ಕೃಷಿ ಮೇಳದಲ್ಲಿ ರಜಾ ಮಜಾ ಮಾಡಿದ ಜನ

ಬಟ್ಟೆ-ತಿನಿಸು-ಗೃಹೋಪಯೋಗಿ ವಸ್ತುಗಳ ವ್ಯಾಪಾರ ಜೋರುಕೃಷಿ ಆಧಾರಿತ ವಹಿವಾಟು ಮಂಕು

Team Udayavani, Dec 16, 2019, 3:24 PM IST

16-December-16

ರಾಯಚೂರು: ರಾಯಚೂರು ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಎರಡನೇ ದಿನ ರವಿವಾದ ಕಾರಣ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರ ಸೇರಿದಂತೆ ಸುತ್ತಲಿನ ಜನ ಹೆಚ್ಚಾಗಿ ಬಂದ ಕಾರಣ ವ್ಯಾಪಾರ ವಹಿವಾಟು ತುಸು ಜೋರಾಗಿಯೇ ನಡೆಯಿತು.

ಬಹುತೇಕರು ಕುಟುಂಬ ಸಮೇತರಾಗಿ ರಜೆ ಮಜಾ ಕಳೆಯಲು ಬಂದಂತೆ ಭಾಸವಾಯಿತು. ಮಳಿಗೆಗಳಲ್ಲಿ ಅಳವಡಿಸಿರುವ ಬಟ್ಟೆ, ತಿಂಡಿ, ಗೃಹೋಪಯೋಗಿ ವಸ್ತುಗಳ ಕಡೆಯೇ ಎಲ್ಲರ ಚಿತ್ತ ಹರಿದಿತ್ತು. ಇದರಿಂದ ಕೃಷಿ ಆಧಾರಿತ ಮಳಿಗೆಗಳು ತುಸು ಮಂಕಾದಂತೆ ಕಂಡು ಬಂದವು.

ಬೆಳಗ್ಗೆ 11 ಗಂಟೆಗೆ ಶುರುವಾಗಬೇಕಿದ್ದ ಉದ್ಘಾಟನೆ ಕಾರ್ಯಕ್ರಮ 12 ಗಂಟೆಗೆ ಶುರುವಾಗಿತ್ತು. ಆದರೂ ಜನ ಕಾರ್ಯಕ್ರಮದಲ್ಲಿ ಕುಳಿತು ಆಲಿಸಿದರು. ಬಳಿಕ ಮಧ್ಯಾಹ್ನ ನಡೆದ ರೈತರೊಂದಿಗೆ ರೈತರು ಸಂವಾದ ಕಾರ್ಯಕ್ರಮಕ್ಕೆ ಜನಾಭಾವ ಕಂಡು ಬಂತು. ಜನರೆಲ್ಲ ಸುತ್ತಲಿನ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು ಕಂಡು ಬಂತು.

ಸಾವಯವ ಮರೆ: ಕೃಷಿ ಮೇಳದಲ್ಲಿ ಖಾಸಗಿ ಕಂಪನಿಗಳ ಆರ್ಭಟ ತುಸು ಹೆಚ್ಚಾಗಿ ಕಂಡು ಬರುತ್ತಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಎಂಬ ಕಲ್ಪನೆ ಇದ್ದರೂ ವ್ಯಾಪಾರಿಗಳು ಯಾಕೋ ಈ ಬಾರಿ ಮುಖ ಮಾಡಿಲ್ಲ. ಕಳೆದ ಬಾರಿ ಸಾವಯವ ಮಳಿಗೆ ಹಾಕಿದ ವರ್ತಕರಿಗೆ ನಷ್ಟವಾಗಿತ್ತು. ಹೀಗಾಗಿ ದುಬಾರಿ ಹಣ ತೆತ್ತು ಮಳಿಗೆ ಹಾಕಿದರೆ ಲಾಭವಿಲ್ಲ ಎಂಬ ಕಾರಣಕ್ಕೆ ದೂರ ಉಳಿದಂತೆ ಕಂಡು ಬಂತು.  ಆದರೆ, ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳ ಪ್ರದರ್ಶನಕ್ಕೆ ಖಾಸಗಿ ಕಂಪನಿಗಳು ಪೈಪೋಟಿಯಲ್ಲಿ ಮಳಿಗೆ ಹಾಕಿದ್ದು ತರಹೇವಾರಿ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಜಲಾನಯನ ಮಾದರಿ: ಇನ್ನು ಕೃಷಿ ಇಲಾಖೆಯಿಂದ ರೂಪಿಸಿದ ಜಲಾನಯನ ಪರಿಕಲ್ಪನೆಯ ಮಾದರಿ ಸಾರ್ವಜನಿಕರನ್ನು ಬರ ಸೆಳೆಯುತ್ತಿದೆ. ನೀರಿನ ಇಂಗುವಿಕೆ, ಸಮಗ್ರ ಕೃಷಿ ಪದ್ಧತಿ ಹಾಗೂ ಜಲಮರುಪೂರಣ ವಿವರಿಸುವ ಪ್ರಾತ್ಯಕ್ಷಿಕೆ ರಚಿಸಿದ್ದು, ಆಕರ್ಷಣೀಯವಾಗಿದೆ. ಸುಮಾರು 20×20 ಅಳತೆಯ ದೊಡ್ಡ ಸ್ಥಳದಲ್ಲಿ ಬೃಹತ್‌ ಮಾದರಿಯನ್ನು ರಚಿಸಲಾಗಿದೆ. ಬೆಟ್ಟದ ಮೇಲಿಂದ ಹರಿಯುವ ನೀರನ್ನು ಹೇಗೆಲ್ಲ ಸಂರಕ್ಷಿಸಹುದು. ಅದರಿಂದ ಹೇಗೆ ಕೃಷಿ ಮಾಡಬೇಕು ಎನ್ನುವ ಮಾಹಿತಿ ನೀಡುವ ಪ್ರಾತ್ಯಕ್ಷಿಕೆ ಇದಾಗಿದೆ.

