ಮೈಸೂರು ವಿವಿಗೆ ಸ್ವಾಯತ್ತ ಸ್ಥಾನಮಾನ
Team Udayavani, Mar 21, 2018, 10:00 AM IST
ಶತಮಾನದ ಇತಿಹಾಸ ಹೊಂದಿರುವ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯಕ್ಕೆ (ಮಾನಸ ಗಂಗೋತ್ರಿ) ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿದೆ. ದೇಶೀಯ ಶಿಕ್ಷಣ ರಂಗದಲ್ಲಿ 60ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 60 ಆಯ್ದ ಸರಕಾರಿ ಹಾಗೂ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತ ಹಾಗೂ ಸ್ವಾಯತ್ತಗೊಳ್ಳಬೇಕಿರುವ ವಿದ್ಯಾಸಂಸ್ಥೆಗಳ ಸ್ಥಾನಮಾನ (ಡೀಮ್ಡ್ ಟು ಬಿ ಯೂನಿವರ್ಸಿಟಿ) ನೀಡಿರುವುದಾಗಿ ಯುಜಿಸಿ ಪ್ರಕಟಿಸಿದೆ. ಇದರಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಹಿತ ಕರ್ನಾಟಕದ ನಾಲ್ಕು ವಿದ್ಯಾಸಂಸ್ಥೆಗಳಿಗೆ ‘ಡೀಮ್ಡ್ ಟು ಬಿ’ ಯುನಿವರ್ಸಿಟಿ ಸ್ಥಾನಮಾನ ಲಭಿಸಿದೆ.