ಆಕರ್ಷಿಸಿದ ಗೆಡ್ಡೆ ಗೆಣಸುಗಳ ಲೋಕ


Team Udayavani, Jan 13, 2020, 3:00 AM IST

akarshisida

ಮೈಸೂರು: ಮೈಸೂರಿನ ಸಹಜ ಸಮೃದ್ಧ ಸಂಸ್ಥೆ ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿಸಿದ ಗೆಡ್ಡೆ ಗೆಣಸು ಮೇಳದಲ್ಲಿ ಭೂತಾಯಿ ಮಡಿಲಿನ ಅದ್ಭುತ ಸೃಷ್ಟಿ , ಮಣ್ಣಿನ ಕಸುವನ್ನು ಪಡೆದ ಪುಷ್ಟಿದಾಯಕ ಹಾಗೂ ಶಕ್ತಿದಾಯಕ ಆಹಾರ, ಬರಗಾಲದ ಬಂಧು ಗೆಡ್ಡೆ ಗೆಣಸುಗಳ ಲೋಕ ಅನಾವರಣಗೊಂಡಿತ್ತು. ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳ ಅದ್ಭುತ ಲೋಕವನ್ನು ಮೈಸೂರಿನ ಗ್ರಾಹಕರಿಗೆ ಪರಿಚಯಿಸಲು ಮೊದಲಬಾರಿಗೆ ಏರ್ಪಡಿಸಿದ್ದ ಮೇಳ ಮೈಸೂರಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಅಪರೂಪದ ಗೆಡ್ಡೆ ಗೆಣಸು: ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಇತ್ತು. ಜೇನು ಕುರುಬ, ಬೆಟ್ಟ ಕುರುಬ, ಕುಣಬಿ, ಸಿದ್ಧಿ, ಸೋಲಿಗ, ಇರುಳಿಗ ಸಮುದಾಯದ ಪ್ರತಿನಿಧಿಗಳು ಅಪರೂಪದ ಗೆಡ್ಡೆ ಗೆಣಸು ಮತ್ತು ಮೂಲಿಕೆಗಳನ್ನು ತಂದು ಸಾಂಸ್ಕೃತಿಕ ನಗರಿಯ ಜನತೆಗೆ ನೈಸರ್ಗಿಕವಾಗಿ ಬೆಳೆಯುವ, ವಿಷಮುಕ್ತವಾದ ಗೆಡ್ಡೆ ಗೆಣಸುಗಳು ಪೋಷಕಾಂಶದ ಕಣಜ ಎಂಬುವನ್ನು ಮನವರಿಕೆ ಮಾಡಿಕೊಟ್ಟರು.

ನಿಸರ್ಗದ ಅಮೂಲ್ಯ ಸಂಪತ್ತು: ಮೇಳ ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ ಮಾತನಾಡಿ, ಗೆಡ್ಡೆ ಗೆಣಸುಗಳು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು. ಅನ್ನ ಸಂಸ್ಕೃತಿಯ ರಾಯಭಾರಿ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸದ ಹೊರತು ಭವಿಷ್ಯವಿಲ್ಲ ಎಂದು ಹೇಳಿದರು.

ನಮ್ಮ ಪೂರ್ವಿಕರ ಆಹಾರ: ನಮ್ಮ ಪೂರ್ವಿಕರ ಆಹಾರವಾಗಿದ್ದ, ಪೋಷಕಾಂಶಗಳಿಂದ ಸಮೃದ್ಧವಾದ ನೈಸರ್ಗಿಕ ಗೆಡ್ಡೆ ಗೆಣಸುಗಳನ್ನು ಮತ್ತೆ ನಮ್ಮ ಅನ್ನದ ತಟ್ಟೆಗೆ ಬರಮಾಡಿಕೊಳ್ಳಬೇಕು. ಕಾಡಿನ ಗೆಣಸುಗಳನ್ನು ಬೇಯಿಸಿ ತಿನ್ನುವುದರ ಮೂಲಕ ಈ ಬಾರಿಯ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.

