Udayavni Special

ಮಾಜಿ, ಹಾಲಿ ಸಂಸದರ ಕೆಲಸ ನೋಡಿ ಮತ ಹಾಕಿ


Team Udayavani, Mar 31, 2019, 1:08 PM IST

m5-maji-hal

ಹುಣಸೂರು: ಈ ಹಿಂದಿನ 25 ವರ್ಷಗಳ ಅವಧಿಯಲ್ಲಿ ಸಂಸದರು ಮಾಡಿರುವ ಕೆಲಸ ಹಾಗೂ ತಮ್ಮ ಐದು ವರ್ಷಗಳ ಅವಧಿಯ ಅಭಿವೃದ್ಧಿ ಕೆಲಸಗಳು ನಿಮ್ಮ ಮುಂದಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ತಿಳಿಸಿದರು.

ತಾಲೂಕಿನ ಗುರುಪುರ ಹಾಗೂ ಹೊಸೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಮೈಸೂರು ರಿಂಗ್‌ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಹಿನಕಲ್‌ ಬಳಿ ಫ್ಲೈಓವರ್‌ ನಿರ್ಮಿಸಲಾಗಿದೆ. ರೈಲ್ವೆ ಡಬ್ಲಿಂಗ್‌ ಕಾಮಗಾರಿ ಮುಗಿಸಿದ್ದೇನೆ. ದೇಶದ ಮೊದಲ ಮೈಸೂರಿನಲ್ಲಿ ಪೋಸ್ಟ್‌ಆಫೀಸ್‌ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆದು 42 ಸಾವಿರ ಮಂದಿಗೆ ಪಾಸ್‌ ನೀಡಲು ನೆರವಾಗಿದ್ದೇನೆ ಎಂದರು.

ಜಿಲ್ಲೆಯಲ್ಲಿ 95 ಸಾವಿರ ಮಂದಿಗೆ ಉಚಿತ ಅಡುಗೆ ಅನಿಲ ವಿತರಿಸಲಾಗಿದೆ. ಉಳಿದವರಿಗೆ ಅಕ್ಟೋಬರ್‌ 2 ರೊಳಗೆ ವಿತರಣೆಯಾಗಲಿದೆ. ಗ್ರಾಮ ಪಂಚಾಯ್ತಿಗೆ ಅನುದಾನ ಬರುವುದಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರದಿಂದ ನೇರವಾಗಿ ಗ್ರಾಪಂಗಳಿಗೆ ಅನುದಾನ ಬರುತ್ತಿದೆ.

ಇನ್ನು ಉದ್ಯೋಗ ಖಾತರಿ ಯೋಜನೆಯಡಿ 26 ಕಾಮಗಾರಿಗಳನ್ನು ಸೇರಿಸಿರುವುದರಿಂದ ಸಾಕಷ್ಟು ಮಂದಿಗೆ ಅನುಕೂಲವಾಗಿದೆ. ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಬೇಡಿಕೆ ಸಲ್ಲಿಸಿದಲ್ಲಿ ಮನೆ-ನಿವೇಶನ, ರಸ್ತೆ, ಚರಂಡಿ ಅಭಿವೃದ್ಧಿ ಪಡಿಸಿಕೊಳ್ಳಲು ಗ್ರಾಪಂಗೆ ಅಧಿಕಾರ ನೀಡಿರುವುದು ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದರು.

