Udayavni Special

ನಡೆಯದ ಗ್ರಾಪಂ ಕೆಡಿಪಿ ಸಭೆ-ಆಕ್ರೋಶ

ಆದೇಶ ಉಲ್ಲಂಘನೆ ಬೆರಳೆಣಿಕೆಯಷ್ಟು ಮಾತ್ರ ಆದೇಶ ಪಾಲನೆ ಕುಂಠಿತವಾಗುತ್ತಿರುವ ಅಭಿವೃದ್ಧಿ

Team Udayavani, Oct 10, 2019, 3:41 PM IST

10-October-16

ವಿಶೇಷ ವರದಿ
ನರೇಗಲ್ಲ: ಗ್ರಾಪಂಗಳ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಮೇಲೆ ಇನ್ನಷ್ಟು ನಿಗಾವಹಿಸಲು ರಾಜ್ಯ ಸರ್ಕಾರ ಕಳೆದ ಜೂ. 11 ರಂದು ಎಲ್ಲ ಗ್ರಾಪಂಗಳಲ್ಲಿ ಮಹತ್ವದ ಹೆಜ್ಜೆ ಇರಿಸಿತ್ತು. ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಗ್ರಾಪಂ ಮಟ್ಟದಲ್ಲಿ ಸಮಿತಿ (ಕೆಡಿಪಿ) ರಚಿಸುವ ಹೊಸ ಪದ್ಧತಿ ಜಾರಿಗೊಳಿಸಿತ್ತು.

ಆದರೆ, ತಾಲೂಕಿನ ಗ್ರಾಪಂಗಳಲ್ಲಿ ನಡೆಯಬೇಕಾದ ಕೆಡಿಪಿ ಸಭೆ ಆದೇಶಕ್ಕೆ ಈಗ ಉಲ್ಲಂಘನೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಗ್ರಾಪಂ ಮಟ್ಟದ ಅ ಧಿಕಾರಿಗಳು ಪ್ರತಿಯೊಂದು ವಿಷಯವನ್ನು ವಿವರವಾಗಿ ಓದಿ ಹೇಳಬೇಕಿದೆ. ಆದರೆ ಅವರು ತಾಂತ್ರಿಕ ತೊಂದರೆ ಹೇಳುತ್ತ ಕಾಲಹರಣ ಮಾಡುತ್ತಿರುವವರಿಗೆ ಇದರಿಂದ ತೊಂದರೆಯಾಗಬಹದು ಎಂದು ನಿರಾಶಕ್ತಿಯ ಜತೆಗೆ ನಿಷ್ಕಾಳಜಿ ತೋರುತ್ತಿರುವುದರಿಂದ ಗ್ರಾಪಂ ಮಟ್ಟದ ಕೆಡಿಪಿ ಸಭೆಗಳು ನಡೆಯುವುದು ವಿರಳವಾಗಿದೆ ಎನ್ನುವುದು ಸಾರ್ವಜನಿಕರ ಮಾತು.

ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅಸ್ತಿತ್ವದಲ್ಲಿರುವ ಕೆಡಿಪಿ ಸಮಿತಿ ರೀತಿಯಲ್ಲೇ ಗ್ರಾಮ ಮಟ್ಟದಲ್ಲಿಯೂ ಗ್ರಾ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮ ಮಟ್ಟದ ಕೆಡಿಪಿ ಸಮಿತಿ ರಚನೆಗೆ ಸೂಚಿಸಲಾಗಿತ್ತು. ಇದರ ಉದ್ದೇಶ ಕೇಂದ್ರ-ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಮಂಜೂರಾಗುವ ಅನುದಾನ ಸದ್ಬಳಕೆ ಚರ್ಚೆ, ತೀರ್ಮಾನ ಕೈಗೊಳ್ಳುವ ಮಹತ್ವದ ಅಧಿ ಕಾರ, ಈ ಸಭೆಗೆ ಗ್ರಾಪಂ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲಾಖೆವಾರು ಪ್ರಗತಿ ಕಾರ್ಯಕ್ರಮದ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆನ್ನುವುದು ಇದರ ಮೂಲ ಉದ್ದೇಶ ಇಟ್ಟುಕೊಂಡು ಸರ್ಕಾರದ ಪದ ನಿಮಿತ್ತ ಜಂಟಿ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ ನಿದೇರ್ಶಕರು 2019 ಜೂ.11ರಂದು ಆದೇಶ ಹೊರಡಿಸಿದೆ.

