- Sunday 15 Dec 2019
ಮಾನ ಮರ್ಯಾದೆ ಇದ್ದರೆ ರಾಮುಲು ರಾಜಿನಾಮೆ ನೀಡಬೇಕು: ಸಿದ್ದರಾಮಯ್ಯ
Team Udayavani, Nov 19, 2019, 10:27 AM IST
ಮೈಸೂರು: ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಸವಾಲು ಹಾಕಿದ ವಿಚಾರಕ್ಕೆ ಇಂದು ಉತ್ತರಿಸಿದ ಸಿದ್ದರಾಮಯ್ಯ, ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಪಾಪ ಅವರು ನನ್ನ ಮೇಲೆ ಸೋತಿದ್ದಾರೇ ಅದಕ್ಕೆ ಈ ರೀತಿ ಮಾತನಾಡುತ್ತಾರೆ. ಶ್ರಿರಾಮುಲು ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಮುಲು ಅವರಿಗೆ ಮಾನ ಮರ್ಯಾದೆ ಇದ್ದರೆ ಆಗಲೇ ರಾಜೀನಾಮೆ ಕೊಡಬೇಕಿತ್ತು. ಡಿಸಿಎಂ ಮಾಡುತ್ತೇವೆ ಅಂತಾ ಪ್ರಚಾರ ಮಾಡಿದರು ಕೊಟ್ಟರಾ? ಎಂ.ಎಲ್.ಎ ಅಲ್ಲದವರಿಗೆ ಡಿಸಿಎಂ ಕೊಟ್ಟಿದ್ದಾರೆ. ಎಸ್.ಟಿ ಗೆ 7% ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ ಅಂದಿದ್ದರು. ಒಂದು ನಿಮಿಷ ಇರಲ್ಲ ಅಂದರು. ಏನಾಯ್ತು? ಎಂದು ಪ್ರಶ್ನಿಸಿದರು.
‘’ಪಾಪ ಶ್ರೀರಾಮುಲು ಬಗ್ಗೆ ಏನು ಮಾತನಾಡೋದು. ಸ್ವಾರ್ಥ ಮಾಡುವವರೆಲ್ಲಾ ಒಂದು ಕಡೆ ಸೇರಿಕೊಂಡಿದ್ದಾರೆ. ಮೌಲ್ಯ ಸಿದ್ದಾಂತ ಏನೂ ಇಲ್ಲ. ಇವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ’’ ಎಂದರು.
ಬಿಜೆಪಿ-ಜೆಡಿಎಸ್ನಿಂದ ಮತದಾರರಿಗೆ ಹಣ ಹಂಚಿಕೆ ಆರೋಪ ಮಾಡಿದ ಸಿದ್ದರಾಮಯ್ಯ, ಬಿಜೆಪಿ-ಜೆಡಿಎಸ್ ಪರ ಜನ ಇಲ್ಲ. ಹೀಗಾಗಿ ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. 30 ಸಾವಿರ ಸೀರೆ ಸಿಕ್ಕಿದ್ದು ಯಾರದು ?
ಅದು ಯಾರ ದುಡ್ಡು, ಎಲ್ಲಿಂದ ಬಂತು ? ಇದು ಅಕ್ರಮ ಅಲ್ವಾ? ಕಾನೂನಿನಲ್ಲಿ ಸೀರೆ ಹಂಚುವುದಕ್ಕೆ ಅವಕಾಶ ಇದೆಯಾ, ಸರ್ಕಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ವಿಭಾಗದಿಂದ ಇನ್ನಷ್ಟು
-
ಮೈಸೂರು: ಬಹುತ್ವದ ಭಾರತಕ್ಕೆ ಆಕ್ರಮಕಾರಿ ಸಂಸ್ಕೃತಿ ಆವರಿಸಿಕೊಂಡು ಜಾನಪದ ಸೊಗಡನ್ನು ನಾಶದತ್ತ ಕೊಂಡೊಯ್ಯುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ...
-
ಮೈಸೂರು: ಹನುಮಂತೋತ್ಸವ ಸಮಿತಿವತಿಯಿಂದ ಹನುಮ ಜಯಂತಿ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆಂಜನೇಯ ಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು....
-
ಮೈಸೂರು: ಜನರು ನೀಡಿದ ಅಧಿಕಾರವನ್ನು ಬಳಸಿ ಬಹುತ್ವದ ಭಾರತವನ್ನು ದಿವಾಳಿ ಮತ್ತು ಅರಾಜಕತೆಯತ್ತ ದೂಡಲಾಗುತ್ತಿದೆ ಎಂದು ಅಖೀಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ...
-
ಮೈಸೂರು: ಪೊಲೀಸರು ಒಳ್ಳೆಯವರ ಜೊತೆ ಒಳ್ಳೆಯವರಾಗಿ ಹಾಗೂ ಕೆಟ್ಟವರ ಜೊತೆ ಕೂಡ ಒಳ್ಳೆಯವರಾಗಿ ಅವರನ್ನು ಸರಿಯಾದ ದಾರಿಗೆ ತರುವಂತೆ ಮಾಡುವುದು ಜನಸ್ನೇಹಿ ಪೊಲೀಸ್...
-
ನಂಜನಗೂಡು: ಪಂಚ ಮಹಾರಥೋತ್ಸವ ಅಂಗವಾಗಿ ಶ್ರೀಕಂಠೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಶುಕ್ರವಾರ ಸಡಗರ, ಸಂಭ್ರಮದಿಂದ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ...
ಹೊಸ ಸೇರ್ಪಡೆ
-
ಮೂಲ್ಕಿ: ಇಲ್ಲಿನ ಶಿಮಂತೂರು ಪರಂಕಿಲ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ರಾತ್ರಿ ಮಹಿಳೋರ್ವರನ್ನು ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಶಾರದಾ...
-
ಬೆಂಗಳೂರು: ಹೃದಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಸ್ಚಾರ್ಜ್ ಆದರು. ಐದು ದಿನಗಳ ಹಿಂದೆ ಸಿದ್ದರಾಮಯ್ಯ...
-
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂದನಹಳ್ಳಿ ಸಮೀಪ ಶನಿವಾರ ತಡರಾತ್ರಿ ಖಾಸಗಿ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ...
-
ದಾವಣಗೆರೆ: ನೂತನವಾಗಿ ಮೊಬೈಲ್ ಶೋರೂಂ ಪ್ರಾರಂಭಿಸಿದ ಹಿನ್ನಲೆ, ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡಲು ಮುಂದಾಗಿದ್ದ ಅಂಗಡಿ ಸಿಬಂದಿಗೆ ಬೆಳ್ಳಂಬೆಳಗ್ಗೆಯೇ ಆಘಾತ...
-
ಲಂಡನ್: ಈ ವರ್ಷದ ವಿಶ್ವ ಸುಂದರಿ ಅಂತಿಮ ಸುತ್ತು ಶನಿವಾರ ರಾತ್ರಿ ನಡೆದಿದ್ದು ಅಂತಿಮ ಪ್ರಶಸ್ತಿ ಪ್ರಕಟವಾಗಿದೆ. ಜಮೈಕಾದ ಟೋನಿ ಆನ್ ಸಿಂಗ್ ವಿಶ್ವ ಸುಂದರಿ ಕಿರೀಟ...