ಕಮಿಷನ್‌ ದಂಧೆ: ಇಲ್ಲಿನ ರಾಜಕಾರಣಿಗಳು ಕಮಿಷನ್‌ ಇಲ್ಲದೇ ಕೆಲಸ ಮಾಡುವುದಿಲ್ಲ. ಆ ಪಕ್ಷ-ಈ ಪಕ್ಷ ಎನ್ನುತ್ತಾರೆ, ಭರವಸೆ ನೀಡಿ, ಹಣಕೊಟ್ಟು ಓಟು ಖರೀದಿ ಮಾಡುತ್ತಾರೆ. ದೇವರಾಜ ಅರಸರ ಹೆಸರೇಳುವ ಇವರು ಅವರಂತೆ ಕೆಲಸ ಮಾಡಿದ್ದರೆ, ಕ್ಷೇತ್ರ ಗಂಧದ ನಾಡಾಗುತ್ತಿತ್ತು. ಇನ್ನು ಐಟಿಸಿ ಕಪಿಮುಷ್ಟಿಯಲ್ಲಿರುವ ತಂಬಾಕು ಮಂಡಳಿಯನ್ನು ಮುಕ್ತ ಮಾಡಬೇಕಿದೆ. ಐಟಿಸಿಯವರ ಹತ್ತಿರ ಕಮಿಷನ್‌ ಪಡೆಯದ ಯಾವ ಸಂಸದರಿದ್ದಾರೆ ತೋರಿಸಿ ಎದೆಮುಟ್ಟಿಕೊಂಡು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಏರ್‌ ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ದಿಟ್ಟ ಉತ್ತರ ನೀಡಲಾಗಿದೆ. ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು. ಇದೇ ವೇಳೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷ ತೊರೆದ ಹತ್ತಕ್ಕೂ ಹೆಚ್ಚು ಮಂದಿ ಸಂಸದರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್‌.ಯೋಗಾನಂದಕುಮಾರ್‌, ತಂಬಾಕು ಮಂಡಳಿ ಸದಸ್ಯ ಕಿರಣ್‌ಕುಮಾರ್‌, ಜಿಪಂ ಮಾಜಿ ಸದಸ್ಯ ಜಾಬಗೆರೆ ರಮೇಶ್‌, ನಾಗರಾಜ ಮಲ್ಲಾಡಿ, ರಾಜೇಂದ್ರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೆಂಕಟಮ್ಮ, ಮುಖಂಡರಾದ ಪ್ರಪುಲ್ಲಾ ಮಲ್ಲಾಡಿ ಶಿವಣ್ಣ, ದೊಡ್ಡೇಗೌಡ, ದಿನೇಶ್‌, ನಾರಾಯಣಗೌಡ ಇತರರಿದ್ದರು.

ಟಾಪ್ ನ್ಯೂಸ್

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಮೊದಲ ಬಾರಿ ಸಚಿವರಾದವರು

ಮೊದಲ ಬಾರಿ ಸಚಿವರಾದವರು

ಬಿಎಸ್‌ವೈ ಸಂಪುಟದ ಪಡಿಯಚ್ಚು

ಬಿಎಸ್‌ವೈ ಸಂಪುಟದ ಪಡಿಯಚ್ಚು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt-Hospital

ವರ್ಷ ಕಳೆದರೂ ಸಾರ್ವಜನಿಕ ಆಸ್ಪತ್ರೆ ದುರಸ್ತಿ ಕಾರ್ಯ ಅಪೂರ್ಣ

surjewala

ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶ : ಸುರ್ಜೆವಾಲಾ ಕಿಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

Mysore News, Piriyapattana Udayavani

ಕರಡಿಲಕ್ಕನ ಕೆರೆ ಏತನೀರಾವರಿ ಘಟಕದಿಂದ  ನೀರು ಬಿಡುವ ಕಾರ್ಯಕ್ಕೆ ಶಾಸಕ ಕೆ.ಮಹದೇವ್ ಚಾಲನೆ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

6 ಎಂಪಿಗಳ ಅಮಾನತು

6 ಎಂಪಿಗಳ ಅಮಾನತು

ದ.ಕ.ದಲ್ಲಿ ನಿರ್ಬಂಧ ಬಿಗಿ; ಕಾಸರಗೋಡಿನಲ್ಲಿ  ಸಡಿಲ!

ದ.ಕ.ದಲ್ಲಿ ನಿರ್ಬಂಧ ಬಿಗಿ; ಕಾಸರಗೋಡಿನಲ್ಲಿ  ಸಡಿಲ!

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಮೊದಲ ಬಾರಿ ಸಚಿವರಾದವರು

ಮೊದಲ ಬಾರಿ ಸಚಿವರಾದವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.