ಕಾಟಾಚಾರಕ್ಕಾಗಿ ಸಭೆ: ಇದರಲ್ಲಿ 26 ಇಲಾಖೆಗಳು ಸಮಿತಿ ವ್ಯಾಪ್ತಿಗೆ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ 20 ಅಂಶಗಳ ಕಾರ್ಯಕ್ರಮ ಸಂಬಂಧ ಸರ್ಕಾರ ರೂಪಿಸಿರುವ ನಿಯಮಾವಳಿಗಳ ಅನ್ವಯ ಗ್ರಾಪಂ ಕೆಡಿಪಿ ಸಭೆಯು ಅನಿಷ್ಠಾನಗೊಳ್ಳಬೇಕಾಗಿದೆ. ಈ ಸಭೆಗೆ ಹೋಬಳಿ, ಗ್ರಾಮ ಮಟ್ಟದ ಅಧಿ ಕಾರಿಗಳು, ಸಿಬ್ಬಂದಿ, ಕೆಡಿಪಿ ಸಭೆಗೆ ಹಾಜರಾಗಬೇಕಾಗಿರುವುದು ಕಡ್ಡಾಯ. ಸಭೆಯು ವರ್ಷದ ಏಪ್ರಿಲ್‌, ಜುಲೈ, ಅಕ್ಟೋಬರ್‌, ಡಿಸೆಂಬರ್‌ ಮೊದಲ ವಾರದಲ್ಲಿ ಕಡ್ಡಾಯವಾಗಿ ನಡೆಯಬೇಕೆನ್ನುವ ಆದೇಶವಿದ್ದರೂ ತಾಲೂಕಿನ ಕೆಲವೇ ಬೆರಳೆಣಿಕೆಯ ಗ್ರಾಪಂಗಳು ಕಾಟಾಚಾರಕ್ಕೆ ಎನ್ನುವಂತೆ ಕೆಡಿಪಿ ಸಭೆ ಮಾಡಿ ಮುಗಿಸಿದ್ದಾರೆ ಎನ್ನುವುದು ಕೆಲವು ಗ್ರಾಪಂ ಸದಸ್ಯರ ಆರೋಪ.

ಆದೇಶಕ್ಕೆ ಕ್ಯಾರೆ ಇಲ್ಲ: ರೋಣ ತಾಲೂಕಿನಲ್ಲಿ ಒಟ್ಟು 35 ಗ್ರಾಪಂಗಳಿವೆ. ಜಿಲ್ಲೆಯಲ್ಲಿಯೇ ಹೆಚ್ಚು ಗ್ರಾಪಂ ಹೊಂದಿದೆಯಾದರೂ, ತಾಪಂ ಅಧಿಕಾರಿಗಳು ಅಕ್ಟೋಬರ್‌ ಮೊದಲ ವಾರದಲ್ಲಿ ಕೆಡಿಪಿ ಸಭೆ ನಡೆಸಲು ಆದೇಶ ನೀಡಿದ್ದರೂ ಕೇವಲ 7 ಗ್ರಾಪಂಗಳು ಮಾತ್ರ ಸಭೆ ನಡೆಸಿವೆ. ಇನ್ನುಳಿದ 28 ಗ್ರಾಪಂಗಳು ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದಿರುವುದು ದುರಂತ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿಯಲ್ಲಿ ಮತ್ತೆ ನಾಲ್ಕು ಕೋವಿಡ್ 19 ಪ್ರಕರಣ

ನಿಜಾಮುದ್ದೀನ್ ನಿಂದ ಬಂದ ನಾಲ್ವರಿಗೆ ಸೋಂಕು: ಬೆಳಗಾವಿಯಲ್ಲಿ ಮತ್ತೆ ನಾಲ್ಕು ಹೊಸ ಪ್ರಕರಣ

sm-tdy-1

ಹಾಪ್‌ಕಾಮ್ಸ್‌ ಮಳಿಗೆ ತೆರೆಯಲು ಸೂಚನೆ

ಜಿಲ್ಲೆಯಲ್ಲಿಲ್ಲ ಕೊರೊನಾ ಪ್ರಕರಣ: ಸಿ.ಟಿ. ರವಿ

ಜಿಲ್ಲೆಯಲ್ಲಿಲ್ಲ ಕೋವಿಡ್ 19 ಪ್ರಕರಣ: ಸಿ.ಟಿ. ರವಿ

ಮನೋವೈದ್ಯರಿಂದ ಕೌನ್ಸೆಲಿಂಗ್‌

ಮನೋವೈದ್ಯರಿಂದ ಕೌನ್ಸೆಲಿಂಗ್‌

ವಿಪತ್ತು ಸಮರ್ಥ ನಿರ್ವಹಣೆಗೆ 16 ತಂಡ

ವಿಪತ್ತು ಸಮರ್ಥ ನಿರ್ವಹಣೆಗೆ 16 ತಂಡ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ಎಸ್‌ಡಿಆರ್‌ಎಫ್‌ ಕೇಂದ್ರದಿಂದ 395 ಕೋ. ರೂ.

ಎಸ್‌ಡಿಆರ್‌ಎಫ್‌ ಕೇಂದ್ರದಿಂದ 395 ಕೋ. ರೂ.

ನಷ್ಟ: ವಿಶ್ವ ಸರಣಿಯ ಆತಿಥ್ಯಕ್ಕೆ ಪಾಕ್‌ ಮನವಿ

ನಷ್ಟ: ವಿಶ್ವ ಸರಣಿಯ ಆತಿಥ್ಯಕ್ಕೆ ಪಾಕ್‌ ಮನವಿ

3-4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

3-4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

ಆರೋಗ್ಯ ಯೋಧರು: 10 ಲಕ್ಷ ಮಾಸ್ಕ್ ತಯಾರಿಸಿದ ಮಹಿಳೆಯರು

ಆರೋಗ್ಯ ಯೋಧರು: 10 ಲಕ್ಷ ಮಾಸ್ಕ್ ತಯಾರಿಸಿದ ಮಹಿಳೆಯರು