕೋವಿಡ್ 3ನೇ ಅಲೆಗೆ ಸಿದ್ಧರಾಗಿ, ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ : ಡಾ.ಶಶಿಕಿರಣ್ ಉಮಾಕಾಂತ್

shava

ಒಂದೇ ಆ್ಯಂಬುಲೆನ್ಸ್ ನಲ್ಲಿ ಮೂರು ಕೋವಿಡ್ ಸೋಂಕಿತರ ಶವ ಸಾಗಾಟ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Capture the Leopard

ಹುಣಸೂರು: ವರ್ಷದಿಂದ ಜನರನ್ನು ಕಾಡುತ್ತಿದ್ದ ಚಿರತೆ ಸೆರೆ

covid vaccination campaign

ಲಸಿಕೆ ಉತ್ಸವದಲ್ಲಿ 51,450 ಫ‌ಲಾನುಭವಿಗಳು

programme held at K R Nagara

ಸಮ ಸಮಾಜಕ್ಕೆ ಹೋರಾಡಿದ ಅಂಬೇಡ್ಕರ್‌

udayavani report palashruthi

ಹಬ್ಬಕ್ಕೆ ನೀರಿಲ್ಲದೆ ಪರಿತಪಿಸಿದ್ದ 16 ಗ್ರಾಮಗಳಿಗೆ ಕಡೆಗೂ ನೀರು ಪೂರೈಕೆ

sa.ra. mahesh talk at RR Nagara

ಮಹನೀಯರ ಪ್ರತಿಮೆ ವಿವಾದಿತ ಸ್ಥಳಗಳಲ್ಲಿ ಬೇಡ

MUST WATCH

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

udayavani youtube

ಬಿಎಸ್ ವೈಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್

udayavani youtube

ಮಂಗಳೂರು: ಬೊಟ್ ದುರಂತ ಪ್ರಕರಣ; ಮೂರು ದಿನಗಳಾದರೂ ಪತ್ತೆಯಾಗದ ಮೀನುಗಾರರು

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

ಹೊಸ ಸೇರ್ಪಡೆ

ghgfds

ಶೋಷಣೆ ಮುಕ್ತ ಸಮಾಜಕ್ಕೆ ಶ್ರಮಿಸಿ: ಬಣಕಾರ

hghhff

ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗುವಂತೆ SIT ನೋಟಿಸ್!

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

್ಗಹ್ದ್ಸದ಻ಸ

ಶುದ್ಧ ನೀರು ಪೂರೈಸಲು ನಗರಸಭೆ “ಬದ್ಧ ‘

ೊಕಿಜುಹಗ್ದಸ಻

ಆಕಾಂಕ್ಷಿಗಳಲ್ಲಿ ಮೀಸಲು ಕನವರಿಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.