ಕಟ್ಟಡ ನಿರ್ಮಾಣದಲ್ಲಿ ವಿಶಿಷ್ಟ ಪ್ರಯೋಗ

ಎನ್‌. ಗೌರೀಪುರ ಗ್ರಾಮದಲ್ಲಿ ಐಐಎಸ್ಸಿಯಿಂದ ವಿನೂತನ ಸಮುದಾಯ ಭವನ ನಿರ್ಮಾಣ

Team Udayavani, May 3, 2019, 12:58 PM IST

3-May-17

ನಾಯಕನಹಟ್ಟಿ: ಎನ್‌. ಗೌರೀಪುರ ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯ ಭವನ.

ನಾಯಕನಹಟ್ಟಿ: ಬಿರುಬಿಸಿಲಲ್ಲೂ ತಣ್ಣನೆಯ ಅನುಭವ ನೀಡುವ ವಿಶಿಷ್ಟ ಮಾದರಿಯ ಸಮುದಾಯ ಭವನವನ್ನು ನಿರ್ಮಿಸಿ ಐಐಎಸ್ಸಿ ಗಮನ ಸೆಳೆದಿದೆ.

ನಾಗರಿಕತೆ ಬೆಳೆದಂತೆಲ್ಲಿ ಆರ್‌ಸಿಸಿ ಕಟ್ಟಡಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ. ಆರ್‌ಸಿಸಿ ಕಟ್ಟಡಗಳು ಬಿಸಿಲನ್ನು ಪ್ರತಿಫಲಿಸಿ ಹೆಚ್ಚಿನ ಬಿಸಿಯನ್ನುಂಟು ಮಾಡುತ್ತವೆ. ಹಿಂದಿನ ತಲೆಮಾರಿನ ಜನರು ನಿರ್ಮಿಸುತ್ತಿದ್ದ ತೊಲೆ, ಜಂತಿ, ಕಂಬಗಳನ್ನು ಹೊಂದಿದ್ದ ಮಣ್ಣಿನ ಮನೆಗಳನ್ನು ತಣ್ಣಗಿರುತ್ತಿದ್ದವು. ಪ್ರಾಚೀನ ಕಾಲದ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಐಐಎಸ್ಸಿ, ಹೊಸ ವಿಧಾನದಲ್ಲಿ ಮಣ್ಣಿನ ಮನೆಗಳನ್ನು ನಿರ್ಮಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. 1500 ಎಕರೆ ಪ್ರದೇಶದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮನೆ ನಿರ್ಮಾಣದಲ್ಲಿ ವಿಶಿಷ್ಟ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದೆ. ಗೃಹ ನಿರ್ಮಾಣಕ್ಕೆ ಸಾಲ ನೀಡುವ ಎಚ್‌ಡಿಎಫ್‌ಸಿ, ಐಐಎಸ್ಸಿಗೆ ಅನುದಾನ ನೀಡಿದೆ. ಈ ಅನುದಾನವನ್ನು ಬಳಸಿಕೊಂಡು ಎನ್‌. ಗೌರೀಪುರ ಗ್ರಾಮದಲ್ಲಿ ಪರಿಸರ ಸ್ನೇಹಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ.

20 ಅಡಿ ಉದ್ದ ಹಾಗೂ 30 ಅಡಿ ಅಗಲದ ಒಳಾಂಗಣ ಹಾಗೂ ಮುಂಭಾಗದ ಹೊರಾಂಗಣ ಸೇರಿದಂತೆ 700 ಚದರ ಅಡಿ ಪ್ರದೇಶವನ್ನು ಸಮುದಾಯ ಭವನ ಹೊಂದಿದೆ. ಕೇವಲ 9 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿರುವುದು ವಿಶೇಷ. ಕಟ್ಟಡ‌ಕ್ಕೆ ಹೊಂದಿಕೊಂಡಂತೆ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಲಾಗಿದೆ. ಎಚ್‌ಡಿಎಫ್‌ಸಿಯ ಎಚ್.ಟಿ. ಪಾರೇಖ್‌ ಫೌಂಡೇಷನ್‌ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದೆ.

