ಬಿಜೆಪಿಗೆ ಹಣ ನೀಡಿದ್ದಾರೆ, ಅದಕ್ಕೆ ಬಿಎಸ್ ವೈಗೆ ಎಂಟಿಬಿ ಮೇಲೆ ಅಪಾರ ಪ್ರೀತಿ; ಸಿದ್ದರಾಮಯ್ಯ

Team Udayavani, Nov 21, 2019, 11:10 AM IST

ಮೈಸೂರು: ಎಂ ಟಿ ಬಿ ನಾಗರಾಜ್ ಬಳಿ ನಾನು ಸಾಲ ಪಡೆದಿಲ್ಲ. ಸಾಲವನ್ನೇ ಪಡೆಯದೆ ಹೇಗೆ ವಾಪಸ್ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಸಾಲ ವಿವಾದ’ಕ್ಕೆ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆಪರೇಷನ್ ಕಮಲದಲ್ಲಿ ಎಂ ಟಿ ಬಿ ನಾಗರಾಜ್ ಒಬ್ಬರೇ ಹಣ ಪಡೆಯದೆ, ತಾವೇ ಬಿಜೆಪಿಯವರಿಗೆ ಕೊಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪಗೆ ಎಂಟಿಬಿ ಮೇಲೆ ಅಪಾರ ಪ್ರೀತಿ ಎಂದರು.

ಅನರ್ಹ ಶಾಸಕರ ಕ್ಷೇತ್ರ ಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಾಗ ನಾನು ಬರೀ ಪ್ರಶ್ನೆ ಕೇಳುತ್ತಿದ್ದೇನೆ, ಜನರೇ ಉತ್ತರ ನೀಡುತ್ತಿದ್ದಾರೆ. ಅನರ್ಹರ ನಾಜೂಕಿನ ಮಾತುಗಳನ್ನು ಮತದಾರರು ನಂಬುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