ಮೈಸೂರು ಅಭಿವೃದ್ಧಿಗೆ ಸಿದ್ದು ಕೊಡುಗೆ ಏನು?; ನಳೀನ್ ಕುಮಾರ್ ಕಟೀಲ್
ಒಡೆಯರ್ ಕಂಡ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ.
Team Udayavani, May 20, 2022, 5:46 PM IST
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭಾಗದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ವಿಜಯ ನಗರದ ಬಂಟರ ಸಮುದಾಯ ಭವನದಲ್ಲಿ ಬಿಜೆಪಿ ಗುರುವಾರ ಏರ್ಪಡಿಸಿದ್ದ ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಪದವೀಧರ ಕ್ಷೇತ್ರದ ಬಿರ್ಜೆ ಮೈ.ವಿ.ರವಿಶಂಕರ್ ಅವರ ಚುನಾವಣಾ ಪ್ರಚಾರ ನಿಮಿತ್ತ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೈಸೂರಿನ ಅಭಿವೃದ್ಧಿಯ ಬಗ್ಗೆ ಒಡೆಯರ್ ಕಂಡ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ. ಆದರೆ, ಇಷ್ಟು ವರ್ಷಗಳ ಕಾಲ ಮೈಸೂರಿನ ಪ್ರತಿನಿಧಿಯಾಗಿ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಒಡೆಯರ್ ಕುಟುಂಬಕ್ಕೆ ಅವಮಾನ: ಮೈಸೂರಿನ ಒಡೆಯರ್ ಕುಟುಂಬಕ್ಕೆ ಅವಮಾನ ಮಾಡಿದವರನ್ನು ಇನ್ನೂ ಮೈಸೂರಿನ ಜನತೆ ಇರಿಸಿಕೊಂಡಿದ್ದಾರೆ. ರಾಜಕಾರಣ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಕಡೆಯಾಗಿದ್ದಾರೆ ಇಷ್ಟೊತ್ತಿಗೆ ಊರಿನಿಂದಲೇ ಓಡಿಸುತ್ತಿದ್ದರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಬಿಜೆಪಿಯ ಪರವಾದ ಅಲೆಯಿದ್ದು, ನಾಲ್ಕು ಸ್ಥಾನಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಗೆ ಕೊಡುಗೆ ನೀಡಿ: ಯೋಗ ದಿನಾಚರಣೆ ಅಂಗವಾಗಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು, ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರನ್ನು ಗೆಲ್ಲಿಸುವ ಮೂಲಕ ಮೋದಿಗೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಿಲ್ಲ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಕುಮಾರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟ
ಗಾರ ಭಗತ್‌ಸಿಂಗ್ ಮತ್ತಿತರ ಕ್ರಾಂತಿಕಾರಿಗಳನ್ನು ಭಯೋತ್ಪಾದಕರೆಂದು ಜರಿದಿದ್ದ ಪಕ್ಷನಾಯಕ ಸಿದ್ದರಾಮಯ್ಯರಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ. ಪಕ್ಷ ನಾಯಕ ಸಿದ್ದರಾಮಯ್ಯ ಭಗತ್ ಸಿಂಗ್‌ರ ಪಾಠವನ್ನು ಪಠ್ಯದಿಂದ ರಾಜ್ಯ ಸರ್ಕಾರ ಕೈಬಿಟ್ಟಿದೆ, ಭಗತ್‌ಸಿಂಗ್ ಸ್ವಾತಂತ್ರ್ಯ ಹೋರಾಟಗಾರ ಎಂದು ಅಪರೂಪಕ್ಕೆ ಹೇಳಿದ್ದಾರೆ.
ಆದರೆ, ಇದೇ ಸಿದ್ದರಾಮಯ್ಯ ಅವರು, ಕ್ರಾಂತಿಕಾರಿಗಳಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಭಗತ್ ಸಿಂಗ್, ಉದಮ್‌ಸಿಂಗ್, ಚಂದ್ರಶೇಖರ್ ಆಜಾದ್ ಅವರನ್ನು ಭಯೋತ್ಪಾದಕರು, ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳಿದ್ದರು ಎಂಬುದನ್ನು ಮರೆಯಬಾರದು. ಈಗ ಅವರಿಗೆ ಸತ್ಯದ ಅರಿವು ಆಗಿದೆ ಎಂದು ಟಾಂಗ್ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಶಾಸಕ ರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಪ್ರೀತಂಗೌಡ, ಎನ್.ಮಹೇಶ್, ನಿರಂಜನ್ ಕುಮಾರ್, ಹರ್ಷವರ್ಧನ್, ರವಿಕುಮಾರ್, ಮಾಜಿ ಎಂಎಲ್‌ಸಿ ಸಿದ್ದರಾಜು, ಮೇಯರ್ ಸು ನಂದಾ ಫಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್, ರಾಜೇಂದ್ರ, ಮಾಜಿ ಸಚಿವ ಸಿ.ಎಚ್.ಜಯಶಂಕರ್, ಮಾಜಿ
ಶಾಸಕರಾದ ತೋಂಟದಾರ್ಯ ಸೇರಿದಂತೆ ಅನೇಕ ಮುಖಂಡರು ಇದ್ದರು.
