5.5 ಕೋಟಿ ರೂ. ವೆಚ್ಚದಡಿ ಬಾಲಸ್ನೇಹಿ ಅಂಗನವಾಡಿ


Team Udayavani, May 9, 2022, 3:54 PM IST

Untitled-1

ಹುಣಸೂರು: ಶಾಸಕ ಎಚ್‌.ಪಿ.ಮಂಜುನಾಥರ ಆಶಯದಂತೆ ತಾಲೂಕಿನ 194 ಅಂಗನವಾಡಿ ಕೇಂದ್ರ ಗಳನ್ನು ವಿವಿಧ ಅನುದಾನದಡಿ ಬಾಲಸ್ನೇಹಿ ಅಂಗನ ವಾಡಿ ಗಳನ್ನಾಗಿ ಪರಿವರ್ತಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಾಪಂ ಇಒ ಗಿರೀಶ್‌ ಹೇಳಿದರು.

ತಾಪಂ ಆಡಳಿತಾಧಿಕಾರಿ ಎಚ್‌.ಸಿ.ನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆ ಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ ಮಾಹಿತಿ ನೀಡಿದರು. ತಾಲೂಕಿನಲ್ಲಿ 366 ಅಂಗನವಾಡಿಗಳಿದ್ದು, ಈಗಾಗಲೇ ಮನುಗನಹಳ್ಳಿ ಗ್ರಾಪಂನ ಆರು ಕೇಂದ್ರಗಳನ್ನು ಬಾಲ ಸ್ನೇಹಿ ಕೇಂದ್ರಗಳನ್ನಾಗಿಸಿದ್ದಾರೆ. ಉತ್ತಮವಾಗಿ ರುವುದನ್ನು ಹೊರತುಪಡಿಸಿ ಉಳಿದಂತೆ ಮೊದಲ ಹಂತದಲ್ಲಿ 195 ಅಂಗನವಾಡಿಗಳನ್ನು ಮಕ್ಕಳ ಆಕರ್ಷಣೆ ಗೊಳ್ಳುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

5.5 ಕೋಟಿ ವೆಚ್ಚದಡಿ ಹೈಟೆಕ್‌ ಸ್ಪರ್ಶ: ಗೋಡೆಗಳ ಮೇಲೆ ಚಿತ್ರ ಬಿಡಿಸುವುದು, ಕುಡಿಯುವ ನೀರು, ಶೌಚಾಲಯ, ಸೋಲಾರ್‌, ಪ್ರೊಜೆಕ್ಟರ್‌, ಆಟಿಕೆಗಳ ಅಳವಡಿಕೆ ಮೂಲಕ ಬಾಲ ಸ್ನೇಹಿಯಾಗಿಸಲು ಸುಮಾರು 5.5 ಕೋಟಿ ರೂ. ವೆಚ್ಚದಡಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ತಾಪಂನ 1.20 ಕೋಟಿ, ಗ್ರಾಪಂನ 15ನೇ ಹಣಕಾಸು ಯೋಜನೆಯಡಿ ಒಂದು ಕೋಟಿ, ಜಿಪಂ ನಿಂದ 50 ಲಕ್ಷ ಅನುದಾನ ಸಿಗಲಿದ್ದು, ಉಳಿಕೆ ಅನುದಾನಕ್ಕೆ ಶಾಸಕ-ಸಂಸದರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

81 ಬಾಡಿಗೆ ಕೇಂದ್ರ: ಈಗಾಗಲೇ 20ಲಕ್ಷ ವೆಚ್ಚದಡಿ 40 ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ನಗರದ 20 ಕೇಂದ್ರ ಸೇರಿದಂತೆ 81 ಬಾಡಿಗೆ ಅಂಗನವಾಡಿಗಳಿವೆ. 8 ಕೇಂದ್ರಗಳು ಸಂಪೂರ್ಣ ಶಿಥಿಲಗೊಂಡಿವೆ ಎಂದು ಸಿಡಿಪಿಒ ರಶ್ಮಿ ತಿಳಿಸಿದರೆ, ನಗರ ವ್ಯಾಪ್ತಿಯಲ್ಲಿ ಅಂಗನವಾಡಿಕೇಂದ್ರಗಳಿಗೆ ನಗರಸಭೆ ವತಿಯಿಂದ ನಿವೇಶನ ಕೊಡಿಸಲು ಕ್ರಮವಹಿಸಿವುದಾಗಿ ಪೌರಾಯುಕ್ತ ರವಿಕುಮಾರ್‌ ಭರವಸೆ ನೀಡಿದರು.

