ತಾಲೂಕಿನ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ

Team Udayavani, Aug 24, 2019, 5:43 PM IST

ಪಾವಗಡ ಪಟ್ಟಣದ ತಾಪಂ ಸಭಾಂಗಣದಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣ ಸ್ವಾಮಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು

ಪಾವಗಡ: ತಾಲೂಕಿನ ಅಭಿವೃದ್ಧಿಗೆ ಯಾರೇ ಅಗಲಿ ರಾಜಕೀಯ ಹೋರತು ಪಡಿಸಿ ಸಾಗಬೇಕಿದೆ ರಾಜಕೀಯ ಮಿಶ್ರಣವಾದರೆ ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯರಾದ ಎ.ನಾರಾಯಣಸ್ವಾಮಿ ಹೇಳಿದರು. ಶುಕ್ರವಾರ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಮಗ್ರ ಅಭಿವೃದ್ಧಿಗೆ ಯಾವುದೇ ರಾಜಕೀಯ ಬೇಡ ನಮ್ಮದೇ ಸರ್ಕಾರವಿದೆ ಅನುದಾನ ತಂದು ಸರ್ವತೋಮುಖ ಅಭಿವೃದ್ಧಿ ಶ್ರಮಿಸೋಣ. ರಾಜಕೀಯ ಮಾಡಿದರೆ ನಾನಂತು ಸುಮ್ಮನೆ ಕೂರುವುದಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಪಂ ವೆಬ್‌ಸೈಟ್ ಮೊದಲು ಸಿದ್ಧಪಡಿಸಬೇಕು ಎಲ್ಲಾ ಕಾರ್ಯಕ್ರಮಗಳು ವೆಬ್‌ಸೈಟ್‌ನಲ್ಲಿ ಲಭ್ಯ ವಿರುವಂತೆ ನೋಡೊಕೊಳ್ಳಬೇಕು. ಪ್ರತಿ ಇಲಾಖೆ ವಾರು ಕಾರ್ಯಕ್ರಮಗಳು ,ಸಮಸ್ಯೆಗಳ ಸ್ಪಷ್ಟ ಚಿತ್ರಣವನ್ನು ತಾಪಂ ವೆಬ್‌ಸೈಟ್‌ನಲ್ಲಿ ಸಿಗುವಂತೆ ಮಾಡಬೇಕು ಎಂದು ಇಒ ನರಸಿಂಹಮೂರ್ತಿಗೆ ಸೂಚಿಸಿದರು. ಈ ತಿಂಗಳು 26 ರೊಳಗೆ ತಾಲೂಕಿನ ಶಿಥಿಲ ಶಾಲಾ ಕಟ್ಟಡಗಳ ಪೋಟೊ ಸಹಿತ ಮಾಹಿತಿ ನೀಡುವಂತೆ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ, ಯಾವುದೇ ವಿದ್ಯಾರ್ಥಿ ಭಯದ ವಾತವರಣ ದಲ್ಲಿ ಪಾಠ ಕೇಳು ವಂತಾಗುವುದು ಬೇಡ. ಸೂಕ್ತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.

ಹೋಬಳಿಗೊಂದು ಉತ್ತಮ ಶಾಲೆಗಳನ್ನು ಗುರುತಿಸಿ ಕಾರ್ಪೊರೇಟ್ ವಲಯದಿಂದ ಆ ಶಾಲೆ ಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಚಿತಿಂಸ ಲಾಗಿದ್ದು, ಅಂತಹ ಶಾಲೆಗಳ ಪಟ್ಟಿ ನೀಡಬೇಕು, ತಾಂತ್ರಿಕ ಸಮಸ್ಯೆಯಿಂದ ಎಷ್ಟು ನೀರಿನ ಘಟಕಗಳು ಕೆಟ್ಟು ನಿಂತಿವೆ, ಕ್ರಮಕೈಗೊಂಡಿರುವ ಬಗ್ಗೆ, ಘಟಕಗಳ ಚಾಲನೆಗೆ ನಿರ್ಲಕ್ಷತೆಯ ಬಗ್ಗೆ ಸಂಸದರು ತರಾಟೆಗೆ ತೆಗೆದುಕೊಂಡರು. ಪ್ರತಿ ಶಾಲೆಯಲ್ಲಿ ಶುದ್ಧಕುಡಿವ ನೀರಿನ ಘಟಕ ನಿರ್ಮಾಣ ಮಾಡಬೇಕು. ಫ್ಲೋರೈಡ್‌ ನೀರು ಸರಬರಾಜಾಗ ದಂತೆ ಗ್ರಾಮೀಣ ಕುಡಿವ ನೀರು ಉಪವಿಭಾಗಾಧಿ ಕಾರಿ ಬಿ.ಪಿ.ನಾಗರಾಜು ಗೆ ಹೇಳಿದರು.

ತಾಲೂಕಿನ ಪ್ರತಿ ಗ್ರಾಪಂನಲ್ಲಿ ಅರ್ಹ ಪಲಾನು ಭವಿಗಳಿಗೆ ಮನೆ ಹಂಚಿಕೆಯಲ್ಲಿ 20 ರಿಂದ 30 ಸಾವಿರ ಹಣ ಪಡೆಯಲಾಗುತ್ತಿದೆ ಇದರ ಪೂರ್ಣ ಮಾಹಿತಿ ಲಭ್ಯವಿದ್ದು ಯಾವುದೇ ಮುನ್ನಸೂಚನೆ ಇಲ್ಲದೆ ಕ್ರಮ ಕೈಗೊಳ್ಳಲಾಗುವುದು. ಮನೆಗಳ ಪಟ್ಟಿ ನೀಡಿ ಎಂದು ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು. ತಹಶೀಲ್ದಾರ್‌ ವರದರಾಜು ಅವರಿಗೆ ಅಧಾರ್‌ ಸಮಸ್ಯೆ ಮತ್ತು ಮಾಸಾಶನ ಬಗ್ಗೆ ಮಾಹಿತಿ ಪಡೆದು ಮುಂದೆ ಇಂಥ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.

ಪಟ್ಟಣದ ತಾಪಂ ನೂತನ ಸಭಾಂಗಣ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾ ಗಿರುವ ಬಗ್ಗೆ ತಾಪಂ ಅಧ್ಯಕ್ಷರಾದ ಸೋಗಡು ವೆಂಕಟೇಶ್‌ ತಿಳಿಸಿದಾಗ ,ಸಂಸದರ ಕೋಟಾದಿಂದ ಹೆಚ್ಚುವರಿ ಅನುದಾನ ನೀಡಿ ಬೃಹತ್‌ ಸಭಾಂಗಣ ನಿರ್ಮಿಸೋಣ ಎಂದು ಸಂಸದರು ತಿಳಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒ ಗಳು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