ಪಾಲೀಶ್‌ ಅಕ್ಕಿಯಿಂದ ಅನಾರೋಗ್ಯ: ಗಿರಿಜನರು, ಪಡಿತರ ಅಕ್ಕಿ ನೋಡುವ ಮೊದಲು ಕಾಡಿನ ಗೆಡ್ಡೆಗಳು ಅವರ ಅನ್ನದ ಅಗತ್ಯವನ್ನು ನೀಗಿಸುತ್ತಿದ್ದವು. ಗೆಡ್ಡೆಗಳು ಕಾಬೊìಹೈಡ್ರೇಟ್‌ ಹಾಗೂ ಮಾಂಸ ಪ್ರೋಟಿನ್‌ ಕೊಡುತ್ತಿತ್ತು. ಗೆಣಸು ಕೀಳುವ ಕ್ರಮ ಕೂಡ ನಿಸರ್ಗದ ಜತೆ ಹೊಂದಾಣಿಕೆಯಾಗಿತ್ತು. ಅರ್ಧ ಭಾಗವನ್ನು ನೆಲದಲ್ಲೇ ಬಿಟ್ಟು, ಮುಂದಿನ ಹಂಗಾಮಿಗೆ ಬಳ್ಳಿ ಬರುವಂತೆ ಅನುವು ಮಾಡಿಕೊಡಲಾಗುತ್ತಿತ್ತು. ಅವರ ಕಾಡಿನ ಜ್ಞಾನ ಮತ್ತು ಅನ್ನ ಸಂಸ್ಕೃತಿಯ ಸಂಭ್ರಮವನ್ನು ಹಾಳು ಮಾಡಿ, ಅನಾರೋಗ್ಯ ಆಹ್ವಾನಿಸುವ ಪಾಲೀಶ್‌ ಅಕ್ಕಿ ನೀಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಕೃತಿಯ ಅಮೂಲ್ಯ ಕೊಡುಗೆ: ಜಾನಕಮ್ಮ ಮಾತನಾಡಿ, ನಿಸರ್ಗದ ಕಾಣಿಕೆಯಾದ ಗೆಡ್ಡೆ ಗೆಣಸನ್ನು ವ್ಯವಸಾಯದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ಹೆಚ್ಚು ಶ್ರಮವಿಲ್ಲದೆ ಬೆಳೆಯಬಹುದಾದ ಕಂದಮೂಲಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು° ಉಳಿಸಿಕೊಳ್ಳಬೇಕಿದೆ ಎಂದರು. ಧಾರವಾಡದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ.ಅರುಣ ಕುಮಾರ್‌ ಭಾದೊಡ್ಡಿ ಹಾಜರಿದ್ದರು. ಎಪಿಎಂಸಿ ಉಪಾಧ್ಯಕ್ಷ ಜೆ. ಚಿಕ್ಕ ಜವರಪ್ಪ ಗೆಡ್ಡೆ ಗೆಣಸಿನ ಅದ್ಭುತ ಲೋಕ ಪುಸ್ತಕ ಬಿಡುಗಡೆ ಮಾಡಿದರು.

ಟಾಪ್ ನ್ಯೂಸ್

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಕ ಅಭಿವೃದ್ದಿ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಕನಕ ಅಭಿವೃದ್ದಿ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

Untitled-1

ವಾರಾಂತ್ಯ ಕರ್ಫ್ಯೂಗೆ ಮೈಸೂರು ಸಂಪೂರ್ಣ ಸ್ತಬ್ಧ 

7temple

ದೊಡ್ಡಹೆಜ್ಜೂರು ವೀರಾಂಜನೇಯ ಸ್ವಾಮಿ ಜಾತ್ರೆ ರದ್ದು

ಪ್ರತಿ ತಾಲೂಕಿನಲ್ಲೂ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ : ಕಸಾಪ ನೂತನ ಅಧ್ಯಕ್ಷ

ಪ್ರತಿ ತಾಲೂಕಿನಲ್ಲೂ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ : ಕಸಾಪ ನೂತನ ಅಧ್ಯಕ್ಷ

ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ

ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.