- Sunday 15 Dec 2019
ಹಸಿರು ಸಂತೆಯಲ್ಲಿ ತಾಜಾ ತರಕಾರಿ, ಸಾವಯವ ಉತ್ಪನ್ನ
Team Udayavani, Oct 6, 2019, 3:00 AM IST
ಮೈಸೂರು: ರೈತರು ನಮ್ಮ ಬೆನ್ನೆಲುಬು ಅವರು ಸಾವಯವ ಕೃಷಿ ಪದ್ಧತಿಗೆ ಮರಳಬೇಕು. ಇದರಿಂದ ಆರೋಗ್ಯಯುತ ಹಾಗೂ ಸಾವಯವ ಬೆಳೆಗಳನ್ನು ಬೆಳೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಬುಲೇವಾರ್ಡ್ ರಸ್ತೆಯಲ್ಲಿ ಪ್ರವಾಸೋದ್ಯಮ ಉಪಸಮಿತಿ ವತಿಯಿಂದ ಆಯೋಜಿಸಿದ್ದ ಹಸಿರು ಸಂತೆ ಹಾಗೂ ಚಿತ್ರಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ಪರಿಚಯಿಸುವ ಸದಾವಕಾಶವನ್ನು ದಸರಾ ಮಹೋತ್ಸವ ಸಂದರ್ಭದಲ್ಲಿ ನೀಡಿರುವುದು ರೈತರಿಗೆ ಅನುಕೂಲವಾಗಲಿದೆ ಎಂದರು.
ಸರ್ಕಾರವು ರೈತರ ಪರ ಹಲವಾರು ಯೋಜನೆ ಜಾರಿಗೆ ತಂದಿದ್ದು, ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಾರ್ಷಿಕ ಒಟ್ಟು 10 ಸಾವಿರ ರೂ. ಪ್ರತಿ ರೈತ ಕುಟುಂಬಕ್ಕೆ ನೀಡಲಾಗುತ್ತಿದೆ. ರೈತರಿಗಾಗಿ ಇನ್ನೂ ಉತ್ತಮ ಯೋಜನೆ ರೂಪಿಸಲಿದ್ದೇವೆ. ಎಲ್ಲಿಯ ತನಕ ರೈತ ಬೆಳೆದ ಬೆಳೆಗಳನ್ನು ಕೊಂಡುಕೊಳ್ಳುವ ಗ್ರಾಹಕರಿರುತ್ತಾರೋ ಅಲ್ಲಿಯವರೆಗೆ ರೈತನೂ ಉತ್ಸುಕನಾಗಿರುತ್ತಾನೆ.
ಯಾವಾಗ ಕೊಂಡುಕೊಳ್ಳವವರು ಇಲ್ಲವಾದಾಗ ರೈತ ನಿರಾಸೆಯಾಗುತ್ತಾನೆ. ಹಾಗಾಗಿ ರೈತ ಮತ್ತು ಗ್ರಾಹಕ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಹೇಳಿದರು. ಚಿತ್ರಸಂತೆಯನ್ನು ವೀಕ್ಷಿಸಿದ ಅವರು ಕಲೆ ಎಂಬುದು ಯಾರ ಸ್ವತ್ತು ಅಲ್ಲ ಹಾಗೂ ಕಲೆಗೆ ಬೆಲೆಯೇ ಇಲ್ಲ. ಕೈಗಳಿಂದ ಎಂತಹ ಚಿತ್ರಗಳನ್ನು ರಚಿಸಬಹುದು ಎಂಬುದನ್ನು ಕಲಾವಿದರು ತೋರಿಸಿದ್ದಾರೆ. ಅವರ ಚಿತ್ರಗಳನ್ನು ಮೈಸೂರಿಗರು ಕಣ್ತುಂಬಿಕೊಳ್ಳಲಿ, ಇದರಿಂದ ಕಲಾವಿದರಿಗು ತಮ್ಮ ಕಲೆಯ ಮೇಲೆ ಇನ್ನೂ ಪ್ರೀತಿ ಹೆಚ್ಚಾಗಲಿದೆ ಎಂದರು.
