ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಭೇಟಿ

Team Udayavani, Jun 13, 2019, 3:00 AM IST

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಎಚ್‌.ವಿಶ್ವನಾಥ್‌, ಜಿಪಂ ಉಪಾಧ್ಯಕ್ಷೆ ಗೌರಮ್ಮ ಮತ್ತಿತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮಳೆಯಿಂದ ಹೆಚ್ಚು ಹಾನಿಗೀಡಾದ ಚಲ್ಲಹಳ್ಳಿ ಹಾಗೂ ಚಿಕ್ಕಬೀಚನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಹಳ್ಳಿ, ರಾಂಪುರ, ಬೆಂಕಿಪುರ, ಚಲ್ಲಹಳ್ಳಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದರು.

ಬೆಂಕಿಪುರದಲ್ಲಿ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿ ಮಾತನಾಡಿದ ಶಾಸಕ ಎಚ್‌.ವಿಶ್ವನಾಥ್‌, ಈ ಹಿಂದೆ ಪ್ರಕೃತಿ ವಿಕೋಪ ನಿಧಿಯಿಂದ ಕಡಿಮೆ ಪರಿಹಾರ ಸಿಗುತ್ತಿದೆ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾನಿಗೊಳಗಾದಷ್ಟು ಪರಿಹಾರ ನೀಡುವಂತೆ ಸೂಚಿಸಿದ್ದು, ಅದರಂತೆ ಪರಿಹಾರ ನೀಡಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡಬೇಡಿ ಎಂದು ಅಭಯ ನೀಡಿದರು.

ಕಳೆದೆರಡು ತಿಂಗಳಿನಲ್ಲಿ ಗಾವಡಗೆರೆ ಮತ್ತು ಹನಗೋಡು ಹೋಬಳಿಯಲ್ಲಿ ಹಾನಿಗೀಡಾದ ಕುಟುಂಬಗಳಿಗೆ ಈವರೆಗೆ 40 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಬಾಕಿ ಇರುವ ಪ್ರಕರಣಗಳಲ್ಲಿ ಶೀಘ್ರ ಪರಿಹಾರ ವಿತರಿಸಲು, ಸ್ಥಳದಲ್ಲೇ ಹಾಜರಿದ್ದ ತಹಶೀಲ್ದಾರ್‌ ಬಸವರಾಜು ಅವರಿಗೆ ಸೂಚಿಸಿದರು.

ಎಲ್ಲೆಲ್ಲಿ ಹಾನಿ: ಬಿಳಿಕೆರೆ ಹೋಬಳಿಯ ಬೆಂಕಿಪುರ, ಗೋಹಳ್ಳಿ, ಚಲ್ಲಹಳ್ಳಿ, ಗಾಗೇನಹಳ್ಳಿ, ಹಳ್ಳಿಕೆರೆ, ಹಂದನಹಳ್ಳಿ ಗ್ರಾಮಗಳಲ್ಲಿ ಮಾವು, ಬಾಳೆ, ದ್ವಿದಳ ಧಾನ್ಯ, ತಂಬಾಕು ಸಸಿಮಡಿಗಳು ನಾಶವಾಗಿದೆ.

ಪರಿಶೀಲನೆ ವೇಳೆ ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ, ಮಾಜಿ ಸದಸ್ಯ ಕುನ್ನೇಗೌಡ, ತಾಪಂ ಉಪಾಧ್ಯಕ್ಷ ಪ್ರೇಮೇಗೌಡ, ಸದಸ್ಯೆ ಪುಟ್ಟಮ್ಮ, ಗ್ರಾಪಂ.ಉಪಾಧ್ಯಕ್ಷ ಬಿ.ಪಿ.ಸ್ವಾಮಿನಾಯ್ಕ, ಪಿಡಿಒ ಅಶ್ವಿ‌ನಿಶಂಕರ್‌, ಡಿ.ಟಿ.ದೇವರಾಜಪ್ಪ, ಆರ್‌.ಐ.ವೆಂಕಟಸ್ವಾಮಿ, ವಿ.ಎ. ಶಿವಲಿಂಗಪ್ಪ ಇತರರಿದ್ದರು.¤ತರರು ವೀಕ್ಷಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ತಿ. ನರಸೀಪುರ: ಪಟ್ಟಣದ ಲಿಂಕ್‌ ರಸ್ತೆಯಲ್ಲಿರುವ ಶ್ರೀ ಶನೈಶ್ಚರ ಸೇವಾ ಸಮಿತಿ ವತಿಯಿಂದ ಪಟ್ಟಣದ ಶನೈಶ್ಚರ ಸ್ವಾಮಿಯ 19 ನೇ ವರ್ಷದ ಪೂಜಾ ಮಹೋತ್ಸವಕ್ಕೆ ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ...

