ಮೈಸೂರಲ್ಲಿ ಜನತಾ ಕರ್ಫ್ಯೂಗೆ ಬೆಂಬಲ


Team Udayavani, Mar 23, 2020, 3:00 AM IST

mysoralli

ಮೈಸೂರು: ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆ ಸಂಪೂರ್ಣವಾಗಿ ಲಾಕ್‌ಡೌನ್‌ ಆಗಿದ್ದು, ಜಿಲ್ಲಾದ್ಯಂತ ಜನ ದಿನಪೂರ್ತಿ ಮನೆಯಿಂದ ಆಚೆ ಬರದೆ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಜನತಾ ಕರ್ಫ್ಯೂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಜನತೆ ಬೆಳಗ್ಗೆಯಿಂದ ಸಂಜೆವರೆಗೂ ಮನೆಯಿಂದ ಹೊರ ಬರದೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು. ಪರಿಣಾಮ ಇಡೀ ಜಿಲ್ಲೆಯೇ ಭಾನುವಾರ ಸ್ತಬ್ಧವಾಗಿತ್ತು.

ಪೊಲೀಸರಿಂದ ಜಾಗೃತಿ: ನಗರದ ಎಲ್ಲಾ ರಸ್ತೆಗಳಲ್ಲಿಯೂ ಪೊಲೀಸ್‌ ಸಿಬ್ಬಂದಿ ಕಾವಲಿದ್ದು, ರಸ್ತೆಯಲ್ಲಿ ಸಂಚರಿಸುವವರಿಗೆ ಮನೆಯಲ್ಲೇ ಇದ್ದು, ಕೊರೊನಾ ವೈರಸ್‌ ಹರಡುವಿಕೆಯಿಂದ ದೂರವಿರಿ ಎನ್ನುವ ಮೂಲಕ ಜಾಗೃತಿ ಮೂಡಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೈಕ್‌ ನಲ್ಲಿ ಅನೌನ್ಸ್‌ ಮಾಡುವ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ರಸ್ತೆಗಿಳಿದ ಯುವಕರು: ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಮೈಸೂರಿನಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾದ ಹಿನ್ನೆಲೆ ಇಡೀ ನಗರವೇ ಸ್ತಬ್ಧಗೊಂಡರೂ ಸಾಮಾಜಿಕ ಜಾಲತಾಣ àಳಿರುವ ಯುವ ಸಮೂಹ ನಗರ ಪ್ರದಕ್ಷಣೆ ಹಾಕುವ ಮೂಲಕ ಖಾಲಿ ರಸ್ತೆಯಲ್ಲಿ ನಿಂತು ತಮ್ಮ ಮೊಬೈಲ್‌ಗ‌ಳಲ್ಲಿ ಸೆಲ್ಫಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದರು.

ಈ ಸಂದರ್ಭ ಅನಗತ್ಯವಾಗಿ ನಗರದ ಪ್ರದಕ್ಷಣೆ ಹಾಕುತ್ತಿದ್ದ ಯುವಕರಿಗೆ ಪೊಲೀಸರು ಕೊರೊನಾದ ಬಗ್ಗೆ ಅರಿವು ಮೂಡಿಸಿ ಸ್ಥಳದಿಂದ ಕಳುಹಿಸಿದರು. ಇನ್ನು ನಿಲ್ದಾಣಕ್ಕಾಗಿ ಮೈಸೂರಿಗೆ ಬಂದ ಕೆಲ ರೈಲುಗಳಲ್ಲಿ ಆಗಮಿಸಿದ ಪ್ರಯಾಣಿಕರನ್ನು ರೈಲ್ವೆ ಪೊಲೀಸರು ಪರೀಕ್ಷೆಗೆ ಕಳುಹಿಸಿದ್ದು, ಕಂಡು ಬಂದಿತು.

