Udayavni Special

ಜನಸ್ಪಂದನದಲ್ಲಿ ಸಿಕ್ಕಿದ್ದು ಭರವಸೆ, ನಿರಾಸೆ ಮಾತ್ರ


Team Udayavani, Dec 1, 2020, 6:03 PM IST

ಜನಸ್ಪಂದನದಲ್ಲಿ ಸಿಕ್ಕಿದ್ದು ಭರವಸೆ, ನಿರಾಸೆ ಮಾತ್ರ

ಪಿರಿಯಾಪಟ್ಟಣ: ಬಹುಕಾಲದ ಸಮಸ್ಯೆಗಳಿಗೆ ತಾಲೂಕಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಸ್ಥಳದಲ್ಲೇ ಪರಿಹಾರ ಸಿಗುತ್ತದೆ ಎಂಬ ಮಹತ್ವಾಕಾಂಕ್ಷೆಯಿಂದ ದೂರದ ಊರುಗಳಿಂದ ಬಂದಿದ್ದ ಸಾರ್ವಜನಿಕರಿಗೆ ಸಿಕ್ಕಿದ್ದು ಕೇವಲ ಭರವಸೆ ಹಾಗೂ ನಿರಾಸೆ ಮಾತ್ರ.

ತಾಲೂಕುಪಂಚಾಯಿತಿಸುವರ್ಣಸೌಧದಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸ್ಪಂದನ ಸಭೆಗೆ ಆಗಮಿಸಿದ್ದ ರೈತರು, ವಯೋ ವೃದ್ಧರು, ಅಂಗವಿಕಲರು, ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಪರಿಹಾರಕಾಣದೇ ನಿರಾಸೆಗೊಂಡರು.

ದೂರುಗಳು: ಜಮೀನಿನ ರಸ್ತೆ ಸಮಸ್ಯೆ, ಜಮೀನಿನ ಪೋಡಿ ವಿಳಂಬ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಅಕ್ರಮ, ಮಠದ ಹಣ ದುರ್ಬಳಕೆ, ಜಮೀನು ಒತ್ತುವರಿ, ಸ್ಮಶಾನದ ಸಮಸ್ಯೆ, ಕೆರೆ ಒತ್ತುವರಿ, ಮುಖ್ಯಮಂತ್ರಿಗಳ ಪರಿ ಹಾರ ನಿಧಿ, ರೈತ ಆತ್ಮಹತ್ಯೆಯ ಪರಿಹಾರ, ಆಗ್ರಹ, ಪಂಚಾಯಿತಿಗಳಲ್ಲಿ ಹಣ ದುರುಪಯೋಗ, ಅಧಿಕಾರಿಗಳಿಂದ ಕಿರು ಕುಳ, ನಿವೇಶನದ ಸಮಸ್ಯೆ ಕುರಿತು ಸಾರ್ವಜನಿಕರು ಅರ್ಜಿ ಸಲ್ಲಿಸಿದರು.

124 ಅರ್ಜಿ ಸಲ್ಲಿಕೆ: ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಮಾತನಾಡಿ, ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ತಾಲೂಕಿನಿಂದ ಸಮಸ್ಯೆಗಳ ಪರಿಹಾರಕ್ಕಾಗಿ 124 ಅರ್ಜಿಗಳು ಬಂದಿದ್ದು, ಇದರಲ್ಲಿ ಬಹುತೇಕ ಅರ್ಜಿಗಳು ಸರ್ವೆ ಹಾಗೂ ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ಭೂ ವಿವಾದ ಕುರಿತು ಮೈಸೂರಿನಲ್ಲಿಯೂ ಇಷ್ಟು ಸಮಸ್ಯೆಗಳಿಲ್ಲ, ಮೈಸೂರಿನಲ್ಲಿ ಪರಿಹಾರಕ್ಕಾಗಿ ಬೇಡಿಕೆ ಇಟ್ಟರೆ ಇಲ್ಲಿ ಸರ್ವೆ, ಪೋಡಿ, ಹಾಗೂ ಜಮೀನಿಗೆ ತೆರಳಲು ರಸ್ತೆಯನ್ನು ಬಿಡಿಸಿಕೊಡುವಂತೆ ದೂರುಗಳು ಬಂದಿವೆ. ಆದ್ದರಿಂದ ಸರ್ವೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಜನರ ಸಮಸ್ಯೆಗಳನ್ನುಕೂಡಲೇ ಬಗೆಹರಿಸುವಂತೆ ಸೂಚಿಸಿದರು.

