“ಸಿದ್ದು ಸರ್ಕಾರ ದೇಶದಲ್ಲೇ ಮಾದರಿ’
Team Udayavani, Oct 13, 2017, 6:00 PM IST
ತಿ.ನರಸೀಪುರ: ಆರ್ಥಿಕ ನೀತಿಯ ಶಿಸ್ತನ್ನು ಉಲ್ಲಂಗಿಸದೆ ಉತ್ತಮವಾಗಿ ಹಣಕಾಸು ನಿರ್ವಹಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದೇಶದಲ್ಲಿಯೇ ಮಾದರಿ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ತಾಲೂಕಿನ ಬನ್ನೂರು ಪಟ್ಟಣದ ಬಳಿ ಕಾವೇರಿ ನದಿಗೆ 30 ಕೋಟಿ ರೂಗಳ ವೆಚ್ಚದಲ್ಲಿ ನೂತನ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸೇತುವೆ ನೀಲನಕ್ಷೆ ಪರಿಶೀಲಿಸಿ ಮಾತನಾಡಿದರು.
ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿ ಮೂಲಭೂತ ಸೌಕರ್ಯಗಳ ಪ್ರಗತಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಿರುವ ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ಬಗ್ಗೆ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದರು.
ಅನುದಾನ: ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆಗೊಂಡ ಮೈಸೂರು ಮಳವಳ್ಳಿ ರಸ್ತೆಯ ಮಾರ್ಗದಲ್ಲಿ ಬರುವ ಬನ್ನೂರು
ಪಟ್ಟಣದ ಸಮೀಪ ಕಿರಿದಾಗಿದ್ದ ಕಾವೇರಿ ನದಿಯ ಸೇತುವೆ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ಧಾರಿ ನಿರ್ವಹಣೆ ಇಲಾಖೆಗೆ 30 ಕೋಟಿ ರೂಗಳ ಅನುದಾನ ನೀಡಲಾಗಿದೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿ ಎಂದರು. ರಾಜಕೀಯ ಸಿದ್ಧಾಂತವಿಲ್ಲದ ಜನಪರ ಮತ್ತು ಅಭಿವೃದ್ಧಿಪರ ಕೆಲಸ ಮಡಲು ಸಾಧ್ಯ ವಿಲ್ಲದ ಗಿರಾಕಿಗಳು ಧರ್ಮ ಹಾಗೂ ಜಾತಿಯಾಧಾರಿತ ರಾಜಕಾರಣ ಮಾಡುತ್ತಿ ದ್ದಾರೆ ಎಂದು ವಿಪಕ್ಷಗಳ ನಾಯಕರ ವರ್ತನೆ ಟೀಕಿಸಿದರು.
ನಾಲೆಗಳ ಆಧುನೀಕರಣ: ಸಿಡಿಎಸ್ ನಾಲೆಯನ್ನು 250 ಕೋಟಿ ರೂಗಳ ವೆಚ್ಚದಲ್ಲಿ ಆಧುನೀಕರಣ, ಹೆಗ್ಗರೆ ಸೌಂದರೀಕರಣ ಗೊಳಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ರಾಜಕಾರಣಿಗಳಿದ್ದರೂ ತನ್ನನ್ನೇ ಅಲ್ಲಿನ ಶಾಸಕರು ಸಿಎಂ ಬಳಿಗೆ ಕರೆದೊಯ್ದು ಬೃಹತ್ ಯೋಜನೆಗೆ ಅಂಕಿತ ಹಾಕಿಸಿದರು ಎಂದು ಹೇಳಿದರು. ಅಲ್ಲದೆ, ರಾಜ ಪರಮೇಶ್ವರಿ ನಾಲೆ ಹಾಗೂ ರಾಮಸ್ವಾಮಿ ನಾಲೆ ಆಧುನೀಕರಣ, ಮಾಧವಮಂತ್ರಿ ಅಣೆಕಟ್ಟೆ ಪುನರ್ ನಿರ್ಮಾಣಕ್ಕೆ 70 ಕೋಟಿ ರೂ., ಯೋಜನೆ ರೂಪಿಸಲಾಗಿದೆ ಎಂದರು.
