ಪ್ಲಾಸ್ಟಿಕ್‌ ಮುಕ್ತ ಪರಿಸರಕ್ಕೆ ಸಹಕರಿಸಿ


Team Udayavani, Mar 3, 2020, 3:00 AM IST

plastic-muk

ತಿ.ನರಸೀಪುರ: ಪ್ರಕೃತಿದತ್ತವಾದ ಸಂಪತºರಿತ ನಾಡನ್ನು ನಮ್ಮ ಪೂರ್ವಜರು ನಮಗೆ ಉಳಿಸಿಕೊಟ್ಟಿದ್ದು, ಮುಂದಿನ ತಲೆಮಾರಿಗೂ ಉಳಿಸಿಕೊಳ್ಳಲು ನಾವೆಲ್ಲರೂ ಗಿಡಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್‌ ಸಲಹೆ ನೀಡಿದರು. ತಾಲೂಕಿನ ಸೋಮನಾಥಪುರ ಗ್ರಾಮದ ಬಳಿ ಬನ್ನೂರು ಮುಖ್ಯರಸ್ತೆಯಲ್ಲಿರುವ ಆರೋಹಣ ಸೆಂಟ್ರಲ್‌ ಸ್ಕೂಲ್‌ನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನಿಂದ ಬನ್ನೂರು ಮಾರ್ಗವಾಗಿ ಆರೋಹಣ ಶಾಲೆಗೆ ಬರುವ ಮಾರ್ಗದುದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಮರ ಗಿಡಗಳಿಗಿಂತ ಪ್ಲಾಸ್ಟಿಕ್‌ ಹೆಚ್ಚಾಗಿ ಕಣ್ಣಿಗೆ ಕಂಡವು. ಪರಿಸರಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಪ್ಲಾಸ್ಟಿಕ್‌ ಬಳಕೆಯನ್ನು ಹಂತ ಹಂತವಾಗಿ ಕೈಬಿಡಬೇಕು. ಪ್ಲಾಸ್ಟಿಕ್‌ ಮುಕ್ತ ಪರಿಸರಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಶಿಕ್ಷಣವೇ ಪರಿಹಾರ: ಸಾಮಾಜಿಕ ವ್ಯವಸ್ಥೆಯ ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರವಾಗಿದ್ದು, ಶಿಕ್ಷಣದಿಂದ ಜೀವನದಲ್ಲಿ ನಿರ್ದಿಷ್ಟ ಗುರಿ ಸಾಧಿಸಲು ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಸಾಮಾಜಿಕ ಬದ್ಧತೆ ಹಾಗೂ ಪ್ರಗತಿಪರ ಚಿಂತನೆಯುಳ್ಳ ತಂಡವೊಂದು ಉತ್ತಮ ಪರಿಸರದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸಲಹೆ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮುಂದಿನ ಕಾರ್ಯಕ್ರಮಕ್ಕೆ ಬರುವ ವೇಳೆ ಶಾಲೆಯ ಮುಂಭಾಗದ ನಿವೇಶನದಲ್ಲಿ ಮರಗಿಡಗಳು ಕಾಣುವಂತಿರಬೇಕು. ಹಸಿರು ಪರಿಸರ ಕಂಗೊಳಿಸಬೇಕು. ಈ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಜೈವಿಕ ಉದ್ಯಾನವನ: ಆರೋಹಣ ಎಜುಕೇಷನಲ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ ಗೌರವ ಕಾರ್ಯದರ್ಶಿ ಬಿ.ಎಸ್‌.ಯೋಗೇಂದ್ರ ಮಾತನಾಡಿ, ಶಾಲೆಯ ವಿಶಾಲ ಆವರಣದಲ್ಲಿ ಜೀವ ವೈವಿಧ್ಯತೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಜೈವಿಕ ಉದ್ಯಾನವನ ನಿರ್ಮಿಸಲಾಗುವುದು. ಯದುವೀರ ಒಡೆಯರ್‌ ಸಲಹೆಯಂತೆ ಶಾಲೆಯ ಸುತ್ತಲಿನ ಪರಿಸರವನ್ನು ಮರಗಿಡಗಳಿಂದ ಹಸಿರು ಮಯವಾಗಿ ಕಂಗೊಳಿಸುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಕಟ್ಟಡ ಉದ್ಘಾಟನೆಗೆ ಆಗಮಿಸಿದ ಯದುವೀರ ಒಡೆಯರ್‌ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಆರೋಹಣ ಸೆಂಟ್ರಲ್‌ ಸ್ಕೂಲ್‌ ಆವರಣಕ್ಕೆ ಕರೆತರಲಾಯಿತು. ಸಾಂಕೇತಿಕವಾಗಿ ಸಸಿಯೊಂದನ್ನು ನೆಡುವ ಮೂಲಕ ಶಾಲೆಯನ್ನು ಹಸಿರೀಕರಣ ಗೊಳಿಸುವ ಕಾರ್ಯಕ್ಕೆ ಯದುವೀರ ಚಾಲನೆ ನೀಡಿದರು. ಈ ವೇಳೆ, ಟ್ರಸ್ಟ್‌ ಅಧ್ಯಕ್ಷ ವೈ.ಎಚ್‌.ಹನುಮಂತೇಗೌಡ, ಕಾರ್ಯದರ್ಶಿ ಎನ್‌.ಎಂ.ರಾಮಚಂದ್ರ, ಉಪಾಧ್ಯಕ್ಷ ಬಿ.ಎನ್‌. ಸುರೇಶ್‌, ಖಜಾಂಚಿ ಮಾಣಕ್‌ ಚಂದ್‌, ನಿರ್ದೇಶಕರಾದ ಟಿ. ವಾಸುದೇವ್‌, ದೀಪಕ್‌ ಕುಮಾರ್‌ ಜೈನ್‌, ರಾಕೇಶ್‌ ಜೈನ್‌,