ಸಿಡಿಪಿಒ ಬೇಸರ: ತಾಲೂಕಿನಲ್ಲಿ 24 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. 11 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಾಲ್ಯವಿವಾಹ ತಡೆಯಲು ಪೊಲೀಸ್‌ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಸಹಕಾರ ಸಿಗುತ್ತಿಲ್ಲವೆಂದು ಸಿಡಿಪಿಒ ರಶ್ಮಿ ಬೇಸರ ವ್ಯಕ್ತಪಡಿಸಿದರು. ಅಪೂರ್ಣಭವನ: 2016-17ನೇ ಸಾಲಿನಿಂದಲೂ 8 ಅಂಬೇಡ್ಕರ್‌ ಭವನಗಳ ಹಾಗೂ ಚಿಕ್ಕಹುಣಸೂರು ಕೆರೆಯನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಕೋಟಿ ವೆಚ್ಚದ ಯೋಜನೆ ಹಾಗೂ ಇತರೆ ಕಾಮಗಾರಿಗಳು ಅಪೂರ್ಣಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಆಡಳಿತಾಧಿಕಾರಿ ನಂದ, ಶಾಸಕರೊಂದಿಗೆ ಚರ್ಚಿಸಿ ಪೂರ್ಣಗೊಳಿಸಲು ಕ್ರಮವಹಿಸಿರೆಂದು ಭೂಸೇನಾ ನಿಗಮದ ಎಂಜಿನಿಯರ್‌ ವಿಜಯ್‌ಗೆ ಸೂಚಿಸಿದರು.

ನಗರದ ಜಗಜೀವನರಾಂ ಭವನ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಶಾಸಕರು ಅನುದಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆಂದು ಸಮಾಜ ಕಲ್ಯಾಣಾಧಿಕಾರಿ ಮೋಹನ್‌ಕುಮಾರ್‌ ಮಾಹಿತಿ ನೀಡಿದರು.

ಕಳಪೆ ಕಾಮಗಾರಿ ಎಚ್ಚರ: ಬಿಳಿಕೆರೆ ಭಾಗದ ವಡ್ಡರಹಳ್ಳಿ ಹಾಗೂ ಇತರೆಡೆ ಜಲಜೀವನ್‌ ಮಿಷನ್‌ ಯೋಜನೆಯ 10.28 ಕೋಟಿ ವೆಚ್ಚದ 28ರ ಕಾಮಗಾರಿಗಳ ಪೈಕಿ 24 ಪೂರ್ಣಗೊಂಡಿವೆ ಎಂದು ಎಇಇ ಮಹೇಶ್‌ರ ಮಾಹಿತಿಗೆ ಕೆಲ ಕಾಮಗಾರಿ ಕಳಪೆಯಾಗಿದೆ ಎಂಬ ದೂರು ಬಂದಿದೆ. ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ನಡೆಸ ಬೇಕೆಂದು ಆಡಳಿತಾಧಿಕಾರಿ ಎಚ್‌.ಸಿ.ನಂದ ಕಟ್ಟುನಿಟ್ಟಿನ ಆದೇಶಿಸಿದರೆ, ಹರೀನಹಳ್ಳಿ ಕುಡಿಯುವ ನೀರಿನ ಯೋಜನೆಯನ್ನೆಕೆ ಪೂರ್ಣಗೊಳಿಸಿಲ್ಲ ವೆಂದು ಪ್ರಶ್ನಿಸಿ ಅಗತ್ಯಕ್ರಮ ಗೊಳ್ಳುವಂತೆ ಇಒಗೆ ಸೂಚನೆ ನೀಡಿದರು.

ಜಿಪಂ ಎಂಜಿನಿಯರಿಂಗ್‌ ಉಪವಿಭಾಗವು ಹೊಸ ಗ್ರಾಪಂಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತಕ್ಷಣವೇ ಎಸ್ಟಿಮೇಟ್‌ ತಯಾರಿಸಬೇಕೆಂದು ಎಇಇ ಪ್ರಭಾಕರ್‌ಗೆ ಹಾಗೂ ಎಲ್ಲಾ ಇಲಾಖೆಗಳವರು ಮೇ 10ರೊಳಗೆ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದು ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಇಓ ಗಿರೀಶ್‌ ಸೂಚಿಸಿದರು.

11 ಕ್ಷಯ ಪತ್ತೆ: ತಾಲೂಕಿನಲ್ಲಿ 11 ಕ್ಷಯ, 3 ಕುಷ್ಠ ರೋಗ ಪತ್ತೆಯಾಗಿದೆ. 73 ಉಪ ಕೇಂದ್ರಗಳ ಪೈಕಿ 44 ಸಮುದಾಯ ಆರೋಗ್ಯಾಧಿಕಾರಿಗಳು ನೇಮಕಗೊಂಡಿದ್ದಾರೆಂದು ತಾ.ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ತಿಳಿಸಿದರು. ವಿವಿಧ ಇಲಾಖೆಗಳ ಮುಖ್ಯಸ್ಥರು ಪ್ರಗತಿ ಪರಿಶೀಲನಾವರದಿ ಮಂಡಿಸಿದರು.

ರಸಬಾಳೆ-ಮಲ್ಲಿಗೆಗೆ ಆದ್ಯತೆ : ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲವೆಂದು ಎಡಿಎ ವೆಂಕಟೇಶ್‌ ತಿಳಿಸಿದರೆ, ಹನಗೋಡು ಭಾಗದಲ್ಲಿ ರಸಬಾಳೆ, ಬಿಳಿಕೆರೆ ಭಾಗದಲ್ಲಿ ಮೈಸೂರು ಮಲ್ಲಿಗೆ ಬೆಳೆಯಲು ಪ್ರೋತ್ಸಾಹಿಸಲಾಗುವುದೆಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ನೇತ್ರಾವತಿ ತಿಳಿಸಿದರು.

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.