10 ಪ್ರೌಢಶಾಲೆ ಇದ್ದರೂ ಒಂದೂ ಕಾಲೇಜಿಲ್ಲ!


Team Udayavani, Mar 5, 2021, 7:34 PM IST

10 High school but not college at all!

ಮಸ್ಕಿ: ತಾಲೂಕಿನ ಬಳಗಾನೂರು ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು 10-15 ಪ್ರೌಢಶಾಲೆಗಳಿವೆ. ವಾರ್ಷಿಕ ಕನಿಷ್ಟ 1000 ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲೇರುತ್ತಾರೆ. ಆದರೆ ಇಲ್ಲಿ ಒಂದು ಪದವಿ ಪೂರ್ವ-ಪದವಿ ಕಾಲೇಜುಗಳಿಲ್ಲ!.

ತಾಲೂಕಿನ ಹಿರಿಯ ಹೋಬಳಿ ಎಂದೇ ಬಿಂಬಿತವಾದ ಬಳಗಾನೂರಿನಲ್ಲಿನ ದುಸ್ಥಿತಿ ಇದು. ಸರಕಾರ ಇಲ್ಲಿ ಕಾಲೇಜು ಶಿಕ್ಷಣ ಆರಂಭಿಸದೇ ಇರುವುದರಿಂದ ವರ್ಷಕ್ಕೆ ಕನಿಷ್ಠ 300-400 ವಿದ್ಯಾರ್ಥಿಗಳು ದೂರದ ಕಾಲೇಜುಗಳಿಗೆ ಹೋಗಲು ಆಗದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಾಲೇಜು ಶಿಕ್ಷಣ ಆರಂಭಿಸಬೇಕು ಎಂದು ಕಳೆದ ಆರೇಳು ವರ್ಷಗಳಿಂದ ಇಲ್ಲಿನ ನಾಗರಿಕರು, ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿವೆ. ಶಿಕ್ಷಣ ಇಲಾಖೆ ಸಚಿವರಿಂದ ಹಿಡಿದು ಸ್ಥಳೀಯ ಶಾಸಕರವರೆಗೂ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಕಾಲೇಜು ಕನಸು ಈಡೇರುತ್ತಿಲ್ಲ.

ಏನಿದೆ ಪರಿಸ್ಥಿತಿ?: ಬಳಗಾನೂರು ಪಟ್ಟಣ ಪಂಚಾಯಿತಿ ಸೇರಿ ಸುತ್ತಲೂ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳು ಬಳಗಾನೂರು ಪಟ್ಟಣಕ್ಕೆ ಹೊಂದಿಕೊಂಡಿವೆ. ಬಳಗಾನೂರು ಪಟ್ಟಣದಲ್ಲಿ ಸರಕಾರಿ ಸೇರಿ ಖಾಸಗಿಯಾಗಿ ಹಲವು ಪ್ರೌಢಶಾಲೆಗಳಿವೆ. ಇನ್ನು ಬಳಗಾನೂರು ಸಮೀಪದ ದಿದ್ದಗಿ, ಜಾಲವಾಡಗಿ, ಉದಾºಳ, ಹುಲ್ಲೂರು, ಗೌಡನಭಾವಿ ಸೇರಿ ಹಲವು ಹಳ್ಳಿಗಳಲ್ಲಿ ಸರಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳು ತಲೆ ಎತ್ತಿವೆ. 10ನೇ ತರಗತಿವರೆಗೂ ಇಲ್ಲಿನ ಹೋಬಳಿ ವಿದ್ಯಾರ್ಥಿಗಳು ಯಾವುದೇ ಅಡೆ-ತಡೆಇಲ್ಲದೇ ಪ್ರೌಢ ಶಿಕ್ಷಣ ಮುಗಿಸುತ್ತಾರೆ. ಆದರ  ಪದವಿ ಪೂರ್ವ ಮೆಟ್ಟಿಲು ಹತ್ತುವುದೇ ಇಲ್ಲಿ ಸವಾಲಿನ ಕೆಲಸ. ಕಾಲೇಜು ಆಯ್ಕೆ? ದೂರದ ಕಾಲೇಜುಗಳಿಗೆ ಬಸ್‌ ಪಾಸ್‌ ಸೇರಿ ಇತರೆ ಹೊರೆ? ಅಲ್ಲದೇ ವಿಶೇಷವಾಗಿ ಹೆಣ್ಣು ಮಕ್ಕಳನ್ನು ದೂರದ ಕಾಲೇಜಿಗೆ ಕಳುಹಿಸುವುದೇಗೆ? ಎನ್ನುವ ಆತಂಕ ಇಲ್ಲಿನ ಹಲವು ವಿದ್ಯಾರ್ಥಿಗಳ ಭವಿಷ್ಯವನ್ನು ಮಂಕಾಗಿಸಿದೆ.

