ಮುಷ್ಕೆರೆ ಶಾಲೆಗೆ ಮಕ್ಕಳ ಹಕ್ಕು ಸಮಿತಿ ಭೇಟಿ

Team Udayavani, Jan 18, 2020, 3:00 AM IST

ಎಚ್‌.ಡಿ.ಕೋಟೆ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಆಂಟನಿ ಸಭಾಸ್ಟಿಯನ್‌ ಸದಸ್ಯರ ತಂಡ ತಾಲೂಕು ಕೇಂದ್ರ ಸ್ಥಾನಕ್ಕೆ ಆಗಮಿಸುತ್ತಿದ್ದಂತೆಯೇ ಶುಕ್ರವಾರ ಉದಯವಾಣಿ ಪ್ರಕಟಿಸಿದ್ದ ತಾಲೂಕಿನ ಮುಷ್ಕೆರೆ ಸರ್ಕಾರಿ ಶಾಲೆಯ ಅವಾಂತರಗಳ ವರದಿ ಓದಿ ಮುಷ್ಕೆರೆ ಸರ್ಕಾರಿ ಶಾಲೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಮುಷ್ಕೆರೆ ಶಾಲೆಯಲ್ಲಿ ಶುಕ್ರವಾರ ಕೇವಲ 7 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, ಶಾಲೆಯಲ್ಲಿ ವಿದ್ಯಾರ್ಥಿಗಳ ಗೈರು ಹಾಜರಾತಿ ಗುರುವಾರ ಶಾಲೆ ಶಿಕ್ಷಕ ಕೃಷ್ಣೇಗೌಡ ಗೈರು ಹಾಜರಾಗಿದ್ದು, ಹಾಜರಾತಿ ಪುಸ್ತಕದಲ್ಲಿ ಸಿ.ಎಲ್‌ ದಾಖಲಿಸಿದೇ ಇರುವುದು, ಮಧ್ಯಾಹ್ನದ ಬಿಸಿಯೂಟ ನೀಡದೇ ಇರುವುದು ಸೇರಿದಂತೆ ಶಾಲೆಯಲ್ಲಿ ಬಿಸಿಯೂಟಕ್ಕೆ ಬಳಕೆ ಮಾಡುತ್ತಿದ್ದ ಹುಳುಬಂದಿದ್ದ ಬೇಳೆ ಕಾಳು, ತರಕಾರಿಗಳ ಸಮಗ್ರ ಪರಿಶೀಲನೆ ನಡೆಸಿದರು.

