Udayavni Special

ವಿವಿಗಳು ಗ್ರಾಮೀಣ ಪರಂಪರೆ ಉಳಿಸಿ


Team Udayavani, Aug 12, 2018, 11:20 AM IST

m5-vivigalu.jpg

ಮೈಸೂರು: ವಿಶ್ವವಿದ್ಯಾನಿಲಯಗಳು ಶಿಕ್ಷಣದ ಜತೆಗೆ ಎಲ್ಲಾ ಕ್ಷೇತ್ರಗಳ ತರಬೇತಿ ನೀಡುವ ಮೂಲಕ ಗ್ರಾಮೀಣ ಪರಂಪರೆ ಹಾಗೂ ಸಂಸ್ಕೃತಿ ಉಳಿಸಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ನಗರದ ಹೊಸ ಮಠದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮತ್ತು ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ಏನು ಮಾಡುತ್ತಿವೆ ಎಂಬುದು ಪ್ರತಿಯೊಬ್ಬರ ಪ್ರಶ್ನೆಯಾಗಿದೆ.

ಹೀಗಾಗಿ ಪ್ರತಿ ವಿಶ್ವವಿದ್ಯಾಲಯಗಳು ಐದು ಹಳ್ಳಿಗಳನ್ನು ದತ್ತು ಪಡೆಯಬೇಕೆಂದು ಸೂಚಿಸಲಾಗಿದೆ. ಆ ಮೂಲಕ ವಿಶ್ವವಿದ್ಯಾಲಯಗಳು ಹಳ್ಳಿಗಳಿಗೆ ಬಂದಿದೆ ಎಂಬ ಭಾವನೆ ಜನರಲ್ಲಿ ಮೂಡುವಂತೆ ಮಾಡಬೇಕಿದೆ. ಅಲ್ಲದೆ ವಿವಿಗಳು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಸಾಂಸ್ಕೃತಿಕ, ರಾಜಕೀಯ, ಕ್ರೀಡೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳ ಬಗ್ಗೆ ತರಬೇತಿ ನೀಡಬೇಕು ಎಂದರು.

ಉಪನ್ಯಾಸಕರ ನೇಮಕ: ರಾಜ್ಯದ ಬಹುತೇಕ ಕಾಲೇಜುಗಳಿಗೆ ಕಳೆದ ಹಲವು ವರ್ಷಗಳಿಂದ ಉಪನ್ಯಾಸಕರ ನೇಮಕವಾಗಿಲ್ಲ. ಇದರಿಂದಾಗಿ ಹಲವು ಉಪನ್ಯಾಸಕರು ತಮ್ಮ ವಿಷಯವನ್ನು ಹೊರತುಪಡಿಸಿ, ಇತರೆ ವಿಷಯಗಳ ಬೋಧನೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣ ಹೇಗೆ ಸಿಗುತ್ತದೆ? ಎಂದು ಪ್ರಶ್ನಿಸಿದರು.

ಹೀಗಾಗಿ ಹಲವು ವರ್ಷಗಳಿಂದ ಖಾಲಿ ಇರುವ 10 ಸಾವಿರ ಉಪನ್ಯಾಸಕರ ಹುದ್ದೆಗೆ ಸದ್ಯ 4 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು. ಇನ್ನು ರಾಜ್ಯದ 102 ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲದಿರುವುದು ಕಂಡು ಬಂದಿದ್ದು, ರಾಜ್ಯದ ಎಲ್ಲಾ ಕಾಲೇಜಿಗಳಿಗೆ ಸ್ವಂತ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸಲು ಮುಖ್ಯಮಂತ್ರಿಗಳು 250 ಕೋಟಿ ರೂ ನೀಡಿದ್ದಾರೆ ಎಂದು ತಿಳಿಸಿದರು. 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ಮಾತನಾಡಿ, ಸಮಾಜದಲ್ಲಿ ಹೆಣ್ಣನ್ನು ಒಂದು ಶಕ್ತಿಯಾಗಿ ಬಿಂಬಿಸಲಾಗುತ್ತದೆ. ಸಂಸಾರ, ಕುಟಂಬ ನಿರ್ವಹಿಸುವ, ದೇಶವನ್ನು ಮುನ್ನಡೆಸುವ ಕ್ರಿಯಾಶೀಲತೆ ಹೆಣ್ಣಿನಲ್ಲಿದೆ. ಆದರೂ ದೇಶದಲ್ಲಿ ಮಹಿಳಾ ಸಾಕ್ಷರತೆ ಕಡಿಮೆ ಇದ್ದು, ಪ್ರಾಥಮಿಕದಿಂದ ಪ್ರೌಢಶಿಕ್ಷಣ ಹಂತದವರೆಗೂ ಹೆಣ್ಣುಮಕ್ಕಳು ಮುಂದಿದ್ದಾರೆ.

ಉನ್ನತ ಶಿಕ್ಷಣ ಹಂತಕ್ಕೆ ಬಂದರೆ ಶೇ.90ಕ್ಕೂ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಾರೆ. ಆದರೆ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು ವಿದ್ಯಾವಂತರಾಗಿ, ಪ್ರಜ್ಞಾವಂತರಾಗಿ ಸೇವಾವಲಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಕಾಲೇಜಿನ ಪ್ರಾಂಶುಪಾಲರಾದ ಎಂ.ಶಾರದಾ ಮತ್ತಿತರರು ಹಾಜರಿದ್ದರು. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

mysuru-tdy-2

ಮೈಸೂರು: ಸತತ 2ನೇ ದಿನವೂ 17 ಸಾವು

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!



ಹೊಸ ಸೇರ್ಪಡೆ

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.