Udayavni Special

ಕುಂಭಮೇಳಕ್ಕೆ ಐಆರ್‌ಸಿಟಿಸಿಯಿಂದ ವಿಶೇಷ ರೈಲು ಪ್ರವಾಸ


Team Udayavani, Dec 20, 2018, 11:43 AM IST

m4kumba.jpg

ಮೈಸೂರು: ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಅರ್ಧ ಕುಂಭಮೇಳಕ್ಕೆ ಹೋಗುವ ಯಾತ್ರಿಕರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್‌ ಮತ್ತು ಟೂರಿಸಂ ಕಾರ್ಪೋರೇಷನ್‌ ಲಿ. (ಐಆರ್‌ಸಿಟಿಸಿ) ವಿಶೇಷ ಪ್ರವಾಸಿ ರೈಲಿನ ವ್ಯವಸ್ಥೆ ಮಾಡಿದೆ. ಈ ವಿಶೇಷ ರೈಲು ಮಧುರೈ ರೈಲು ನಿಲ್ದಾಣದಿಂದ ಹೊರಟು ಫೆ.15ರಂದು ಬೆಂಗಳೂರಿನ ವೈಟ್‌ಫೀಲ್ಡ್‌ ರೈಲು ನಿಲ್ದಾಣದ ಮೂಲಕ ಹಾದು ಹೋಗಲಿದೆ ಎಂದು ಐಆರ್‌ಸಿಟಿಸಿ ಪ್ರಾದೇಶಿಕ ಅಧಿಕಾರಿ ಡಿ.ಶಿವಕುಮಾರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರವಾಸಿ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ 12,230 ರೂ. ನಿಗದಿಪಡಿಸಲಾಗಿದ್ದು, ಈ ಪ್ಯಾಕೇಜ್‌ನಲ್ಲಿ ಧರ್ಮಶಾಲಾ, ಹಾಲ್‌, ಡಾರ್ಮಿಟೊರೀಸ್‌ ವ್ಯವಸ್ಥೆ, ಊಟ, ವಸತಿ, ರಸ್ತೆ ಮಾರ್ಗದಲ್ಲಿ ಪ್ರಯಾಣ, ಭದ್ರತಾ ವ್ಯವಸ್ಥೆ, ಗೈಡ್‌ ವ್ಯವಸ್ಥೆಯನ್ನೂ ಒಳಗೊಂಡಿದೆ ಎಂದು ತಿಳಿಸಿದರು. 

ಫೆ.15ರಂದು ಮದ‌ುರೈನಿಂದ ಹೊರಡುವ ಈ ರೈಲು ಬೆಂಗಳೂರಿನ ವೈಟ್‌ಫೀಲ್ಡ್‌ ರೈಲು ನಿಲ್ದಾಣದ ಮೂಲಕ ಹಾದು ಹೋಗಿ 17ರಂದು ಸಂಜೆ ವಾರಾಣಸಿ ತಲುಪಲಿದ್ದು, ಯಾತ್ರಿಕರು ಅಂದು ರಾತ್ರಿ ವಾರಾಣಸಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 18ರಂದು ಪವಿತ್ರ ಗಂಗಾ ಸ್ನಾನ, ಕಾಶಿ ವಿಶ್ವನಾಥ, ಕಾಶಿ ವಿಶಾಲಾಕ್ಷಿ ದರ್ಶನ ಪಡೆದು ವಾರಾಣಸಿಯಲ್ಲೇ ತಂಗಲಿದ್ದಾರೆ.

19ರಂದು ಮುಂಜಾನೆ ವಾರಾಣಸಿಯಿಂದ ರಸ್ತೆ ಮಾರ್ಗವಾಗಿ ಹೊರಟು ಅಲಹಾಬಾದ್‌ ತಲುಪಲಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಅರ್ಧ ಕುಂಭಮೇಳದಲ್ಲಿ ಪಾಲ್ಗೊಂಡ ಬಳಿಕ ರಾತ್ರಿ ವಾರಣಸಿ ತಲುಪಲಿದ್ದಾರೆ. 20ರಂದು ಮುಂಜಾನೆ ಗಯಾ ತಲುಪಲಿದ್ದು, ಅಲ್ಲಿಂದ ರಾತ್ರಿ 21ರಂದು ರಾತ್ರಿ ಹರಿದ್ವಾರ ತಲುಪಿ ವಾಸ್ತವ್ಯ ಹೂಡಲಿದ್ದಾರೆ. 22ರಂದು ಗಂಗಾ ಸ್ನಾನದೊಂದಿಗೆ ಮಾನಸ ದೇವಿ ಮಂದಿರಕ್ಕೆ ಭೇಟಿ ನೀಡಿ, ಸಂಜೆ ಆರತಿ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.  