ಕ್ರಮಕ್ಕೆ ಸೂಚನೆ: ಪರಿಶೀಲನೆ ವೇಳೆ ಶಾಲೆಗೆ ಬೇಕಾದ ವಸ್ತುಗಳ ಖರೀದಿ ಪುಸ್ತಕದಲ್ಲಿ ಸಹಿ ಮಾತ್ರ ಪಡೆದುಕೊಂಡು ಮಾಹಿತಿ ದಾಖಲಿಸದೇ ಇರುವುದು, ಶಾಲಾಭಿವೃದ್ಧಿ ಸಮಿತಿ ಸದಸ್ಯರಿಂದ ಪುಸ್ತಕಕ್ಕೆ ಸಹಿ ಮಾತ್ರ ಪಡೆದುಕೊಂಡು ವಿಷಯ ನಮೋದಿಸದೇ ಇರುವ ಹಲವು ಅಂಶಗಳು ಬೆಳಕಿಗೆ ಬಂದವು. ಬಳಿಕ ಪೋಷಕರೊಡನೆ ಚರ್ಚಿಸಿ ಮುಷ್ಕೆರೆ ಗ್ರಾಮದಿಂದ ಭೀಮನಹಳ್ಳಿ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳನ್ನು ಮುಂದಿನ ಶೆ„ಕ್ಷಣಿಕ ವರ್ಷದಿಂದ ಮುಷ್ಕೆರೆ ಗ್ರಾಮದಲ್ಲಿಯೇ ದಾಖಲು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ: ಮುಷ್ಕೆರೆ ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಅದೇ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಕೇಂದ್ರದಲ್ಲಿ ಮಕ್ಕಳ ಊಟಕ್ಕೆ ಬಳಸುತ್ತಿದ್ದ ಎಸ್‌.ಕೆ ಹೆಸರಿನ ಸಾಂಬಾರ್‌ ಪುಡಿ ಮತ್ತು ಹಾಲಿನ ಪೌಂಡರ್‌ ಪ್ಯಾಕೇಟ್‌ ಮೇಲೆ ಪದಾರ್ಥ ತಯಾರಿಸಿದ ದಿನ ಮತ್ತು ಕಾಲವಧಿ ಮುದ್ರಿತವಾಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿ, ಪುಟಾಣಿ ಮಕ್ಕಳು ಸೇವಿಸುವ ಆಹಾರ ಪದಾರ್ಥಗಳ ಮೇಲೆ ಕಡ್ಡಾಯವಾಗಿ ತಯಾರಿಕೆ ಮತ್ತು ಕಾಲಾವಧಿ ಗೋಚರಿಸುವ ಆಹಾರ ಪದಾರ್ಥಗಳನ್ನೇ ಬಳಕೆ ಮಾಡಬೇಕು, ಕೂಡಲೇ ಎಸ್‌.ಕೆ ಹೆಸರಿನ ಸಾಂಬಾರ್‌ ಪುಡಿ ಬಳಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳೊಟ್ಟಿಗೆ ಭೋಜನ ಸವಿದ ತಂಡ: ನಂತರ ಭೀಮನಹಳ್ಳಿ ಆಶ್ರಮ ಶಾಲೆಗೆ ಭೇಟಿ ನೀಡಿದ ತಂಡ ಅಲ್ಲಿನ ಆಹಾರ ಪದಾರ್ಥಗಳ ಪರಿಶೀಲನೆ ನಡೆಸಿ ಅಲ್ಲಿಯೇ ಮಕ್ಕಳೊಟ್ಟಿಗೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದರು. ಬಳಿಕ ಅಲ್ಲಿನ ವಿದ್ಯಾರ್ಥಿಳೊಂದಿಗೆ ಚರ್ಚಿಸಿದಾಗ ಆಶ್ರಮ ಶಾಲೆಯಲ್ಲಿ ಸರಿಯಾಗಿ ಹಾಲು, ಮೊಟ್ಟೆ ಸೇರಿದಂತೆ ಬಾದಾಮಿ ನೀಡುತ್ತಿಲ್ಲ. ಈ ದಿನ ಎಲ್ಲಾ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಗಿದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಪೋಷಕರೊಡನೆ ಕೂಲಿಗಾಗಿ ಗುಳೆ ಹೋಗುತ್ತೇವೆ ಆ ಸಂದರ್ಭದಲ್ಲಿ ಆಹಾರ ಪದಾರ್ಥ ಏನಾಗುತ್ತದೆ ಅನ್ನುವ ಮಾಹಿತಿ ಪಡೆದುಕೊಂಡರು.

ಮಕ್ಕಳೊಟ್ಟಿಗೆ ಮಕ್ಕಳಾದ ತಂಡದ ಸದಸ್ಯರು: ಭೇಟಿ ಸಂದರ್ಭದಲ್ಲಿ ಶಾಲೆ ಮತ್ತು ಶಾಲೆಯ ಬಿಸಿಯೂಟದ ಮಾಹಿತಿ ಪಡೆದುಕೊಳ್ಳಲು ಮಕ್ಕಳೊಟ್ಟಿಗೆ ಮಕ್ಕಳಂತೆಯೇ ನಟಿಸಿದ ತಂಡದ ನಿರ್ದೇಶಕ ಪರಶುರಾಮ್‌ ಶಿಕ್ಷಕರು ಹಾಲು, ಮೊಟ್ಟೆ ಬಾಳೆಹಣ್ಣು ಸೇರಿದಂತೆ ಇನ್ನಿತರ ಆಹಾರ ನೀಡದೇ ಇರುವ ಸಮಗ್ರ ಮಾಹಿತಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅರಿವಿಲ್ಲದಂತೆ ಒಂದು ಮಾದರಿ ಆಟದಂತೆ ಪಡೆದುಕೊಂಡರು.