ವಾಹನವಿಲ್ಲದೆ ಪರದಾಡಿದ ಕುಟುಂಬ: ಜಿಲ್ಲೆಯ ಬಿಳಿಕೆರೆಯಲ್ಲಿ ಉದ್ಯೋಗಕ್ಕಾಗಿ ಒಡಿಸ್ಸಾದಿಂದ ಖಾಲಿ ರೈಲಿನಲ್ಲಿ ಮೈಸೂರಿಗೆ ಆಗಮಿಸಿದ ಕುಟುಂಬವೊಂದು ವಾಹನವಿಲ್ಲದೆ ಪರದಾಡಿತು. ಮೈಸೂರಿನಿಂದ ಬಿಳಿಕೆರೆಗೆ ಹೋಗಲಾರದೆ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಹುಣಸೂರು ರಸ್ತೆಯಲ್ಲಿ ಕಾದುಕುಳಿತರು. ಜನತಾ ಕರ್ಫ್ಯೂ ಆರಂಭವಾಗುವ ಮುನ್ನವೇ ಬಿಳಿಕೆರೆ ಸೇರಿಕೊಳ್ಳಬೇಕೆಂಬ ಉದ್ದೇಶದಿಂದ ಒಡಿಶಾದಿಂದ ಹೊರಟಿದ್ದ ಕುಟುಂಬ ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು.

ಬೆಳಗಿನ ಜಾವವೇ ಬೆಂಗಳೂರಿನಿಂದ ಖಾಲಿ ರೈಲಿನಲ್ಲಿ ಮೈಸೂರಿಗೆ ಆಗಮಿಸಿದರೂ, ಮೈಸೂರಿನಿಂದ ತೆರಳಲು ವಾಹನವಿಲ್ಲದೆ ರಸ್ತೆ ಬದಿಯಲ್ಲಿ ಕುಳಿತರು. ಬೆಂಗಳೂರಿನಿಂದ ಮುಂಜಾನೆಯೇ ಮೈಸೂರಿಗೆ ಆಗಮಿಸಿದ ಎರಡು ಕುಟುಂಬ ಚಾಮರಾಜ ನಗರಕ್ಕೆ ತೆರಳಲಾಗದೆ ಸಮಸ್ಯೆ ಅನುಭವಿಸಿತು. ಜೊತೆಗೆ ನಗರದಲ್ಲಿ ಅಂಗಡಿ, ಹೋಟೆಲ್‌ ಬಂದ್‌ ಆಗಿದ್ದರಿಂದ ಊಟ, ನೀರು ಇಲ್ಲದೆ ಪರಿತಪಿಸಿದರು. ಬಳಿಕ ಮೈಸೂರಿನಲ್ಲಿ ರೈಲು ನಿಲ್ಲಿಸಲು ಸ್ಥಳಾವಕಾಶವಿಲ್ಲದೇ ಚಾಮರಾಜ ನಗರಕ್ಕೆ ಹೋಗುತ್ತಿದ್ದ ತಿರುಪತಿ ಎಕ್ಸ್‌ಪ್ರೆàಸ್‌ ರೈಲುಗಾಡಿ ಮೂಲಕ ಹೊರಟರು.

ಜಿಲ್ಲೆ ಸಂಪೂರ್ಣ ಲಾಕ್‌ಡೌನ್‌: ಪ್ರತಿ ಭಾನುವಾರ ಸರ್ಕಾರಿ ನೌಕರರಿಗೆ ರಜೆ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು ಜನದಟ್ಟಣೆಯಿಂದ ಕೂಡಿರುತ್ತಿದ್ದವು. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದರಿಂದ ಇಡೀ ಜಿಲ್ಲಾದ್ಯಂತ ಜನ ಮನೆಯಲ್ಲೇ ಉಳಿದು ವಿಶ್ರಾಂತಿ ಪಡೆಯುವ ಮೂಲಕ ಸಂಪೂರ್ಣವಾಗಿ ಜನತಾ ಕರ್ಫ್ಯೂಗೆ ಬೆಂಬಲಿಸಿದರು.

ಬೆಳಗ್ಗೆಯಿಂದಲೂ ಸರ್ಕಾರಿ ಸಾರಿಗೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳೂ ರಸ್ತೆಗಳಿಗೆ ಇಳಿಯಲಿಲ್ಲ. ಹೋಟಲ, ಅಂಗಡಿ ಸೇರಿದಂತೆ ಜನತೆ ಸ್ವಯಂ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಮೈಸೂರು ನಗರದ ಎಲ್ಲಾ ರಸ್ತೆ ಹಾಗೂ ವೃತ್ತಗಳು ಮತ್ತು ವಾಣಿಜ್ಯ ಕೇಂದ್ರಗಳು ಖಾಲಿ ಖಾಲಿಯಾಗಿದ್ದವು. ಬೆಳಗ್ಗೆ ಬೆರಳೆಣಿಕೆಯಷ್ಟು ಜನರು ಕಂಡು ಬಂದರೆ, ಮಧ್ಯಾಹ್ನದ ವೇಳೆ ರಸ್ತೆಯುದ್ದಕ್ಕೂ ಒಬ್ಬರೇ ಒಬ್ಬ ವ್ಯಕ್ತಿಯೂ ಕಾಣಸಿಗಲಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಜನತೆ ಕೊರೊನಾ ವೈರಸ್‌ಗೆ ಮತ್ತಷ್ಟು ಆತಂಕಗೊಂಡು ದಿನವಿಡೀ ಮನೆಯಿಂದ ಹೊರ ಬರಲಿಲ್ಲ.