ಕಟ್ಟಡ ನಿರ್ಮಾಣದಲ್ಲಿ ಮಣ್ಣಿನ ಇಟ್ಟಿಗೆ ಬಳಸಲಾಗಿದೆ. ಇಟ್ಟಿಗೆ ನಿರ್ಮಾಣದಲ್ಲಿ ಸ್ಥಳೀಯವಾಗಿ ದೊರೆಯುವ ಮಣ್ಣು ಹಾಗೂ ಶೇ.8 ರಿಂದ 10 ರವರೆಗೆ ಸಿಮೆಂಟ್ ಬಳಸಲಾಗಿದೆ. ಮಣ್ಣಿನ ಇಟ್ಟಿಗೆಗಳನ್ನು ಮಾನವ ಶ್ರಮ ಹಾಗೂ ಯಂತ್ರದ ಮೂಲಕ ತಯಾರಿಸಲು ಐಐಎಸ್ಸಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ತಯಾರಿಸಿದ ಇಟ್ಟಿಗೆಗಳನ್ನು ಹದಿನೈದು ದಿನಗಳ ಕಾಲ ಕ್ಯೂರಿಂಗ್‌ ಮಾಡಲಾಗುವುದು. ಈ ವಿಧಾನದಲ್ಲಿ ಇಟ್ಟಿಗೆಯನ್ನು ಸುಡುವುದರ ಬದಲಾಗಿ

ಒತ್ತಡ ನೀಡುವುದರ ಮೂಲಕ ತಯಾರಿಸಲಾಗುವುದು. ಈ ಇಟ್ಟಿಗೆಗಳು ಸಾಮಾನ್ಯ ಇಟ್ಟಿಗೆಗಳಿಗಿಂತ ಹೆಚ್ಚಿನ ಒತ್ತಡವನ್ನು ಸಹಿಸುವ ಸಾಮರ್ಥ್ಯವನ್ನು ಹೊಂದಿವೆ. ಆಧುನಿಕ ಉಪಕರಣಗಳನ್ನು ಬಳಸಿ ಇಟ್ಟಿಗೆಯ ಒತ್ತಡ ಸಹಿಸುವ ಪರೀಕ್ಷೆ ನಡೆಸಲಾಗಿದೆ.

ಅಡಿಪಾಯ ಹಾಗೂ ಗೋಡೆಗಳನ್ನು ನಿರ್ಮಿಸಿದ ನಂತರ ಕಾಂಕ್ರಿಟ್ ಬಳಸಿ ಮೇಲ್ಛಾವಣಿ ನಿರ್ಮಿಸಲಾಗುವುದು. ಆದರೆ ಐಐಎಸ್ಸಿ ನಿರ್ಮಿಸಿದ ಹೊಸ ರೀತಿಯ ಕಟ್ಟಡದಲ್ಲಿ ಆರ್‌ಸಿಸಿಯ ಮೇಲ್ಭಾಗದಲ್ಲಿ ಮತ್ತೂಂದು ಸ್ತರದ ಪೂರ್ವ ನಿರ್ಮಿತ ಕಾಂಕ್ರಿಟ್ ಸ್ಲ್ಯಾಬ್‌ಗಳ್ನು(ಪ್ರೀಕಾಸ್ಟ್‌ ಸ್ಲ್ಯಾಬ್‌) ಹಾಕಲಾಗಿದೆ. ಎರಡು ಸ್ತರಗಳ ಮೇಲ್ಭಾಗದಲ್ಲಿ ವಾಟರ್‌ ಪ್ರೂಪ್‌ ಹೊದಿಕೆ ಹಾಕಲಾಗಿದೆ. ಎರಡು ಸ್ತರಗಳ ನಡುವೆ 9 ಇಂಚಿನಷ್ಟು ಸ್ಥಳಾವಕಾಶವಿದೆ. ಈ ನಡುವಿನ ಜಾಗದಲ್ಲಿ ಗಾಳಿ ಸಂಚಾರವಾಗುತ್ತದೆ. ಹೀಗಾಗಿ ಸೂರ್ಯನ ಬೆಳಕು ಕೆಳಗಿನ ಆರ್‌ಸಿಸಿ ಪದರವನ್ನು ಬಿಸಿಯಾಗಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಕಟ್ಟಡದ ಒಳಗೆ ತಣ್ಣನೆಯ ಅನುಭವ ನೀಡುತ್ತದೆ.