ಆಸ್ಪತ್ರೆ ಸಮಸ್ಯೆ: ಕೋವಿಡ್‌ ಕೇರ್‌ ಸೆಂಟರ್‌ ಅನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರೆದಿರುವ ಕಾರಣ ಸಾರ್ವ ಜನಿಕರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಭಯ ಪಡುತ್ತಿದ್ದಾರೆ. ಆಸ್ಪತ್ರೆಗೆ ಸಾಮಾನ್ಯ ಚಿಕಿತ್ಸೆಗಾಗಿ ಬರುವ ರೋಗಿಗಳಿಗೂ ಹಾಗೂ ಕೋವಿಡ್‌ ಚಿಕಿತ್ಸೆಗಾಗಿ ಬರುವ ರೋಗಿಗಳಿಗೂ ಒಂದೇ ದ್ವಾರರದಲ್ಲಿ ಪ್ರವೇಶ ನಿಗದಿ ಮಾಡಿರುವುದರಿಂದ ಜನರು ಆಸ್ಪತ್ರೆಗೆ ಬರಲು ಭಯಪಡುತ್ತಿದ್ದಾರೆ. ಇದಕ್ಕೆ ಪರಿ ಹಾರ ನೀಡಬೇಕು ಎಂದು ಪತ್ರಕರ್ತರು ಕೋರಿಕೆಗೆ ಪ್ರತಿಕ್ರಿಯಿ ಸಿದ ಜಿಲ್ಲಾಧಿಕಾರಿ, ಈ ವಿಚಾರವಾಗಿ ಎರಡು ಬಾರಿ ದೂರುಗಳು ಬಂದಿವೆ.ಕೂಡಲೇ ಆಸ್ಪತ್ರೆಯ ಆಡಳಿತಾಧಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಿ, ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಶರತ್‌ಕುಮಾರ್‌ಗೆ ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ತಾಲೂಕು ಪಂಚಾಯಿತಿ ಸಭಾಂಗಣದ ಮುಂಭಾಗ ಸಮಸ್ಯೆಗಳನ್ನು ನೋಂದಣಿ ಮಾಡಿಕೊಳ್ಳಲು ಬರುವ ಸಾರ್ವಜನಿಕರಿಗೆ ಇಲಾಖಾವಾರು ಪ್ರತ್ಯೇಕ ಕೌಂಟರ್‌ ತೆರೆದು ಅವುಗಳಿಗೆ ನಂಬರ್‌ ನೀಡಲಾಗಿತ್ತು. ಸಭೆಯಲ್ಲಿ ಜಿಪಂ ಸಿಇಒ ಭಾರತಿ, ಹುಣಸೂರು ಉಪ ವಿಭಾಗಾಧಿಕಾರಿ ಬಿ.ಎನ್‌.ವೀಣಾ, ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ, ಉಪ ತಹಶೀಲ್ದಾರ್‌ ನಿಜಾಮುದ್ದೀನ್‌, ಶಿರಸ್ತೇದಾರ್‌ ಶಕೀಲಾ ಬಾನು, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಂಬುಲ್ದೇನಿಯ-ರೂಟ್‌ ಗ್ರೇಟ್‌ ಫೈಟ್‌

ಎಂಬುಲ್ದೇನಿಯ-ರೂಟ್‌ ಗ್ರೇಟ್‌ ಫೈಟ್‌

ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್‌

ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್‌

Untitled-1

ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

Untitled-1

ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ

Downloadable e-version of voter id card to be launched on Monday

ಮತದಾರರ ಕೈ ಸೇರಲಿದೆ ಡಿಜಿಟಲ್ ಓಟರ್ ಕಾರ್ಡ್

mapple

ಐಪೋನ್-12 ಸೇರಿದಂತೆ ಹಲವು ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಡಿಸ್ಕೌಂಟ್: ಇಲ್ಲಿದೆ ಮಾಹಿತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಶಾಸಕನಾಗಿದ್ದರೂ ಸಚಿವನಾಗಬೇಕೆಂಬ ಭ್ರಮೆ ಇಲ್ಲ: ರಾಮದಾಸ್‌

ನಾನು ಶಾಸಕನಾಗಿದ್ದರೂ ಸಚಿವನಾಗಬೇಕೆಂಬ ಭ್ರಮೆ ಇಲ್ಲ: ರಾಮದಾಸ್‌

ಶಿಕ್ಷಕರು, ಎಸ್‌ಡಿಎಂಸಿಗೂ ತಿಳಿಸದೇ ಶಾಲೆಯಲ್ಲಿ 10 ಬೃಹತ್‌ ಮರಗಳ ಹನನ

ಶಿಕ್ಷಕರು, ಎಸ್‌ಡಿಎಂಸಿಗೂ ತಿಳಿಸದೇ ಶಾಲೆಯಲ್ಲಿ 10 ಬೃಹತ್‌ ಮರಗಳ ಹನನ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

madhuswamy talk

ಖಾತೆ ಬದಲಾಯಿಸಿದ್ದು ಬೇಸರ ತಂದಿದೆ

13 Lakhs of Purified Water  Unit

ಭವನ ಬೀಳಿಸಲು ಹೋಗಿ ನೀರಿನ ಘಟಕ ಕೆಡವಿದ್ರು!

MUST WATCH

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

ಹೊಸ ಸೇರ್ಪಡೆ

ಕೃಷ್ಣಾಪುರ: ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ

ಕೃಷ್ಣಾಪುರ: ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ

Untitled-1

ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧ

ಸ್ತ್ರೀ ಕಥನ ಕೌಶಲಕ್ಕೆ ಬಹುಮಾದರಿಗಳು

ಸ್ತ್ರೀ ಕಥನ ಕೌಶಲಕ್ಕೆ ಬಹುಮಾದರಿಗಳು

ಥಳಿತ: ಮೃತ ವ್ಯಕ್ತಿಯ ವಿರುದ್ಧವೇ ಕೇಸು ದಾಖಲು!

ಥಳಿತ: ಮೃತ ವ್ಯಕ್ತಿಯ ವಿರುದ್ಧವೇ ಕೇಸು ದಾಖಲು!

ಇಫಿ ಚಿತ್ರೋತ್ಸವಕ್ಕೆ ತೆರೆ: ಡ್ಯಾನಿಷ್‌ ಭಾಷೆಯ ಚಿತ್ರಕ್ಕೆ ಪ್ರಶಸ್ತಿ

ಇಫಿ ಚಿತ್ರೋತ್ಸವಕ್ಕೆ ತೆರೆ: ಡ್ಯಾನಿಷ್‌ ಭಾಷೆಯ ಚಿತ್ರಕ್ಕೆ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.