ಜಿಲ್ಲಾಡಳಿತ ಮುಂಚಿನಿಂದಲೂ ಹಲವು ಕಟ್ಟುನಿಟ್ಟಿನ ಕ್ರಮಕೈಗೊಂಡು ಪ್ರತಿಯೊಬ್ಬ ವಿದೇಶಿ ವ್ಯಕ್ತಿ ಮೇಲೆ ನಿಗಾ ಇರಿಸಿದೆ. ಅಲ್ಲದೇ, ವಿದೇಶದಿಂದ ಆಗಮಿಸಿದ ವ್ಯಕ್ತಿಗಳ ಆರೋಗ್ಯದ ಮೇಲೆಯೂ ಕಣ್ಣಿಟ್ಟಿದೆ. ನಗರದ ಕೇಂದ್ರಿಯ ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜನ ಜಂಗುಳಿಯಿಂದ ತುಂಬಿರುತ್ತಿದ್ದ ನಗರದ ಬಡಾವಣೆ, ಮಾರುಕಟ್ಟೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಒಟ್ಟಿನಲ್ಲಿ ಮೈಸೂರು ಜಿಲ್ಲೆಯ ಜನತೆ ಜನತಾ ಕರ್ಫ್ಯೂಗೆ ಅಭೂತಪೂರ್ವವಾಗಿ ಸ್ಪಂದಿಸಿ ಕೊರೊನಾ ವೈರಸ್‌ ಹೊಡೆದೋಡಿಸಲು ಪಣತೊಟ್ಟರು.

ಟಾಪ್ ನ್ಯೂಸ್

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆಯಲ್ಲೇ ಹರಡಿದ್ದ ಹುರುಳಿ ಸೊಪ್ಪು : ಗರ್ಭಿಣಿಯನ್ನು ಹೊತ್ತ ಆಂಬ್ಯುಲೆನ್ಸ್ ಸವಾರನ ಪರದಾಟ

ಆಂಬ್ಯುಲೆನ್ಸ್ ಚಕ್ರಕ್ಕೆ ಹುರುಳಿ ಸೊಪ್ಪು ಸಿಲುಕಿ ಅವಾಂತರ : ಗರ್ಭಿಣಿ ಪರದಾಟ, ಚಾಲಕ ಸುಸ್ತು

ಮೋದಿಯಿಂದ ಗ್ರಾಪಂ ಸ್ವರೂಪ ಬದಲಾಗಿದೆ: ಸಂಸದ ಪ್ರತಾಪ್ ಸಿಂಹ

ಮೋದಿಯಿಂದ ಗ್ರಾಪಂ ಸ್ವರೂಪ ಬದಲಾಗಿದೆ: ಸಂಸದ ಪ್ರತಾಪ್ ಸಿಂಹ

1-aseqwe

ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !

pratap

ಗುಣಮಟ್ಟದ ಆಧಾರದಲ್ಲಿ ಸ್ತಬ್ಧ ಚಿತ್ರ ಆಯ್ಕೆ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

ಹುಣಸೂರು : ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಗಣತಿಗೆ ಸಕಲ ಸಿದ್ದತೆ

ಹುಣಸೂರು : ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಗಣತಿಗೆ ಸಕಲ ಸಿದ್ದತೆ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ತಯತಯಜಯಜಹಗ್

ಪಾಟೀಲ-ಕಾರಜೋಳ ವಿರುದ್ದ ಟೀಕೆ ನಿಲ್ಲಿಸಲು ಮನವಿ

ಗಜಹಕಹಗ

ನಮ್ಮಲ್ಲಿರುವ ಜ್ಞಾನ ಪರಾಮರ್ಶೆಯೇ ಸಂಶೋಧನೆ: ತುಳಸಿಮಾಲಾ

ರತಯುಇಒಕಜಹಗ್ದಸ

ಪುರಸಭೆ ಅಧ್ಯಕ್ಷೆಯಾಗಿ ಸುನೀತಾ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.