ಸಮುದಾಯ ಭವನದಲ್ಲಿ ದೊಡ್ಡ ದೊಡ್ಡ ಕಿಟಕಿಗಳನ್ನು ಅಳವಡಿಸಲಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಗಾಳಿ ಹಾಗೂ ಬೆಳಕು ಪ್ರವೇಶಿಸುತ್ತದೆ. ಹೊಸ ಮಾದರಿಯ ಎಲ್ಇಡಿ ಟ್ಯೂಬ್‌ಲೈಟ್‌ಗಳು ಕಟ್ಟಡದ ಒಳಭಾಗದಲ್ಲಿ ತಣ್ಣನೆಯ ಬೆಳಕನ್ನು ನೀಡುತ್ತಿವೆ. ಶೀಘ್ರದಲ್ಲಿ ಕಟ್ಟಡದ ಉದ್ಘಾಟನೆ ನೆರವೇರಲಿದೆ. ನಂತರ ಕಟ್ಟಡವನ್ನು ಸಂಸ್ಥೆಯು ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಲಾಗುತ್ತದೆ.

ನೂತನ ಕಟ್ಟಡ ಇಲ್ಲಿನ ಹೆಚ್ಚಿನ ಉಷ್ಣತೆಯ ಪ್ರದೇಶಕ್ಕೆ ಹೇಳಿ ಮಾಡಿಸಿದಂತಿದೆ. ಬಿರು ಬೇಸಿಗೆಯ ದಿನಗಳಲ್ಲಿ ಕಟ್ಟಡದ ಒಳಗಿರುವ ಜನರಿಗೆ ತಣ್ಣನೆಯ ಅನುಭವ ನೀಡುತ್ತದೆ. ಹಣ ಉಳಿಸುವ ಹಾಗೂ ಸಾಂಪ್ರದಾಯಿಕ ಮಣ್ಣಿನ ಮನೆ ನಿರ್ಮಿಸುವುದರಿಂದ ವೆಚ್ಚದ ಉಳಿತಾಯದ ಜತೆಗೆ ತಣ್ಣನೆಯ ಅನುಭವ ಇಲ್ಲಿ ದೊರೆಯುತ್ತದೆ.

ಕಾರ್ಪೋರೆಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಯನ್ನು ಬಳಸಿ ಈ ಭವನನ್ನು ನಿರ್ಮಿಸಲಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚ ತಗಲುತ್ತದೆ. ಆದರೆ ಈ ತಂತ್ರಜ್ಞಾನದಿಂದ ಹಣದ ಉಳಿತಾಯದ ಜತೆಗೆ ಪರಿಸರ ಸ್ನೇಹಿಯಾಗಿರುತ್ತದೆ. ಪ್ರಾಚೀನ ಕಾಲದ ಜನರು ಬಳಸಿಕೊಂಡಿರುವ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ. ಐಐಎಸ್ಸಿ ಹಾಗೂ ಎಚ್‌ಡಿಎಫ್‌ಸಿ ಸಂಸ್ಥೆಗಳು ಸ್ಥಳೀಯರಿಗೆ ಈ ಸಮುದಾಯ ಭವವನ್ನು ಕೊಡುಗೆಯಾಗಿ ನೀಡಿವೆ.
ಪ್ರೊ| ಬಿ.ವಿ. ವೆಂಕಟರಾಮ ರೆಡ್ಡಿ,
ಮುಖ್ಯಸ್ಥರು, ಸಿ ಬೆಲ್ಟ್ ವಿಭಾಗ, ಐಐಎಸ್ಸಿ.

ಎನ್‌. ಗೌರೀಪುರ ಗ್ರಾಮಕ್ಕೆ ಐಐಎಸ್ಸಿ ಹಾಗೂ ಎಚ್‌ಡಿಎಫ್‌ಸಿ ವತಿಯಿಂದ ಉಚಿತವಾಗಿ ಸಮುದಾಯ ಭವನವನ್ನು ನೀಡಲಾಗಿದೆ. ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಹಾಗೂ ನವೀಕರಿಸಲಾಗುವ ಇಂಧನಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. ಇದೇ ಮಾದರಿಯ ಕಟ್ಟಡವನ್ನು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಉಚಿತ ಕೊಡುಗೆಯಾಗಿ ನೀಡಲಾಗುವುದು.
• ಪ್ರೊ| ಬಿ.ಎನ್‌. ರಘುನಂದನ್‌,
ಮುಖ್ಯಸ್ಥರು, ಕುದಾಪುರ ಐಐಎಸ್ಸಿ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.