  • ಮೈಸೂರು: ನಾನು ಸಾಮಾಜಿಕ ನ್ಯಾಯದ ಪರವಿರುವುದರಿಂದಲೇ ಎಲ್ಲರೂ ನನ್ನ ವಿರುದ್ಧ ಮುಗಿ ಬೀಳ್ತಿದ್ದಾರೆ. ಈ ನಡುವೆ ನೀವೂ ಕೂಡ (ತಳ ವರ್ಗದವರು) ಯಾರ ಪರವಿರಬೇಕೆನ್ನುವುದನ್ನು...

  • ಮೈಸೂರು: ಬೆಂಗಳೂರಿನ ವೃಕ್ಷ ಫೌಂಡೇಷನ್‌ ವತಿಯಿಂದ ನಡೆದ ಮರಗಳ ಗಣತಿ ಅಭಿಯಾನಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸುತ್ತಳತೆ ಪಟ್ಟಿ ಹಿಡಿದು ಮರದ ಗಾತ್ರ...

  • ಎಚ್‌.ಡಿ.ಕೋಟೆ: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಅನ್ನುವ ಆದೇಶ ತಿಳಿದಿದ್ದರೂ ಅದೆಷ್ಟೋ ಮಂದಿ ಪೋಷಕರು ವಿವಿಧ ಕಾರಣಗಳಿಂದ ಕಾನೂನು ಕಡೆಗಣಿಸಿ ಕದ್ದು ಮುಚ್ಚಿ...

  • ಹುಣಸೂರು: ತಾಲೂಕಿನಲ್ಲಿ ಕಳೆದ 10 ವರ್ಷಗಳ ಕಾಲ ಅಮಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲು, ಅಟ್ರಾಸಿಟಿ, ಎತ್ತಿಕಟ್ಟಿ ಹೊಡೆದಾಡಿಸುವ ಆಡಳಿತವಿತ್ತು. ತಾವು ಶಾಸಕರಾಗಿದ್ದ...

ಹೊಸ ಸೇರ್ಪಡೆ

  • ಭಾರತ ಸರ್ಕಾರದ ವತಿಯಿಂದ "ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ'(NCRB) ಸ್ವಯಂಚಾಲಿತ ಮುಖ ಗುರುತು ಪತ್ತೆ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ....

  • "ಹನಿ ಹನಿಗೂಡಿದರೆ ಹಳ್ಳ- ತೆನೆ ತೆನೆ ಕೂಡಿದರೆ ಬಳ್ಳ' (Little drops of water make a mighty ocean)ಎನ್ನುವ ಗಾದೆಯ ಆಧಾರದ ಮೇಲೆ ಈ ಠೇವಣಿಯನ್ನು ಪ್ರಾರಂಭಿಸಲಾಗಿದೆ. ಈ ಠೇವಣಿಯ ಮಹಾಶಿಲ್ಪಿ,...

  • ಕಳೆದ ಎರಡು -ಮೂರು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಹಿಂಜರಿತ ಅನುಭವಿಸುತ್ತಿದೆ. ಬ್ಯಾಂಕುಗಳಲ್ಲಿ ಗೃಹಸಾಲ ದೊಡ್ಡ ಪ್ರಮಾಣದಲ್ಲಿ ಸುಸ್ತಿಯಾಗುತ್ತಿದೆ....

  • ಜೀವನ ಅಂದರೆ ಅಲೆಗಳಂತೆ. ಇಲ್ಲಿ ಭಾವದ ಏರು-ತಗ್ಗುಗಳಿವೆ. ಸಹಿಸಲಾಗದ ದುಃಖ, ಒಬ್ಬನೇ ಸಹಿಸಿಕೊಂಡು ಅನುಭವಿಸುವ ನೋವು, ಒಂಟಿಯಾಗಿಯೇ ಸಾಗಬೇಕು, ಸಾಧಿಸಬೇಕು ಮೌನವಾಗಿಯೇ...

  • ಅಂತರ್ಜಾಲವನ್ನು ಜಾಲಾಡಲು ಬ್ರೌಸರ್‌ಗಳು ಬೇಕೇ ಬೇಕು. "ಗೂಗಲ್‌ನ ಕ್ರೋಮ್‌' ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಬ್ರೌಸರ್‌. ಅತಿ ವೇಗವಾಗಿ ಕಾರ್ಯಾಚರಿಸುತ್ತದೆ...