Udayavni Special

ಪಾಲಿಕೆ 33 ಸ್ಥಾನಕ್ಕಾಗಿ ಎಲ್ಲರೂ ಶ್ರಮಿಸಿ


Team Udayavani, Aug 25, 2018, 11:33 AM IST

m1-paalike.jpg

ಮೈಸೂರು: ಪಾಲಿಕೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಕಾಂಗ್ರೆಸ್‌ ಕನಿಷ್ಠ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು. 

ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯ ತಿಳಿಯಲು ಚುನಾವಣೆಯೊಂದೇ ಮಾರ್ಗವಾದ ಹಿನ್ನೆಲೆಯಲ್ಲಿ ಪ್ರತಿ ಚುನಾವಣೆಯೂ ಪ್ರತಿಷ್ಠೆಯ ಚುನಾವಣೆಯಾಗಲಿದೆ.

ಅಲ್ಲದೆ ಬೆಂಗಳೂರು ಹೊರತುಪಡಿಸಿ ಮೈಸೂರು, ಹುಬ್ಬಳ್ಳಿ ಪ್ರಮುಖ ನಗರಗಳಾಗಿದ್ದು, ಹೀಗಾಗಿ ಈ ಬಾರಿ ಪಾಲಿಕೆ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‌ಗಳಲ್ಲಿ ಕನಿಷ್ಠ 33 ಸ್ಥಾನ ಗೆಲ್ಲುವ ಗುರಿಯೊಂದಿಗೆ ಎಲ್ಲಾ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಜೆಡಿಎಸ್‌, ಬಿಜೆಪಿ ಸ್ಪರ್ಧೆ ನಡುವೆ ನಾವು ಸ್ವತಂತ್ರ್ಯವಾಗಿ ಅಧಿಕಾರ ಹಿಡಿಯಬೇಕಿದೆ. ಆದ್ದರಿಂದ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಎಲ್ಲರೂ ಸಂಘಟಿತರಾಗಿ ಕೆಲಸ ಮಾಡುವ ಮೂಲಕ, ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅಲ್ಲದೆ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಸಹಜವಾಗಿ ಟಿಕೆಟ್‌ ಪಡೆಯಲು ಪೈಪೋಟಿ ನಡೆಯಲಿದೆ.

ಆದರೆ ಟಿಕೆಟ್‌ ದೊರೆಯದ ಮಾತ್ರಕ್ಕೆ ನಿರಾಸೆಗೊಳ್ಳುವ ಅಗತ್ಯವಿಲ್ಲ, ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯಲ್ಲಿ ಕೆಲಸ ಮಾಡಿದವರಿಗೆ ನ್ಯಾಯಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಚುನಾವಣೆಯಲ್ಲಿ ಉತ್ತಮ ಫ‌ಲಿತಾಂಶ ಪಡೆಯಲು ಸ್ಥಳೀಯ ಜನಪ್ರತಿನಿಧಿಗಳು ಸವಾಲಾಗಿ ಸ್ವೀಕರಿಸಿ, ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕಿದೆ ಎಂದರು.

ಸಂಸದ ಆರ್‌.ಧ್ರುವನಾರಾಯಣ್‌ ಮಾತನಾಡಿ, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಡಿಮೆ ಅವಧಿ ಇದೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಳೆದ ಬಾರಿ ಸ್ಪಷ್ಟ ಬಹುಮತ ನಮಗೆ ಸಿಗಲಿಲ್ಲ. ಈ ಬಾರಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಜತೆಗೆ ವ್ಯಕ್ತಿಯೂ ಮುಖ್ಯವಾಗಲಿದ್ದು, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಅವಕಾಶ ಸಿಗದ ಸಮಾಜದವರಿಗೆ ಬೇರೆ ಸ್ಥಾನಮಾನ ನೀಡುವ ಅವಕಾಶ ನೀಡಬೇಕು. ಇದರಿಂದ ಪಕ್ಷದ ಏಳಿಗೆಗೆ ಸಹಕಾರಿಯಾಗಲಿದೆ. ಎಲ್ಲರೂ ಸಂಘಟಿತರಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ, ಸ್ಪಷ್ಟ ಬಹುಮತ ಪಡೆಯಲು ಶ್ರಮಿಸೋಣ ಎಂದರು. 