ಚೋಟಾ ಚಾರಮಿನಾರ್‌: ಇನ್ನು ಮೇಳದಲ್ಲಿ ಚೋಟಾ ಚಾರಮಿನಾರ್‌ ಗಮನ ಸೆಳೆಯುತ್ತಿದೆ. ಖಾಸಗಿ ಕಂಪನಿಯವರು ತಮ್ಮ ಕಂಪನಿಯ ಕ್ರಿಮಿನಾಶಕದ ಪ್ರಚಾರಾರ್ಥ ಇದನ್ನು ನಿರ್ಮಿಸಿದ್ದಾರೆ. ಕಟ್ಟಿಗೆಯಿಂದ ನಿರ್ಮಿಸಿರುವ ಈ ಕಲಾಕೃತಿ ನೋಡಲು ಆಕರ್ಷಕವಾಗಿದ್ದು, ಎಲ್ಲರನ್ನು ಬರೆ ಸೆಳೆಯುತ್ತಿದೆ. ಹೈದರಾಬಾದ್‌ನ ಚಾರ್‌ ಮಿನಾರ್‌ ನೋಡದವರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೇ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಕೃಷಿ ಮೇಳ ರವಿವಾರದ ರಜೆಯ ಮಜಾವನ್ನಂತೂ ಮೂಡಿಸಿದ್ದು ಸುಳ್ಳಲ್ಲ. ಸೋಮವಾರ ಸಮಾರೋಪ ಜರುಗಲಿದ್ದು, ಕೊನೆ ದಿನ ನಾನಾ ಕಾರ್ಯಗಳ ನಿಮಿತ್ತ ನಗರಕ್ಕೆ ಸಾಕಷ್ಟು ಜನ ಬರುವುದರಿಂದ ಅಂದು ಕೂಡ ಜನ ಸೇರುವ ನಿರೀಕ್ಷೆಯಿದೆ.

ಟಾಪ್ ನ್ಯೂಸ್

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಪಂಚ ಚುನಾವಣೆಗೆ ಕಣ ಬಿರುಸು

ಪಂಚ ಚುನಾವಣೆಗೆ ಕಣ ಬಿರುಸು

2021: ಅತೀ ಉಷ್ಣದ ವರ್ಷ

2021: ಅತೀ ಉಷ್ಣದ ವರ್ಷ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ  ಶೇ. 65 ಸಾಧನೆ

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ ಶೇ. 65 ಸಾಧನೆ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಅಂತಾರಾಷ್ಟ್ರೀಯ ನರ್ಸಿಂಗ್‌ ರಿಸರ್ಚ್‌ ಕಾನ್‌ಕ್ಲೇವ್‌

ಅಂತಾರಾಷ್ಟ್ರೀಯ ನರ್ಸಿಂಗ್‌ ರಿಸರ್ಚ್‌ ಕಾನ್‌ಕ್ಲೇವ್‌

ಒಳಹರಿವು ಕಡಿಮೆಯಾದರೆ ಕೈಗಾರಿಕೆಗಳಿಗೆ ರೇಷನಿಂಗ್‌!

ಒಳಹರಿವು ಕಡಿಮೆಯಾದರೆ ಕೈಗಾರಿಕೆಗಳಿಗೆ ರೇಷನಿಂಗ್‌!

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

ಪಂಚ ಚುನಾವಣೆಗೆ ಕಣ ಬಿರುಸು

ಪಂಚ ಚುನಾವಣೆಗೆ ಕಣ ಬಿರುಸು

2021: ಅತೀ ಉಷ್ಣದ ವರ್ಷ

2021: ಅತೀ ಉಷ್ಣದ ವರ್ಷ

ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌: ನಾಕೌಟ್‌ ಹಂತಕ್ಕೆ ಸಿಂಧು, ಪ್ರಣಯ್‌

ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌: ನಾಕೌಟ್‌ ಹಂತಕ್ಕೆ ಸಿಂಧು, ಪ್ರಣಯ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.