Udayavni Special

ರೈತರ ಪ್ರಣಾಳಿಕೆಗೆ ಬದ್ಧರಿಗೆ ಮತದಾನ ಮಾಡಿ

Team Udayavani, May 4, 2018, 12:26 PM IST

m3-raita.jpg

ಮೈಸೂರು: ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಎಚ್‌.ಸಿ.ಮಹದೇವಪ್ಪನವರ ವಿರುದ್ಧ ಹಾಗೂ ರೈತರ ಪ್ರಣಾಳಿಕೆಗೆ ಬದ್ಧರಾಗಿರುವ ಅಭ್ಯರ್ಥಿಗಳಿಗೆ ಮತದಾನ ಮಾಡುವ ಕುರಿತು ರೈತರಲ್ಲಿ ಅರಿವು ಮೂಡಿಸಲು ರೈತ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬೈಕ್‌ ರ್ಯಾಲಿಗೆ ಚುನಾವಣಾಧಿಕಾರಿಗಳು ತಡೆಯೊಡ್ಡಿದ ಪ್ರಸಂಗ ನಡೆಯಿತು.

ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿದ್ದು, ಹೀಗಾಗಿ ಚುನಾವಣೆಯಲ್ಲಿ ರೈತರ ಜಾಗೃತಿ ಮೂಡಿಸಲು ರಾಜ್ಯ ರೈತ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಗುರುವಾರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಅಭಿಯಾನದ ಅಂಗವಾಗಿ ನಗರದ ಗನ್‌ಹೌಸ್‌ ವೃತ್ತದಿಂದ ಆರಂಭಗೊಂಡ ಬೈಕ್‌ ರ್ಯಾಲಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಚಾಲನೆ ನೀಡಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು, ಚುನಾವಣಾಧಿಕಾರಿಗಳು ಅನುಮತಿ ನೀಡದ ಹಿನ್ನೆಲೆಯಲ್ಲಿ ರ್ಯಾಲಿ ನಡೆಸಲು ನಿರಾಕರಿಸಿದರು. ಆದರೆ ಇದಕ್ಕೆ ಒಪ್ಪದ ರೈತರು ಶತಾಯಗತಾಯ ಬೈಕ್‌ ರ್ಯಾಲಿ ನಡೆಸುವುದಾಗಿ ಪಟ್ಟು ಹಿಡಿದರು. ಆದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಎಲ್ಲಾ ರೈತರು ಗನ್‌ಹೌಸ್‌ ಸಮೀಪದಲ್ಲಿರುವ ಉದ್ಯಾನದಲ್ಲಿ ಕುಳಿತು ಸಭೆ ನಡೆಸಿದರು.

ರೈತರ ಪ್ರತಿಭಟನೆ: ರ್ಯಾಲಿ ನಡೆಸಲು ಜಿಲ್ಲಾಧಿಕಾರಿಗಳು, ನಗರ ಪೊಲೀಸ್‌ ಆಯುಕ್ತರು, ಪೊಲೀಸ್‌ ವರಿಷ್ಠಾಧಿಕಾರಿಗಳು ಅನುಮತಿ ನೀಡಿದ್ದರು. ಈಗ ಏಕಾಏಕಿ ರ್ಯಾಲಿಗೆ ಅಡ್ಡಿಪಡಿಸಿದ್ದಲ್ಲದೇ ರ್ಯಾಲಿ ನಡೆಸಿದರೆ ಎಲ್ಲರನ್ನೂ ಬಂಧಿಸುವ ಬೆದರಿಕೆ ಹಾಕಿದ್ದಾರೆ. ಆದರೆ ನಗರದಲ್ಲಿ ಸಿನಿಮಾ ತಾರೆಯರು ಪಕ್ಷದ ಪರವಾಗಿ ಹಾಗೂ ವ್ಯಕ್ತಿಯ ಪರವಾಗಿ ಪ್ರಚಾರ ನಡೆಸಿದ್ದಾರೆ. ನಾವು ರೈತರ ಪ್ರಣಾಳಿಕೆಗೆ ಬದ್ಧರಾಗಿರುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ರೈತ ಜಾಗೃತಿ ಅಭಿಯಾನ ನಡೆಸಲು ಅನುಮತಿ ನೀಡದಿರುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ರೈತರಿಗೆ ಸೋಲಿಸೋದು ಗೊತ್ತಿದೆ: ರೈತರಿಗೆ ಗೆಲ್ಲಿಸೋದು ಗೊತ್ತಿಲ್ಲದಿದ್ದರೂ, ಸೋಲಿಸುವುದು ಗೊತ್ತಿದೆ. ಸಿದ್ದರಾಮಯ್ಯ ಹಾಗೂ ಎಚ್‌.ಸಿ.ಮಹದೇವಪ್ಪ ಅವರನ್ನು ಸೋಲಿಸುವುದು ನಮ್ಮ ಗುರಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ರೈತ ಜಾಗೃತಿ ಅಭಿಯಾನದ ಬೈಕ್‌ ರ್ಯಾಲಿ ವೇಳೆ ಸುದ್ದಿಗಾರರೊಂದಿಗೆ ಮಾತಮಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಐದು ವರ್ಷಗಳಿಂದ ರೈತರಿಗೆ ಯಾವುದೇ ಪ್ರೋತ್ಸಾಹ ನೀಡಿಲ್ಲ. ನ್ಯಾಯಕ್ಕಾಗಿ ಹೋರಾಡಿದ ರೈತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದು, ಅವರಿಗೆ ಬೇಕಾದವರ ವಿರುದ್ಧದ ದೂರುಗಳನ್ನು ಹಿಂಪಡೆದಿದ್ದಾರೆ.