ನಿತ್ಯ ಹೊಯ್ದಾಟ: ಇಲ್ಲಿನ ವಿದ್ಯಾರ್ಥಿಗಳ ಪ್ರೌಢ ಶಿಕ್ಷಣ ಮುಕ್ತಾಯದ ಬಳಿಕ ಪದವಿ ಪೂರ್ವ, ಪದವಿ ಶಿಕ್ಷಣಕ್ಕಾಗಿ ಮಸ್ಕಿ, ನೆರೆಯ ಸಿಂಧನೂರು ಇಲ್ಲವೇ ಪೋತ್ನಾಳ ಕೇಂದ್ರಕ್ಕೆ ತೆರಳಬೇಕು. ಕಾಲೇಜು ಕೋರ್ಸ್‌ ಮಾಡಬೇಕೆಂದರೆ ನಿತ್ಯ ಸುಮಾರು 15-30 ಕಿ.ಮೀ. ಪ್ರಯಾಣ ಮಾಡಬೇಕು. ಇಲ್ಲವೇ ದೂರದ ವಸತಿ ಕೇಂದ್ರಗಳಲ್ಲೇ ಇದ್ದ ವ್ಯಾಸಂಗ ಮಾಡಬೇಕು. ಅದೂ ಇಲ್ಲವಾದರೆ ಕಾಲೇಜು ಮೆಟ್ಟಿಲು ಹತ್ತುವ ಕನಸನ್ನೇ ಕೈ ಬಿಡಬೇಕು. ಒಂದು ವೇಳೆ ಮಸ್ಕಿ, ಸಿಂಧನೂರು, ಪೋತ್ನಾಳ ಕೇಂದ್ರಗಳಿಗೆ ಕಾಲೇಜುಗಳಿಗೆ ತೆರಳಬೇಕಾದರೆ ನಿತ್ಯ ಬಸ್‌ನಲ್ಲಿ ಜಂಜಾಟ, ವಿದ್ಯಾರ್ಥಿಗಳ ನೂಕು-ನುಗ್ಗಲಿನ ನಡುವಿಯೇ ಬಸ್‌ ಹಿಡಿದು ಸಾಗಬೇಕು. ಎದ್ದು-ಬಿದ್ದು ಕಾಲೇಜಿಗೆ ಹೋಗುವ ವೇಳೆಗೆ ಎರಡೂ¾ರು ಕ್ಲಾಸ್‌ ಮುಗಿದು ಹೋಗಿರುತ್ತದೆ. ಇಂತಹ ಫಜೀತಿಯಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಇಂತಹ ಸಂಕಷ್ಟ ದೂರ ಮಾಡಲು ಸರಕಾರ ಕೂಡಲೇ ಕಾಲೇಜು ಶಿಕ್ಷಣ ವ್ಯವಸ್ಥೆಯನ್ನು ಬಳಗಾನೂರು ಪಟ್ಟಣ ಕೇಂದ್ರದಲ್ಲೇ ಮಾಡಬೇಕು ಎನ್ನುವುದು ಪಾಲಕರ ಬೇಡಿಕೆ.

 

ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.