Udayavni Special

ಮತದಾರರ ರೂಪದಲ್ಲಿ ಭಗವಂತನ ಕೃಪೆ

Team Udayavani, Dec 19, 2019, 3:00 AM IST

matadaarara

ಕೆ.ಆರ್‌.ಪೇಟೆ: ವಿರೋಧಿಗಳ ಟೀಕೆ ಮತ್ತು ಕಿರುಕುಳದಿಂದ ನನ್ನನ್ನು ರಕ್ಷಿಸಲು ಭಗವಂತನೇ ಜನರ ರೂಪದಲ್ಲಿ ಬಂದು ಉಪ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಕೊಟ್ಟಿದ್ದಾರೆಂದು ಶಾಸಕ ನಾರಾಯಣಗೌಡ ಹೇಳಿದರು.

ತಾಲೂಕಿನ ಶೀಳನೆರೆ ಹೋಬಳಿಯ ಕಾಗೇಪುರ ಗ್ರಾಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದ ಉಪ ಸಮರದಲ್ಲಿ ಅಭಿವೃದ್ಧಿ ಪರವಾಗಿ ಮತನೀಡಿ ತಾಲೂಕಿನ ಸುಪುತ್ರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರಗೊಳಿಸಲು ಕೆ.ಆರ್‌.ಪೇಟೆಯಲ್ಲಿ ಕಮಲ ಅರಳಿಸಿ ಬಿಜೆಪಿ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಆಶೀರ್ವಾದ ಪಡೆಯಲು ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೂ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವಿರೋಧಿಗಳು ನನ್ನ ವಿರುದ್ಧ ನಿರಂತರ ಅಪಪ್ರಚಾರ ನಡೆಸಿ ನನ್ನ ವಿರುದ್ಧ ಜನಸಾಮಾನ್ಯರನ್ನು ಎತ್ತಿಕಟ್ಟಿದ್ದರೂ ಜನತೆ ಅಪಪ್ರಚಾರಗಳಿಗೆ ಕಿವಿಗೊಡದೆ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಪರವಾಗಿ ಮತ ಚಲಾಯಿಸಿದ್ದಾರೆ. ನನ್ನ ಜೀವನದ ಕೊನೆ ಉಸಿರಿರುವವರೆಗೂ ಜನತೆಯ ನಮ್ರ ಸೇವಕನಂತೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ಅಭಿವೃದ್ಧಿಗೆ ಮಾತ್ರ ಆದ್ಯತೆ: ನಾನು ಅಭಿವೃದ್ಧಿ ಬಗ್ಗೆ ಮಾತ್ರ ಯೋಚನೆ ಮಾಡುತ್ತೇನೆ. ಮನೆಯಲ್ಲಿರುವವರ ಬಗ್ಗೆ ಮಾತನಾಡಲು ಮತ್ತು ಯೋಚಿಸಲು ನನಗೀಗ ಸಮಯವಿಲ್ಲ. ನನ್ನನ್ನು ಆಶೀರ್ವದಿಸಿರುವ ಜನರ ಸೇವೆ ಮಾಡಲು ಹೆಚ್ಚು ಸಮಯ ಮೀಸಲಿಡುತ್ತೇನೆ. ಮಾಡಲು ಕೆಲಸ ಇಲ್ಲದವರು ಟೀಕೆ ಮಾಡುತ್ತಾರೆ. ಅವರ ಬಗ್ಗೆ ಮತ್ತೂಮ್ಮೆ ಪ್ರಶ್ನೆ ಕೇಳಿ ಸಮಯ ವ್ಯರ್ಥ ಮಾಡಬೇಡಿ ಎಂದು ಪುಟ್ಟರಾಜು ಬಗ್ಗೆ ಪ್ರತಿಕ್ರಿಯಿಸಲು ನಾರಾಯಣಗೌಡ ನಿರಾಕರಿಸಿದರು.

ಶೀಳನೆರೆ ಹೋಬಳಿಯ ಹರಳಹಳ್ಳಿ, ಸಿಂದಘಟ್ಟ, ರಾಯಸಮುದ್ರ, ಕೊಡಹಳ್ಳಿ, ಹರಳಹಳ್ಳಿ, ನೀತಿಮಂಗಲ, ವಸಂತಪುರ, ಮೈಲನಹಳ್ಳಿ, ಸಿಂಗಾಪುರ, ಕತೇìನಹಳ್ಳಿ, ಹೆಮ್ಮಡಹಳ್ಳಿ, ಚಾವಡಘಟ್ಟ, ಕಾಗೆಪುರ ಗ್ರಾಮಗಳಿಗೆ ಭೇಟಿನೀಡಿ ಜನರಿಗೆ ಕೃತಜ್ಞತೆ ಸಮರ್ಪಿಸಿದರು.

ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಅಂಬರೀಶ್‌, ಮಾಜಿ ಸದಸ್ಯ ಅಘಲಯ ಮಂಜುನಾಥ್‌, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಹರಳಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕತೇನಹಳ್ಳಿ ಸುರೇಶ್‌, ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ಉಪಾಧ್ಯಕ್ಷ ಶೀಳನೆರೆ ಭರತ್‌, ಸತ್ಯಾನಂದ, ಚಂದ್ರಮೋಹನ್‌, ಮಂಜುನಾಥಗೌಡ, ಶಿವಪ್ರಸಾದ್‌, ಡಾ.ವೆಂಟಕೇಶ್‌, ರಾಜೇಗೌಡ ಇತರರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಕೇವಲ 17.4 ಓವರ್ ಗೆ ಮುಗಿದ ಮೊದಲ ದಿನದ ಪಂದ್ಯ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಕೇವಲ 17.4 ಓವರ್ ಗೆ ಮುಗಿದ ಮೊದಲ ದಿನದ ಪಂದ್ಯ

ವಾಸೀಂ ಬರಿ ಹತ್ಯೆ ಪ್ರಕರಣ: ರಕ್ಷಣೆಗೆ ನಿಯೋಜಿಸಲಾಗಿದ್ದ ಎಂಟು ಪೊಲೀಸರ ಬಂಧನ

ವಾಸೀಂ ಬರಿ ಹತ್ಯೆ ಪ್ರಕರಣ: ರಕ್ಷಣೆಗೆ ನಿಯೋಜಿಸಲಾಗಿದ್ದ ಎಂಟು ಪೊಲೀಸರ ಬಂಧನ

kanpura

ಕಾನ್ಪುರ ಎನ್ ಕೌಂಟರ್: ವಿಕಾಸ್ ದುಬೆಯ ಮತ್ತಿಬ್ಬರು ಸಹಚರರನ್ನು ಹತ್ಯೆಗೈದ ಪೊಲೀಸ್ ಪಡೆ

ರಾ. ಹೆದ್ದಾರಿ-73ರ ಮುಂಡಾಜೆ ಬಳಿ ರಸ್ತೆಗುರುಳಿದ ಮರ: ಸಂಚಾರ ಅಸ್ತವ್ಯಸ್ತ

ರಾ. ಹೆದ್ದಾರಿ-73ರ ಮುಂಡಾಜೆ ಬಳಿ ರಸ್ತೆಗುರುಳಿದ ಮರ: ಸಂಚಾರ ಅಸ್ತವ್ಯಸ್ತ

covid19

ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ಬೆನ್ನಲ್ಲೇ ‘ನಿಮ್ಮ ತಂದೆ ಬದುಕಿದ್ದಾರೆ’ ಎಂದ ಆಸ್ಪತ್ರೆ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ifity nine

ಮೈಸೂರು ಜಿಲ್ಲೆ: 59 ಮಂದಿಗೆ ಸೋಂಕು

lekka-sidhu

ಲೆಕ್ಕ ಕೊಡದಿದ್ದರೆ ಬಿಡುವವರು ಯಾರು: ಸಿದ್ದರಾಮಯ್ಯ

degula-gate

ದೇಗುಲಕ್ಕೆ ಅಳವಡಿಸಿರುವ ಗೇಟ್‌ ಬದಲಿಸಿ

vadhi-vetana

ಲಾಕ್‌ಡೌನ್‌ ಅವಧಿಯ ವೇತನ ಕೊಡಿ

vikram durasti

ಕೋವಿಡ್‌ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆ ದುರಸ್ತಿ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

ಹೊಸ ಸೇರ್ಪಡೆ

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಕೇವಲ 17.4 ಓವರ್ ಗೆ ಮುಗಿದ ಮೊದಲ ದಿನದ ಪಂದ್ಯ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಕೇವಲ 17.4 ಓವರ್ ಗೆ ಮುಗಿದ ಮೊದಲ ದಿನದ ಪಂದ್ಯ

MLR-Fishing

ಕೋವಿಡ್ ಆತಂಕ: ಕಾರ್ಮಿಕರ ಕೊರತೆ ಹಿನ್ನೆಲೆ: ಆ.1ರಿಂದ ಮೀನುಗಾರಿಕೆ ಆರಂಭ ಅನುಮಾನ

bhavana-insta

“ರೋಮಿಯೋ’ ಚಿತ್ರಕ್ಕೆ 8, ನಮ್ಮ ಪ್ರೀತಿಗೆ 9: ಭಾವನಾ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.