ಹಸಿರು ಸಂತೆಯಲ್ಲಿ 45ಕ್ಕೂ ಹೆಚ್ಚು ಮಳಿಗೆಗಳಿದ್ದು ವಿವಿಧ ರೀತಿಯ ಸಾವಯವ ಕೃಷಿ ಉತ್ಪನ್ನಗಳು, ಸೊಪ್ಪು, ತರಕಾರಿ, ನಾಟಿ ಕೋಳಿ ಮೊಟ್ಟೆ, ವಿಶೇಷ ತಳಿಗಳ ಅಕ್ಕಿ, ಭತ್ತ, ಬಿತ್ತನೆಬೀಜಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದ್ದು, ಚಿತ್ರ ಸಂತೆಯಲ್ಲೂ 56 ಮಳಿಗೆಗಳಿದ್ದು ಹಲವಾರು ಛಾಯಾಚಿತ್ರಗಳು, ಪೇಂಟಿಂಗ್, ಕೈ ಬರಹ ಚಿತ್ರಗಳು, ತ್ರೀಡಿ ಚಿತ್ರಗಳ ಪ್ರದರ್ಶನ ಗಮನ ಸೆಳೆದವು.
ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಪ್ರವಾಸೋದ್ಯಮ ಉಪಸಮಿತಿ ಅಧ್ಯಕ್ಷ ಕೆ.ಜೆ ರಮೇಶ್, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಹಾಗೂ ಪ್ರವಾಸೋದ್ಯಮ ಉಪಸಮಿತಿಯ ಸದಸ್ಯರು ಇದ್ದರು. ಹಸಿರು ಸಂತೆಯಲ್ಲಿ 45ಕ್ಕೂ ಹೆಚ್ಚು ಮಳಿಗೆ ತೆರೆದಿದ್ದು, ಅದರಲ್ಲಿ ಅರ್ಧದಷ್ಟು ಮಳಿಗೆಗಳು ಖಾಲಿಯಾಗಿದ್ದವು. ಆರಂಭದಲ್ಲಿ ಜನದಟ್ಟಣೆ ಕಡಿಮೆ ಇತ್ತು. ಮಧ್ಯಾಹ್ನದ ನಂತರ ಸಾವಿರಾರು ಮಂದಿ ಚಿತ್ರಸಂತೆ ಹಾಗೂ ಹಸಿರು ಸಂತೆಗೆ ಭೇಟಿ ನೀಡಿದರು.
26 ಸಾವಿರ ಮಂದಿಗೆ ಮಾತ್ರ ಆಸನ: ದಾಸರ ಪಾಸ್ ವಿತರಣೆ ಸಂಬಂಧ, ಮೊದಲಿನಿಂದ ಏನು ನಡೆಯುತ್ತಿದೆ, ಅದನ್ನೆ ನಡೆಸಿಕೊಂಡು ಹೊಗುತ್ತೇವೆ. ಸಾಧ್ಯವಷ್ಟು ಎಲ್ಲವನ್ನು ಸರಿಮಾಡಲಾಗಿದೆ. ಅರಮನೆ ಆವರಣದಲ್ಲಿ 26 ಸಾವಿರ ಮಾತ್ರ ಆಸನ ವ್ಯವಸ್ಥೆ ಇರುವುದು. ಇದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಅರಮನೆಯವರು, ಅರಮನೆ ಆಡಳಿ, ಸುಪ್ರೀಂ, ಹೈಕೋರ್ಟ್‌ನಿಂದ ಎಲ್ಲಾ ತರಹದ ಜನರು ಬರುತ್ತಾರೆ. ಎಲ್ಲರಿಗೂ ಪಾಸ್ ವ್ಯವಸ್ಥೆ ಕಷ್ಟ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ಈ ವಿಭಾಗದಿಂದ ಇನ್ನಷ್ಟು
-
ಮೈಸೂರು: ಬಹುತ್ವದ ಭಾರತಕ್ಕೆ ಆಕ್ರಮಕಾರಿ ಸಂಸ್ಕೃತಿ ಆವರಿಸಿಕೊಂಡು ಜಾನಪದ ಸೊಗಡನ್ನು ನಾಶದತ್ತ ಕೊಂಡೊಯ್ಯುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ...