ಬನ್ನೂರು ಪಟ್ಟಣಕ್ಕೆ ದಿನದ 24 ತಾಸು ಕುಡಿಯುವ ನೀರನ್ನು ಪೂರೈಸಲು 22.50 ಕೋಟಿ ಯೋಜನೆ ಪ್ರಗತಿಯಲ್ಲಿದೆ. ಹೇಮಾದ್ರಾಂಬ ಜಾತ್ರೆ ನಡೆಯುವ ದೇವಿ ತೋಪು ಅಭಿವೃದ್ಧಿಗೂ ಸರ್ವೇ ಕಾರ್ಯ ನಡೆಸ ಲಾಗುವುದು ಎಂದು ಭರವಸೆ ನೀಡಿದರು.
ಶಂಕುಸ್ಥಾಪನೆ: ಬನ್ನೂರು ಪಟ್ಟಣದ ಹೊರ ವಲಯ ಮಲಿಯೂರು ಗ್ರಾಮದ ಬಳಿ ನಬಾರ್ಡ್‌ನ ಅನುದಾನ 10 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡು ತ್ತಿರುವ ತಾಯಿ ಮತ್ತು ಮಕ್ಕಳ (ಹೆರಿಗೆ) ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಚಿವ ಡಾ.ಮಹದೇವಪ್ಪ ಭೂಮಿ ಪೂಜೆ ನೆರವೇರಿಸಿದರು.
ಈ ಮುನ್ನ ಬನ್ನೂರು ಪಟ್ಟಣದ ಶ್ರೀರಂಗ ಪಟ್ಟಣ ರಸ್ತೆಯಲ್ಲಿ ನವೀಕರಣಗೊಂಡ ಸಮುದಾಯ ಆರೋಗ್ಯ ಕೇಂದ್ರವನ್ನು ಸಚಿವರು ಉದ್ಘಾಟಿಸಿ, ಪರಿಶೀಲನೆ ನಡೆಸಿದರು. ಬಳಿಕ, ಸಚಿವರಿಗೆ ಕರವೇ ರಾಜ್ಯ ಉಪಾಧ್ಯಕ್ಷ ಹಾಗೂ ಅತ್ತಹಳ್ಳಿ ತಾಪಂ ಕ್ಷೇತ್ರದ ಸದಸ್ಯ ಆರ್. ಚಲುವರಾಜು ಸೇಬಿನ ಹಾರ ಹಾಕಿ ಸನ್ಮಾನಿಸಿದರು.
ಮಾಜಿ ಶಾಸಕ ಎಸ್.ಕೃಷ್ಣಪ್ಪ, ವಿಶ್ವ ಪ್ರಜ್ಞ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ.ಎನ್. ಶಂಕರೇಗೌಡ, ಕೆಪಿಸಿಸಿ ಪ.ಪಂಗಡಗಳ ಉಪಾಧ್ಯಕ್ಷ ಹೊನ್ನನಾಯಕ, ಸದಸ್ಯ ಧನಂಜಯ ಗೌಡ, ತಾಪಂ ಅಧ್ಯಕ್ಷ ಸಿ. ಚಾಮೇಗೌಡ, ಬನ್ನೂರು ಪುರಸಭೆ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಬಿ.ಎಸ್. ರಾಮಲಿಂಗೇಗೌಡ, ಮಾಜಿ ಅಧ್ಯಕ್ಷರಾದ ಅಜೀಜ್ ವುಲ್ಲಾ, ಮುನಾವರ್ ಪಾಷಾ, ಜಿಪಂ ಸದಸ್ಯ ಟಿ.ಎಚ್.ಮಂಜುನಾಥನ್, ಮುಖಂಡರಾದ ಮಲಿಯೂರು ದೊಳ್ಳಯ್ಯ, ವಿಷಕಂಠಯ್ಯ, ಸ್ವಾಮಿಗೌಡ, ಬನ್ನೂರು ಶಿವು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೂಡ್ಸ್ ವಾಹನ ಢಿಕ್ಕಿ ಹೊಡೆದು ಬೈಕ್ ಸವಾರ ಸಾವು, ಇನ್ನೋರ್ವನಿಗೆ ಗಾಯ
ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅನುತ್ತೀರ್ಣ : ಮನನೊಂದ ವಿದ್ಯಾರ್ಥಿ ನೇಣಿಗೆ ಶರಣು
ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ: ಎಸ್ಎಂಕೆ ಗೆ ಹೆಚ್ ಡಿಕೆ ಟಾಂಗ್
ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ
ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ ಮೈಸೂರು ಹುಲಿ, ಟಿಪ್ಪುವಲ್ಲ: ಪ್ರತಾಪ್ ಸಿಂಹ