2029ರ ವರೆಗೂ ಮೋದಿ ಪ್ರಧಾನಿಯಾಗಿರಲಿ: ಭೈರಪ್ಪ 


Team Udayavani, Jan 27, 2023, 12:21 AM IST

2029ರ ವರೆಗೂ ಮೋದಿ ಪ್ರಧಾನಿಯಾಗಿರಲಿ: ಭೈರಪ್ಪ 

ಮೈಸೂರು: ಪ್ರಧಾನಿ ಮೋದಿ ಕಾರಣದಿಂದಲೇ ನನಗೆ ಪ್ರಶಸ್ತಿ ದೊರೆತಿದೆ. ಅವರಂಥ ಸಮರ್ಥ ಪ್ರಧಾನಿ ದೇಶಕ್ಕೆ ಅಗತ್ಯವಿದ್ದು, ಮುಂದಿನ  ಚುನಾವಣೆಯಲ್ಲಿ ಮೋದಿ ಮತ್ತೆ ಆಯ್ಕೆಯಾಗಿ 2029ರ ವರೆಗೂ ಪ್ರಧಾನಿಯಾಗಿರಬೇಕು ಎಂದು ಹಿರಿಯ ಸಾಹಿತಿ ಪ್ರೊ| ಎಸ್‌.ಎಲ್‌. ಭೈರಪ್ಪ ಹೇಳಿದರು.

ಕೇಂದ್ರ ಸರಕಾರ ಪದ್ಮಭೂಷಣ ಪುರಸ್ಕಾರ ನೀಡಿರುವ ಸಂಬಂಧ ಮೈಸೂರಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು,  ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಕ್ಕೆ ಮೋದಿ ನೇತೃತ್ವದ ಸರಕಾರಕ್ಕೆ ಕೃತಜ್ಞತೆ  ಸಲ್ಲಿಸುತ್ತೇನೆ.  ಪ್ರಶಸ್ತಿ ಕೊಟ್ಟರೆಂಬ ಕಾರಣಕ್ಕೆ ಅವರ ಸರಕಾರವನ್ನು ಹೊಗಳುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ ರಾಜಕೀಯದ ಬಗ್ಗೆ ಓದಿಕೊಂಡಿದ್ದೇನೆ ಎಂದರು.

ದೇಶದಲ್ಲಿ ಮೋದಿ ನೇತೃತ್ವ ದಂಥ ಸರಕಾರ ಇದುವರೆಗೆ ಬಂದಿರಲಿಲ್ಲ.  ಸೇವೆಯನ್ನೇ ದೃಷ್ಟಿಯಲ್ಲಿಟ್ಟು ಕೊಂಡಿರುವ ಹಾಗೂ ಅಸಾಮಾನ್ಯ ಧೈರ್ಯ ಹೊಂದಿರುವಂಥ ಪ್ರಧಾನಿ ಇದುವರೆಗೆ  ಬಂದಿರಲಿಲ್ಲ ಎಂದರು.

ಸಮಾನ ನಾಗರಿಕ ಸಂಹಿತೆ ಅಗತ್ಯ

ಏಕರೂಪ ನಾಗರಿಕ ಸಂಹಿತೆಯನ್ನು ಖಂಡಿತವಾಗಿ ಜಾರಿಗೊಳಿಸಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯ ವಾಗುವಂತೆ ಮಾಡಬೇಕು. ಮತಕ್ಕೋಸ್ಕರ ಒಂದು ವರ್ಗದ ಓಲೈಕೆ ಸರಿಯಲ್ಲ. ಅಲ್ಪಸಂಖ್ಯಾಕರು ಬೇರೆ ಎಂದು ಮಾಡಿದ್ದೇಕೆ ಎಂದು ಪ್ರಶ್ನಿಸಿದ ಅವರು, ಸ್ವಾತಂತ್ರÂ ಬಂದ ಬಳಿಕ ದೇಶಕ್ಕೆ ಸರಿಯಾದ ಅಡಿಪಾಯ ಹಾಕಲಿಲ್ಲ. ಇದರಿಂದ ಹಲವು ಸಮಸ್ಯೆಗಳಾಗಿವೆ ಎಂದು ಹೇಳಿದರು.

2002ರ ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡಿ, ಈಗ ಅದು ಹೊರಬಂದಿದ್ದೇಕೆ? ಜಿ 20 ಶೃಂಗಸಭೆಗೆ ಉತ್ತಮ ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಿ ದ್ದನ್ನು ತಡೆಯಲಾಗದೆ ಇಂಥದ್ದೆಲ್ಲ ವನ್ನು ಆರಂಭಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತ್ಯದ ಖುಷಿ

ಪದ್ಮಭೂಷಣ ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ  ಕೃತಿಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಖುಷಿ ಕೊಡುತ್ತದೆ. ನನಗೀಗ 92 ವರ್ಷ ವಯಸ್ಸು. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ ಎನ್ನುವುದು ಮುಖ್ಯವಾಗುತ್ತದೆ. ಮುಂದೆಯೂ ನನ್ನ ಪುಸ್ತಕಗಳು ಪ್ರಸ್ತುತವಾಗಿರುತ್ತವೆ ಎಂದಾದರೆ ಅದೇ ನಿಜವಾದ ಪ್ರಶಸ್ತಿ ಎಂದು ಹೇಳಿದರು.

ಟಾಪ್ ನ್ಯೂಸ್

1-asdssa-dsa

ತೆನೆ ಹೊತ್ತ ಹೆಚ್.ಆರ್.ಚನ್ನಕೇಶವ ; ಗಂಗಾವತಿಯಿಂದ ಕಣಕ್ಕೆ

1-fsadsdsd

ಉಪನಾಮ ವಿವಾದ:ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ ಲಲಿತ್ ಮೋದಿ

tdy-19

ಉಳ್ಳಾಲ: ಹೆಜ್ಜೇನು ದಾಳಿಗೆ ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

Arjun Tendulkar To Debut For Mumbai Indians In IPL 2023?

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

r madhav jos

ಜೋಸ್‌ ಆಲುಕ್ಕಾಸ್‌ನ ಪ್ಯಾನ್‌ ಇಂಡಿಯಾ ಬ್ರಾಂಡ್‌ ಅಂಬಾಸಿಡರ್‌ ಆಗಿ ಆರ್‌. ಮಾಧವನ್‌ ಆಯ್ಕೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

madhu

ತಮಿಳಿನತ್ತ ಮಧು ಗುರುಸ್ವಾಮಿ; ಮಫ್ತಿ ರೀಮೇಕ್‌ ನಲ್ಲಿ ನಟನೆ

1-asdssa-dsa

ತೆನೆ ಹೊತ್ತ ಹೆಚ್.ಆರ್.ಚನ್ನಕೇಶವ ; ಗಂಗಾವತಿಯಿಂದ ಕಣಕ್ಕೆ

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು

1-fsadsdsd

ಉಪನಾಮ ವಿವಾದ:ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ ಲಲಿತ್ ಮೋದಿ

sushmita bhat is in kannada movie chow chow bath

‘ಚೌಚೌ ಬಾತ್‌’ ನಲ್ಲಿ ರೊಮ್ಯಾಂಟಿಕ್ ಡ್ರಾಮಾ