ತನಿಖಾ ತಂಡ ಆಗಮಿಸುವ ಮಾಹಿತಿ ಇದ್ದರೂ ಇಷ್ಟೊಂದು ಲೋಪದೋಷಗಳಿರುವಾಗ ಇನ್ನು ಮಾಮೂಲಿ ದಿನಗಳಲ್ಲಿ ಸಮಸ್ಯೆಗಳು ಹೇಗಿರಬೇಡ ಅನ್ನುವ ಲೆಕ್ಕಚಾರ ಹಾಕಿದ ತಂಡ ನಂತರ ತಾಲೂಕು ಕೇಂದ್ರ ಸ್ಥಾನದತ್ತ ಆಗಮಿಸಿ ಮಧ್ಯಾಹ್ನದ ಊಟದ ಬಳಿಕ ತಾಪಂ ಕಚೇರಿಯಲ್ಲಿ ದಿನದ ಸಮಗ್ರ ತನಿಖೆ ಮತ್ತು ನ್ಯೂನತೆಗಳ ಸಮಗ್ರ ಮಾಹಿತಿ ನೀಡಿದರು.

ತಂಡದ ನಿರ್ದೇಶಕರಾದ ಅಶೋಕ್‌ ಯೇರಗಟ್ಟಿ, ಎಚ್‌.ಸಿ.ರಾಘವೇಂದ್ರ, ಶಂಕರಪ್ಪ, ಅಕ್ಷರ ದಾಸೋಹದ ತಾಲೂಕು ನಿದೇರ್ಶಕ ಸಿದ್ದರಾಜು, ನಿಸರ್ಗ ಫೌಂಡೇಷನ್‌ ನಂಜುಂಡಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಗೀತಾರಾಣಿ, ತಾಲೂಕು ಸಿಡಿಪಿಒ ಆಶಾ, ತಾಲೂಕು ಮಹಿಳಾ ಸಾಂತ್ವನ ಕೇಂದ್ರದ ಜೈಶೀಲಾ ಇದ್ದರು.

ಅಣ್ಣೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ: ಅಣ್ಣೂರು ಸರ್ಕಾರಿ ಶಾಲೆಗೆ ಭೇಟಿ ನೀಡಿದ ತಂಡ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಡ್ರಾಪ್‌ ಔಟ್‌ ಆಗಿದ್ದರೂ ಪೋಷಕರ ಮನ ಒಲಿಸಲು ಶಾಲಾ ಶಿಕ್ಷಕರು ಕ್ರಮವಹಿಸದೇ ಇದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. 2 ಮತ್ತು 3ನೇ ತರಗತಿ ನಲಿಕಲಿ ವಿದ್ಯಾರ್ಥಿಗಳ ಹಾಜರಾಗಿ ಪುಸ್ತಕದಲ್ಲಿ ವಿದ್ಯಾರ್ಥಿಗಳ ಹೆಸರಿನ ಮುಂದೆ 10 ಮತ್ತು 5 ರೂ. ಎಂದು ಬೆನ್ಸಿಲ್‌ನಲ್ಲಿ ನಮೂದಿಸಿರುವುದಕ್ಕೆ

ಅನುಮಾನಗೊಂಡು ಶಿಕ್ಷಕರಿಂದ ವಿವರಣೆ ಬಯಸಿದಾಗ ನಲಿಕಲಿ ಶಿಕ್ಷಕಿ ಸಬೂಬು ಹೇಳುತ್ತಿದ್ದಂತೆಯೇ ಸ್ವತಃ ಸಮಿತಿ ತಂಡವೇ ನಿಮ್ಮಿಂದ ಶಿಕ್ಷಕಿ 10 ರೂ. ಪಡೆದುಕೊಂಡ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಬಯಸುತ್ತಿದ್ದಂತೆಯೇ ಶಾಲೆಯಲ್ಲಿ ಗಡಿಯಾರ ಅಳವಡಿಸಲು ಪ್ರತಿ ವಿದ್ಯಾರ್ಥಿಯಿಂದ 10 ರೂ. ಪಡೆದುಕೊಳ್ಳುತ್ತಿರುವುದಾಗಿ ತಿಳಿಸುತ್ತಿದ್ದಂತೆಯೇ ಸಮಿತಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು ನೈಜತೆ ನಮೂದಿಸಿಕೊಂಡು ಅಲ್ಲಿಂದ ನಿರ್ಗಮಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