ಸಭೆಯ ನಡುವೆ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ನಾಯಕರೊಂದಿಗೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರಸಲ್ಲಿಸಿ ಹಿಂದಿರುಗಿದರು. ಬಳಿಕ ಚುನಾವಣಾ ಪ್ರಚಾರ ಸಭೆ ನಡೆಯಿತು.
ಕುರುಬ ಸಮುದಾಯಕ್ಕೆ ಕೊಡುಗೆ ಏನು?: ಸತತ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದ ರಾಮಯ್ಯ ಅವರಿಂದ ಬೇರೆ ವರ್ಗದ ಜನರಿಗೆ ಇರಲಿ. ಕುರುಬ ಸಮುದಾಯಕ್ಕೆ ಏನು ಕೊಡುಗೆ ನೀಡಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಕಾಂಗ್ರೆಸ್, ಜೆಡಿಎಸ್ ಪಕ್ಷದ ಕೆಲ ನಾಯಕರು ಪಕ್ಷದಲ್ಲಿನ ರಾಜಕಾರಣದಿಂದ ಬೇಸತ್ತಿದ್ದಾರೆ. ಬಿಜೆಪಿ ಹೂವಿನ ಸಮುದ್ರವಾಗಿದ್ದು, ಭ್ರಷ್ಟಚಾರ ಮುಕ್ತರಾಗಿದೆ. ಇಲ್ಲಿಗೆ ಯಾರೂ ಬೇಕಾದರೂ ಬರಬಹುದಾಗಿದ್ದು, ಈ ಮೂಲಕ ಭದ್ರ ಬುನಾದಿಯಡಿ ದೇಶ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು. ಈ ವಿಧಾನ ಪರಿಷತ್ ಚುನಾವಣೆ ಮುಂದಿನ ವಿಧಾನ ಸಭೆ ಚುನಾವಣೆಗೆ ನಾಂದಿಯಾಗಲಿದ್ದು, ಈ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಾತಾವರಣವಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಣಸೂರು: ಸಾಲಿಗ್ರಾಮ ಠಾಣಾ ಪಿ.ಎಸ್.ಐ. ಹೃದಯಾಘಾತದಿಂದ ನಿಧನ
ಹುಣಸೂರು : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಶಾಲಾ ಶಿಕ್ಷಕ ಸಾವು
ಚುನಾವಣೆ : ಆಣೆ ಪ್ರಮಾಣಕ್ಕಾಗಿ ಗೆಲುವಿನ ಸಂಭ್ರಮ ಮರೆತು ಬಸ್ ಹತ್ತಿದ ಗ್ರಾ.ಪಂ. ಸದಸ್ಯರು
ಫ್ಲೆಕ್ಸ್ನಲ್ಲಿ ಕೆಂಪೇಗೌಡರ ಬದಲು ವೀರಮದಕರಿ ಫೋಟೋ ಮುದ್ರಣ
ಶೀಲ ಶಂಕಿಸಿ ಪತ್ನಿ ರುಂಡವನ್ನೇ ಕತ್ತರಿಸಿದ ಪತಿ! : ಮೈಸೂರಿನಲ್ಲಿ ಭೀಕರ ಕೃತ್ಯ
MUST WATCH
ಹೊಸ ಸೇರ್ಪಡೆ
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರ ಪತನ : ಸಿಎಂ ಸ್ಥಾನಕ್ಕೆ ಉದ್ಧವ್ ರಾಜೀನಾಮೆ
ಸುಪ್ರೀಂನಲ್ಲೂ ಉದ್ಧವ್ ಗೆ ಮುಖಭಂಗ : ನಾಳೆಯೇ ಬಹುಮತ ಸಾಬೀತಿಗೆ ಸುಪ್ರೀಂ ಮಹತ್ವದ ಆದೇಶ
ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಮಕ್ಕಳ ಶವದೊಂದಿಗೆ ರಿಕ್ಷಾದಲ್ಲಿ ತಿರುಗಾಡಿದ ಪಾಪಿ ತಂದೆ
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆಸ್ಕರ್ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್ ನಟಿ ಕಾಜೋಲ್