-
ಮೈಸೂರು: ಹನುಮಂತೋತ್ಸವ ಸಮಿತಿವತಿಯಿಂದ ಹನುಮ ಜಯಂತಿ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆಂಜನೇಯ ಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು....
-
ಮೈಸೂರು: ಜನರು ನೀಡಿದ ಅಧಿಕಾರವನ್ನು ಬಳಸಿ ಬಹುತ್ವದ ಭಾರತವನ್ನು ದಿವಾಳಿ ಮತ್ತು ಅರಾಜಕತೆಯತ್ತ ದೂಡಲಾಗುತ್ತಿದೆ ಎಂದು ಅಖೀಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ...
-
ಮೈಸೂರು: ಪೊಲೀಸರು ಒಳ್ಳೆಯವರ ಜೊತೆ ಒಳ್ಳೆಯವರಾಗಿ ಹಾಗೂ ಕೆಟ್ಟವರ ಜೊತೆ ಕೂಡ ಒಳ್ಳೆಯವರಾಗಿ ಅವರನ್ನು ಸರಿಯಾದ ದಾರಿಗೆ ತರುವಂತೆ ಮಾಡುವುದು ಜನಸ್ನೇಹಿ ಪೊಲೀಸ್...
-
ನಂಜನಗೂಡು: ಪಂಚ ಮಹಾರಥೋತ್ಸವ ಅಂಗವಾಗಿ ಶ್ರೀಕಂಠೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಶುಕ್ರವಾರ ಸಡಗರ, ಸಂಭ್ರಮದಿಂದ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ...
ಹೊಸ ಸೇರ್ಪಡೆ
-
ಗೋಕಾಕ್: ಉಪ ಚುನಾವಣೆಯಲ್ಲಿ ಮಾವ-ಅಳಿಯನ ವಿರುದ್ಧ ನಾವು ಗೆದ್ದಿದ್ದೇವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದಾಗಿ ಸೋತಿದ್ದೇವೆ ಎಂದು ಕಾಂಗ್ರೆಸ್...
-
ಕಡಬ: ಕಡಬದ ಹನುಮಾನ್ ನಗರ (ಕೇವಳ) ದಲ್ಲಿರುವ ಸರಸ್ವತೀ ಪದವಿ ಪೂರ್ವ ವಿದ್ಯಾಲಯದ ವಠಾರದಲ್ಲಿ ಶನಿವಾರ ರಾತ್ರಿ ಜರಗಿದ ಸರಸ್ವತೀ ವಿದ್ಯಾಲಯದ ವಾರ್ಷಿಕ ಕ್ರೀಡೋತ್ಸವದಲ್ಲಿ...
-
ತೆಕ್ಕಟ್ಟೆ: ಸಾಂಪ್ರದಾಯಿಕ ಹೊಸಮಠ ಕಂಬಳೋತ್ಸವವು ರವಿವಾರ ಜರಗಿತು. ಕೋಣಗಳಿಗೆ ಹಲಗೆ ಮತ್ತು ಹಗ್ಗ ವಿಭಾಗದ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆ ಓಟದ...
-
ಚೆನ್ನೈ: ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ ಪ್ರಥಮ ಏಕದಿನ ಪಂದ್ಯದಲ್ಲಿ ಸೋಲಿನ ಬಿಸಿ ಮುಟ್ಟಿದೆ....
-
- ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಳಿವು - ಜಾರ್ಖಂಡ್ ಚುನಾವಣಾ ರ್ಯಾಲಿಯಲ್ಲಿ ಮಾಹಿತಿ - ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಗೃಹ ಸಚಿವರು ಧನಬಾದ್/ರಾಂಚಿ: ಪೌರತ್ವ...