ಕಳೆದ ಬಾರಿ ವರುಣದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸಿದ್ದರಾಮಯ್ಯ, ಇದೀಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ ವರುಣಾ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ನಮ್ಮದು ಯಾವ ಪಕ್ಷದ ಪರ ಪ್ರಚಾರವಲ್ಲ. ಬದಲಿಗೆ ನಮ್ಮ ಪ್ರಣಾಳಿಕೆ ಒಪ್ಪಿದವರಿಗೆ ಬೆಂಬಲ ನೀಡುತ್ತೇವೆ. ಆದ್ದರಿಂದ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಹಾಗೂ ತಿ.ನರಸೀಪುರದಲ್ಲಿ ಜೆಡಿಎಸ್‌ನ ಅಶ್ವಿ‌ನ್‌ಕುಮಾರ್‌ರಿಗೆ ನಮ್ಮ ಬೆಂಬಲವಿದೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು

ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು

ವಿಜಯಪುರ: ಅಪರಿಚಿತ ವಾಹನ ಢಿಕ್ಕಿಯಾಗಿ ಸ್ಥಳದಲ್ಲೇ 29 ಕುರಿಗಳ ಸಾವು!

ವಿಜಯಪುರ: ಅಪರಿಚಿತ ವಾಹನ ಢಿಕ್ಕಿಯಾಗಿ ಸ್ಥಳದಲ್ಲೇ 29 ಕುರಿಗಳ ಸಾವು!

ಚೀನಾಪಡೆಗೆ ಮುಖಭಂಗ: ಲಡಾಖ್ ನ 6 ಪ್ರಮುಖ ಪರ್ವತ ಶ್ರೇಣಿ ಭಾರತೀಯ ಸೇನಾಪಡೆ ವಶಕ್ಕೆ

ಚೀನಾಪಡೆಗೆ ಮುಖಭಂಗ: ಲಡಾಖ್ ನ 6 ಪ್ರಮುಖ ಪರ್ವತ ಶ್ರೇಣಿ ಭಾರತೀಯ ಸೇನಾಪಡೆ ವಶಕ್ಕೆ

ಹಳ್ಳದಲ್ಲಿ ಸಿಲುಕಿದ ಕೂಲಿಕಾರ್ಮಿಕರಿದ್ದ ಟ್ರಾಕ್ಟರ್: ಸ್ಥಳೀಯರ ಸಾಹಸದಿಂದ ರಕ್ಷಣೆ

ಹಳ್ಳದಲ್ಲಿ ಸಿಲುಕಿದ ಕೂಲಿಕಾರ್ಮಿಕರಿದ್ದ ಟ್ರಾಕ್ಟರ್: ಸ್ಥಳೀಯರ ಸಾಹಸದಿಂದ ರಕ್ಷಣೆ

ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ‌‌ ಕುಸಿತ

ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ‌‌ ಕುಸಿತ

ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು: 1,018 ಮಂದಿ ಗುಣಮುಖ

ಮೈಸೂರು: 1,018 ಮಂದಿ ಗುಣಮುಖ

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

mysuru-tdy-2

ಮೈಸೂರು: ಸತತ 2ನೇ ದಿನವೂ 17 ಸಾವು

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

MUST WATCH

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavaniಹೊಸ ಸೇರ್ಪಡೆ

ಯಾವುದೇ ಕಾರಣಕ್ಕೂ ಸದನ ಮೊಟಕುಗೊಳಿಸಲು ಬಿಡುವುದಿಲ್ಲ: ಡಿಕೆಶಿ

ಯಾವುದೇ ಕಾರಣಕ್ಕೂ ಸದನ ಮೊಟಕುಗೊಳಿಸಲು ಬಿಡುವುದಿಲ್ಲ: ಡಿಕೆಶಿ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

bng-tdy-1

ಪ್ರಯಾಣದ ಪ್ರಯಾಸ ತಗ್ಗಿಸಲಿದೆಯೇ ಹಾಲ್ಟ್ ಸ್ಟೇಷನ್‌?

ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು

ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು

ವಿಜಯಪುರ: ಅಪರಿಚಿತ ವಾಹನ ಢಿಕ್ಕಿಯಾಗಿ ಸ್ಥಳದಲ್ಲೇ 29 ಕುರಿಗಳ ಸಾವು!

ವಿಜಯಪುರ: ಅಪರಿಚಿತ ವಾಹನ ಢಿಕ್ಕಿಯಾಗಿ ಸ್ಥಳದಲ್ಲೇ 29 ಕುರಿಗಳ ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.