Udayavni Special

ಎನ್‌ಟಿಎಂ ಶಾಲೆ ಉಳಿಸಲು ವಿವಿಧೆಡೆ ಪ್ರತಿಭಟನೆ


Team Udayavani, Jun 29, 2021, 4:39 PM IST

Untitled-1

ಮೈಸೂರು: ನಗರದ ಎನ್‌ಟಿಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ನಗರದ ವಿವಿಧೆಡೆ ಪ್ರತಿಭಟನೆ ನಡೆಯಿತು.

ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿಗೆ ರಾಜ್ಯ ರೈತ ಸಂಘ, ದಲಿತ ಸಂಘರ್ಷಸಮಿತಿ, ಸ್ವರಾಜ್‌ ಇಂಡಿಯಾ ಸೇರಿದಂತೆ ಹಲವು ಸಂಘಟನೆಗಳು ಕೈಜೋಡಿಸಿದ್ದು, ಮೈಸೂರಿನ ಟೌನ್‌ ಹಾಲ್‌ ಮುಂಭಾಗ, ಜಿಲ್ಲಾಧಿಕಾರಿ ಕಚೇರಿ, ಎನ್‌ಟಿಎಂ ಶಾಲೆ ಮುಂಭಾಗ, ಸದ್ವಿದ್ಯಾ ಪಾಠಶಾಲೆ ಮುಂಭಾಗ ಸೇರಿದಂತೆ ಹಲವೆಡೆ ಎನ್‌ಟಿಎಂ ಶಾಲೆ ಉಳಿಸಿ ಎಂಬ ಪ್ಲೇಕಾರ್ಡ್‌ ಹಿಡಿದು ಗಮನ ಸೆಳೆಯಲಾಯಿತು.

ವಿವೇಕಾನಂದರು ಎನ್‌ಟಿಎಂ ಶಾಲೆಯಲ್ಲಿ ತಂಗಿದ್ದರು ಎಂಬ ಒಂದೇ ಕಾರಣಕ್ಕೆ ಶಾಲೆಯನ್ನುಕೆಡವಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡುವುದು ಬೇಡ. ಒಂದು ವೇಳೆ ಶಾಲೆಯನ್ನು ನೆಲಸಮಗೊಳಿಸಿದರೆ ವಿವೇಕಾನಂದರ ತತ್ವಾದರ್ಶಗಳಿಗೆ ವಿರುದ್ಧವಾಗಲಿದೆ. ಶಾಲೆಯನ್ನು ಉಳಿಸಿಕೊಂಡು, ಉಳಿದ ಭಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಿಸಿದರು.

ಶಾಲೆಯು ಕನ್ನಡದ ಅಸ್ಮಿತೆಯಾಗಿದೆ. ಈ ಅಸ್ಮಿತೆಗಾಗಿ ನಾವು ಹೋರಾಡುತ್ತಿದ್ದೇವೆಯೇ ಹೊರತು ಭೂಮಿಯ ಮಾಲಕತ್ವಕ್ಕಾಗಿ ಅಲ್ಲ. ಹೈಕೋರ್ಟ್‌ ಆದೇಶ ನೀಡಿದಾಗ್ಯೂ ಸರ್ಕಾರ ಶಾಲೆ ಉಳಿಸುವ ನಿರ್ಧಾರವನ್ನು ಕೈಗೊಂಡರೆ ನ್ಯಾಯಾಂಗ ನಿಂದನೆಯಾಗಲ್ಲ. ಕೂಡಲೇ ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿಒತ್ತಾಯಿಸಿದ್ದೇವೆಎಂದರು. ಇದೇ ವೇಳೆ ಮೈಸೂರಿನ ಗನ್‌ ಹೌಸ್‌ ಬಳಿ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಶಾಲೆ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರ ಪ.ಮಲ್ಲೇಶ್‌, ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್‌, ಕಲ್ಲಳ್ಳಿ ಕುಮಾರ್‌, ದ್ಯಾವಪ್ಪ ನಾಯಕ, ದಿನೇಶ್‌, ಶಿವು, ಲಿಂಗರಾಜು, ಶ್ಯಾಮ್, ಅನಿಲ್, ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ದೇವಣ್ಣ, ಗೋವಿಂದ ಮಂಡಕಳ್ಳಿ, ಮಹೇಶ್‌ ಇತರರಿದ್ದರು.

ಟಾಪ್ ನ್ಯೂಸ್

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

Untitled-1

ಆತ್ಮೀಯತೆಯ ತಾಯಿ ಹೃದಯಿ ಯಡಿಯೂರಪ್ಪ

ಬೇಳೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಕ್ರಮ 

ಬೇಳೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಕ್ರಮ 

Untitled-1

“ಶಹಬ್ಟಾಸ್‌ ಯಡಿಯೂರಪ್ಪ’ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mysore news

ಕಾಯಕ ವರ್ಗಗಳಿಗೆ ನೆರವು ನೀಡಿ

mysore news

ಮನೆಯಲ್ಲೇ ಹಸಿ, ಒಣ ಕಸ ಬೇರ್ಪಡಿಸಿ

mysore news

ಕಪಿಲೆ ಹರಿವು ಏರಿಕೆ: ಸ್ನಾನ, ಮುಡಿ ಸೇವೆ ಸ್ಥಗಿತ

guru poonima festival

ಗುರು ಸೇವೆ ಸ್ಮರಿಸಿ, ಸನ್ಮಾನಿಸಿ ಗುರು ಪೂರ್ಣಿಮೆ ಆಚರಣೆ

NTM School

ಎನ್‌ಟಿಎಂ ಶಾಲೆ ಉಳಿಸಲು ಮುಂದುವರಿದ ಹೋರಾಟ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ಟಿ20 ಸರಣಿ ಮೇಲೂ ಭಾರತ ಕಣ್ಣು

ಟಿ20 ಸರಣಿ ಮೇಲೂ ಭಾರತ ಕಣ್ಣು

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಬೆಳ್ಳಿ ಗೆದ್ದಿದ್ದ ಮೀರಾಗೆ ಚಿನ್ನದ ಮೆರುಗು?

ಬೆಳ್ಳಿ ಗೆದ್ದಿದ್ದ ಮೀರಾಗೆ ಚಿನ್ನದ ಮೆರುಗು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.