ಎಸ್ಸೆಸ್ಸೆಲ್ಸಿ: ಹುಣಸೂರು ನಂ.1ಗೆ ಶ್ರಮಿಸಿ

Team Udayavani, Mar 2, 2020, 3:00 AM IST

sslc-hun

ಹುಣಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹುಣಸೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ದಾಖಲಿಸುವ ಜೊತೆಗೆ ಗುಣಾತ್ಮಕ ಫಲಿತಾಂಶ ಪಡೆದುಕೊಳ್ಳುವಲ್ಲಿ ಫ್ರೌಢಶಾಲಾ ಮುಖ್ಯ ಶಿಕ್ಷಕರು ವಿಶೇಷ ಶ್ರಮ ಹಾಕಬೇಕು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

25 ದಿನ ಬಾಕಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟವಾಗಿದ್ದು, ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ. ಮಕ್ಕಳ ಶಿಕ್ಷಣದ ಪ್ರಗತಿಗೆ ವಿಶೇಷ ಶ್ರಮ ಹಾಕಿದ್ದೀರಿ, ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದೀರಿ, ವಿಶೇಷ ತರಗತಿ ನಡೆಸುತ್ತಿದ್ದೀರಿ, ಇದು ಶ್ಲಾಘನೀಯ. ಆದರೆ, ಕಲಿಕೆಯಲ್ಲಿ ಅತಿ ಹಿಂದುಳಿದಿರುವ ವಿದ್ಯಾರ್ಥಿಗಳು ಕನಿಷ್ಠ ಪಾಸ್‌ ಆಗುವಂತಾಗಲು ಪರೀಕ್ಷೆಗೆ ಇನ್ನುಳಿದ 25 ದಿನಗಳಲ್ಲಿ ವಿಶೇಷ ಶ್ರಮಹಾಕಿ ಅವರೂ ಕೂಡ ಪಾಸಾಗುವಂತೆ ನೋಡಿಕೊಳ್ಳಬೇಕು. ಅಂಕಗಳ ಮೇಲೆ ಒತ್ತಡ ಹಾಕಬೇಡಿ, ಮಕ್ಕಳು ಸರ್ವಾಂಗೀಣ ಪ್ರಗತಿಗೆ ಗಮನಹರಿಸಬೇಕು. ರಾಜ್ಯದ 204 ಬ್ಲಾಕ್‌ಗಳಲ್ಲಿ ಕನಿಷ್ಠ ಮೂರನೇ ಸ್ಥಾನಗಳಿಸುವಲ್ಲಿ ನಿಮ್ಮ ಶ್ರಮವಿರಲಿ ಎಂದು ತಿಳಿಸಿದರು.

ಗುರಿ ತಲುಪಿ: ರಾಜ್ಯ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಡಾ|ಪುಷ್ಪಾ ಅಮರ್‌ನಾಥ್‌ ಮಾತನಾಡಿ, ತಾವು ಜಿಪಂ ಅಧ್ಯಕ್ಷರಾಗಿದ್ದ ವೇಳೆ “ಮೈಸೂರು-ಗುರಿ ನೂರು’ ಎಂಬ ಕಾರ್ಯಕ್ರಮದಡಿ ಶ್ರಮ ಹಾಕಿದಾಗ 27ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಬಂದಿರುವುದು ದೊಡ್ಡ ಸಾಧನೆಯಾಗಿದ್ದು, ಮುಂದೆಯೂ ಅದೇ ಮಾದರಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

4,062 ವಿದ್ಯಾರ್ಥಿಗಳು: ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌ ಮಾತನಾಡಿ, ಶಾಸಕ ಮಂಜುನಾಥರ ಶಿಕ್ಷಣದ ಮೇಲಿನ ವಿಶೇಷ ಆಸಕ್ತಿ ಪ್ರಶಂಸನೀಯ. ತಾಲೂಕಿನಲ್ಲಿ 4,062 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಫಲಿತಾಂಶ ಹೆಚ್ಚಳಕ್ಕೆ ಆರಂಭದಿಂದಲೂ ವಿವಿಧ ಕಾರ್ಯಕ್ರಮಗಳ ಮೂಲಕ ವಿಶೇಷ ಶ್ರಮ ಹಾಕಲಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ 355 ಮಕ್ಕಳು ಕನಿಷ್ಠ ಅಂಕ ಪಡೆದು ಪಾಸಾಗಲು ಶಿಕ್ಷಕರು ವೈಯಕ್ತಿಕವಾಗಿ ಗಮನಹರಿಸಿದ್ದು, ಈ ಬಾರಿ ಜಿಲ್ಲೆಗೆ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರಮ ಹಾಕಲಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್‌ಕುಮಾರ್‌, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ರೂಪಿಸಿರುವ ಕಾರ್ಯಕ್ರಮಗಳ ಕುರಿತು ಪಿಪಿಟಿ ಮೂಲಕ ಸಮಗ್ರ ಪಕ್ಷಿನೋಟ ನೀಡಿದರು.ಸಭೆಯಲ್ಲಿ ತಾಪಂ ಅಧ್ಯಕ್ಷೆ ಪದ್ಮಮ್ಮ, ಜಿಪಂ ಸದಸ್ಯರಾದ ಕಟ್ಟನಾಯಕ, ಸಾವಿತ್ರಿ ಮಂಜು, ತಹಶೀಲ್ದಾರ್‌ ಬಸವರಾಜ್‌, ತಾಪಂ ಇಒ ಗಿರೀಶ್‌ ಸೇರಿದಂತೆ ತಾಲೂಕಿನ 72 ಸರ್ಕಾರಿ ಫ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಹಾಸ್ಟೆಲ್‌ ವಾರ್ಡನ್‌, ಬಿಆರ್‌ಪಿ, ಸಿಆರ್‌ಪಿಗಳು ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿಯಿಂದ ಪದವಿ ಟಾಪರ್‌ಗೆ ಚಿನ್ನ: ಶಿಕ್ಷಣ ಪ್ರಗತಿಗಾಗಿ ತಮ್ಮ ತಾಯಿಯ ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿಯಿಂದ ಪದವಿ ತರಗತಿವರೆಗೆ ತಾಲೂಕಿಗೆ ಮೊದಲಿಗರಾಗುವ ಸರ್ಕಾರಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಗುವುದು. ಉತ್ತಮ ಫಲಿತಾಂಶ ಗಳಿಸುವ ಶಾಲೆಗೆ ಶಾಸಕರ ನಿಧಿಯಿಂದ ಅನುದಾನದ ಬಹುಮಾನ ನೀಡಲಾಗುತ್ತಿದೆ. ಇದನ್ನು ಈ ವರ್ಷವೂ ಮುಂದುವರಿಸಲಾಗಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.