ರಮ್ಯಾ ರಾಜ್‌ ಗಿರೀಶ್‌, ಸೂರಜ್‌, ಎಸ್‌.ಬಸವೇಗೌಡ, ಸುಭಾಷ್‌ ಚೌಧರಿ, ಜಿಪಂ ಸದಸ್ಯ ಎಸ್‌.ವಿ. ಜಯಪಾಲ ಭರಣಿ, ತಾಪಂ ಸದಸ್ಯ ರಾಮಲಿಂಗಯ್ಯ, ಸಮಾಜ ಸೇವಕ ಮಹೇಂದ್ರಸಿಂಗ್‌ ಕಾಳಪ್ಪ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಟಿ.ಪಿ.ಸುಬ್ರಹ್ಮಣ್ಯ, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಸ್‌. ರಾಮಸ್ವಾಮಿ, ನನ್ನವ್ವ ಕಲಾತಂಡದ ಅಧ್ಯಕ್ಷ ವೈ.ಜಿ. ಮಹದೇವ, ಯಾಚೇನಹಳ್ಳಿ ಪಿಎಸಿಸಿಎಸ್‌ ಸಿಇಒ ವೈ.ಕೆ. ಕ್ಯಾತೆಗೌಡ ಇತರರಿದ್ದರು.

ಟಾಪ್ ನ್ಯೂಸ್

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಬ್ಯಾಂಕಿಂಗ್‌ ಬಡ್ಡಿ ದರಕ್ಕೆ ಡ್ರ್ಯಾಗನ್‌ ಕತ್ತರಿ;ಮಂದಗತಿಗೆ ಹೊರಳಿದ ಚೀನ ಆರ್ಥಿಕತೆಯ ಪರಿಣಾಮ

ಬ್ಯಾಂಕಿಂಗ್‌ ಬಡ್ಡಿ ದರಕ್ಕೆ ಡ್ರ್ಯಾಗನ್‌ ಕತ್ತರಿ;ಮಂದಗತಿಗೆ ಹೊರಳಿದ ಚೀನ ಆರ್ಥಿಕತೆಯ ಪರಿಣಾಮ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫೀವರ್ ಕ್ಲಿನಿಕ್ ಮತ್ತು ಆಂಬುಲೆನ್ಸ್ ಗೆ ಎಂಎಲ್‌ಸಿ ವಿಶ್ವನಾಥ್ ಚಾಲನೆ

ಫೀವರ್ ಕ್ಲಿನಿಕ್ ಮತ್ತು ಆಂಬುಲೆನ್ಸ್ ಗೆ ಎಂಎಲ್‌ಸಿ ವಿಶ್ವನಾಥ್ ಚಾಲನೆ

ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಅಭಿವೃದ್ದಿ ಹೊಂದಿ: ರಾಜು

ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಅಭಿವೃದ್ದಿ ಹೊಂದಿ: ರಾಜು

ಕರಾಟೆಯಲ್ಲಿ ಹುಣಸೂರು ಮಹಿಳಾ ಪದವಿ ಕಾಲೇಜಿಗೆ ಮೂರು ಪದಕ

ಕರಾಟೆಯಲ್ಲಿ ಹುಣಸೂರು ಮಹಿಳಾ ಪದವಿ ಕಾಲೇಜಿಗೆ ಮೂರು ಪದಕ

15protest

ಸ್ತಬ್ಧಚಿತ್ರ ತಿರಸ್ಕಾರದ ವಿರುದ್ಧ ಪ್ರತಿಭಟನೆ: ಪಿರಿಯಾಪಟ್ಟಣ ತಹಶೀಲ್ದಾರ್ ಗೆ ಮನವಿ

ನಾಡು ಬೇಡ, ಕಾಡು ವಾಸವೇ ಲೇಸು!

ನಾಡು ಬೇಡ, ಕಾಡು ವಾಸವೇ ಲೇಸು!

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

್ತಯುಕಮನಬವಚಷ

ಚುನಾವಣೆಯಲ್ಲಿ ನಿರೀಕ್ಷೆ ಗಿಂತ ಹೆಚ್ಚು ಮತ

ರತಯುಇಕಜಹಗಷ

ಮಲಕಂಬ-ರೋಪ್‌ ಮಲ್ಲಕಂಬ ಸರ್ಧೆಗೆ  ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.