ರಾತ್ರಿ ಹರಿದ್ವಾರದಿಂದ ಹೊರಟು 23ರಂದು ಮುಂಜಾನೆ ದೆಹಲಿ ತಲುಪಿ ನಗರ ವೀಕ್ಷಣೆ ನಂತರ ರಾತ್ರಿ ವಾಸ್ತವ್ಯ ಹೂಡಲಿದ್ದು, 24ರಂದು ಮುಂಜಾನೆ ಹೊರಟು ಮಥುರೆಯ ಶ್ರೀಕೃಷ್ಣ ಜನ್ಮ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಧ್ಯಾಹ್ನ ವಾಪಸ್‌ ಹೊರಟು 26ರ ರಾತ್ರಿ ಮದುರೈ ರೈಲು ನಿಲ್ದಾಣ ತಲುಪಲಿದ್ದಾರೆ ಎಂದು ಅವರು ವಿವರಿಸಿದರು.  ಪತ್ರಿಕಾಗೋಷ್ಠಿಯಲ್ಲಿಟೂರಿಸಂ ವ್ಯವಸ್ಥಾಪಕ ಕಿಶೋರ್‌ ಸತ್ಯ, ಇಮ್ರಾನ್‌ ಇತರರು ಉಪಸ್ಥಿತರಿದ್ದರು.

ಮಾಹಿತಿ: ಕುಂಭಮೇಳ ಯಾತ್ರೆ ಸಂಬಂಧ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2426001,ಮೊಬೈಲ್‌ ಸಂಖ್ಯೆ 9741421486, 080-22960014, ಮೊ.9686575203 ಸಂಪರ್ಕಿಸಬಹುದು. 

ವಿದೇಶ ಪ್ರವಾಸಕ್ಕೆ ಪ್ಯಾಕೇಜ್‌: ದೇಶಿಯವಾಗಿ ರೈಲು ಹಾಗೂ ರಸ್ತೆ ಮಾರ್ಗದ ಪ್ರವಾಸದ ಜೊತೆಗೆ ಐಆರ್‌ಸಿಟಿಸಿವತಿಯಿಂದ ಅಂತಾರಾಷ್ಟ್ರೀಯ ಏರ್‌ ಪ್ಯಾಕೇಜ್‌ನಡಿ ಜನವರಿ 22 ರಿಂದ 27ರವರೆಗೆ ಥೈಲ್ಯಾಂಡ್‌, ಬ್ಯಾಂಕಾಕ್‌, ಪಟ್ಟಾಯ ಪ್ರವಾಸ ಆಯೋಜಿಸಿದ್ದು, ಪ್ರತಿ ವ್ಯಕ್ತಿಗೆ 44,910 ರೂ. ನಿಗದಿಪಡಿಸಲಾಗಿದೆ. ಫೆ.2ರಿಂದ 6ರವರೆಗೆ ದುಬೈ ಮತ್ತು ಅಬುಧಾಬಿ ಪ್ರವಾಸ ಆಯೋಜಿಸಿದ್ದು, ಪ್ರತಿ ವ್ಯಕ್ತಿಗೆ 55,950 ರೂ. ನಿಗದಿಪಡಿಸಲಾಗಿದೆ ಎಂದು ಐಆರ್‌ಸಿಟಿಸಿ ಪ್ರಾದೇಶಿಕ ಅಧಿಕಾರಿ ಡಿ.ಶಿವಕುಮಾರ್‌ ತಿಳಿಸಿದರು.

ಟಾಪ್ ನ್ಯೂಸ್

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hunasooru news

ಲಸಿಕಾಕರಣಕ್ಕೆ ಟಮಟೆ ಬಾರಿಸಿ, ಮೈಕ್ ಮೂಲಕ  ಜಾಗೃತಿ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

mysore news

ತಿರಸ್ಕರಿಸಿದ ಹಾಲನ್ನು ಏನ್‌ ಮಾಡಲಿ?

ಹುಣಸೂರು: ನಗರಸಭೆ ನೂತನ ಅಧ್ಯಕ್ಷೆ ಸೌರಭ ಸಿದ್ದರಾಜು ಅಧಿಕಾರ ಸ್ವೀಕಾರ

ಹುಣಸೂರು: ನಗರಸಭೆ ನೂತನ ಅಧ್ಯಕ್ಷೆ ಸೌರಭ ಸಿದ್ದರಾಜು ಅಧಿಕಾರ ಸ್ವೀಕಾರ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ನಮೀಬಿಯಾ ವಿಜಯ ಸಂಭ್ರಮ

ನಮೀಬಿಯಾ ವಿಜಯ ಸಂಭ್ರಮ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.