ಶಾಕಸರಾದ ತನ್ವೀರ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಆರ್‌.ಧರ್ಮಸೇನಾ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌, ಕಳಲೆ ಕೇಶವಮೂರ್ತಿ, ಎಂ.ಸತ್ಯನಾರಾಯಣ, ಮುಖಂಡರಾದ ಸಿ.ಎಚ್‌.ವಿಜಯಶಂಕರ್‌, ಆತ್ಮಾನಂದ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರಾಧ್ಯಕ್ಷ ಆರ್‌.ಮೂರ್ತಿ ಸೇರಿದಂತೆ ಇನ್ನಿತರ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳು ಹಾಜರಿದ್ದರು.

ಭುಗಿಲೆದ್ದ ಅಸಮಾಧಾನ: ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಸಿಗದ ಕೆಲವು ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷರ ಎದುರಲ್ಲೇ ಅಸಮಾಧಾನ ಹೊರಹಾಕಿದರು. ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ, ಪಾಲಿಕೆ 22ನೇ ವಾರ್ಡಿನಿಂದ ತಮ್ಮ ಮಗಳಿಗೆ ಟಿಕೆಟ್‌ ಕೊಡಿಸುವ ನಿರೀಕ್ಷೆ ಹೊಂದಿದ್ದ ಚೌಹಳ್ಳಿ ಪುಟ್ಟಸ್ವಾಮಿ, ಈಶ್ಚರ್‌ ಚಕ್ಕಡಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳಾ ಟಿಕೆಟ್‌ ಆಕಾಂಕ್ಷಿಯೊಬ್ಬರು ದಿನೇಶ್‌ ಗುಂಡೂರಾವ್‌ ಅವರ ಎದುರು ಕಣ್ಣೀರಿಟ್ಟು ತಮ್ಮ ಅಸಮಾಧಾನ ಹೊರ ಹಾಕಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

hunasur

ಹುಣಸೂರು: ಜಮೀನಿನಲ್ಲಿ ಗಾಂಜಾ ಬೆಳೆ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಲಾರಿಯಡಿಗೆ ಸಿಲುಕಿದ  ಬೈಕ್ ಸವಾರ: ಮೈಸೂರಿನಲ್ಲಿ ನಡೆಯಿತು ಭೀಕರ ಅಪಘಾತ

ಲಾರಿಯಡಿಗೆ ಸಿಲುಕಿದ ಬೈಕ್ ಸವಾರ: ಮೈಸೂರಿನಲ್ಲಿ ನಡೆಯಿತು ಭೀಕರ ಅಪಘಾತ

30 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

30 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್: ಶಾಲೆ ಇಲ್ಲದ್ದಕ್ಕೆ ಬಾಲ್ಯ ವಿವಾಹ ದ್ವಿಗುಣ

ಮೈಸೂರು : ಕೋವಿಡ್ ; ಶಾಲೆ ಇಲ್ಲದ್ದಕ್ಕೆ ಬಾಲ್ಯ ವಿವಾಹ ದ್ವಿಗುಣ

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

ಕೊಂಕಣ ರೈಲ್ವೇಯಲ್ಲಿ ಅಡಿಕೆ ಸಾಗಾಟ: ಇಂದು ಸಾಂಕೇತಿಕ ಚಾಲನೆ

ಕೊಂಕಣ ರೈಲ್ವೇಯಲ್ಲಿ ಅಡಿಕೆ ಸಾಗಾಟ: ಇಂದು ಸಾಂಕೇತಿಕ ಚಾಲನೆ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.