ಬಸವಸಾಗರ ಜಲಾಶಯದಿಂದ 2.90 ಲಕ್ಷ ಕ್ಯೂಸೆಕ್‌ ನೀರು-ಹೆಚ್ಚಿದ ಆತಂಕ

Team Udayavani, Aug 18, 2020, 5:20 PM IST

ಬಸವಸಾಗರ ಜಲಾಶಯದಿಂದ 2.90 ಲಕ್ಷ ಕ್ಯೂಸೆಕ್‌ ನೀರು-ಹೆಚ್ಚಿದ ಆತಂಕ

ಲಿಂಗಸುಗೂರು: ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದರಿಂದ ನದಿತೀರದ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.

ಬಸವಸಾಗರ ಜಲಾಶಯದಿಂದ 25 ಗೇಟ್‌ಗಳ ಮುಖಾಂತರ ಸೋಮವಾರ 2.90 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಇದರಿಂದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಪ್ರವಾಹ ಭೀತಿ ಎದುರಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಬಸವಸಾಗರ ಜಲಾಶಯದಿಂದ 6.20 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿ ಹರಿಬಿಡಲಾಗಿತ್ತು. ಇದರಿಂದ ತಾಲೂಕಿನ ಶೀಲಹಳ್ಳಿ, ಜಲದುರ್ಗ, ಯರಗೋಡಿ ಸೇತುವೆ ಮುಳುಗಡೆಯಾಗಿದ್ದರಿಂದ ಜಲದುರ್ಗ, ಯರಗೋಡಿ, ಹಂಚಿನಾಳ, ಕಡದರಗಡ್ಡಿ, ಯಳಗುಂದಿ ಗ್ರಾಮಗಳ ರಸ್ತೆ ಸಂಪರ್ಕ ಕಡಿದುಕೊಂಡು ಅನೇಕ ತೊಂದರೆ ಎದುರಿಸುವಂತಾಗಿತ್ತು. ಈ ಬಾರಿ ಮೂರು ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುತ್ತಿದ್ದರಿಂದ ಕಳೆದ ವರ್ಷ ಅನುಭವಿಸಿದ ಯಾತನೆ ಮತ್ತೆ ಮರುಕಳಿಸುವುದೇ ಎಂಬ ಆತಂಕದಲ್ಲಿ ನದಿತೀರದ ಗ್ರಾಮಗಳಲ್ಲಿನ ಜನತೆಯಲ್ಲಿ ಕಾಡುತ್ತಿದೆ. ಈಗಾಗಲೇ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. 5 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟರೆ ಯರಗೋಡಿ ಸೇತುವೆ ಮತ್ತು 6.50 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟರೆ ಜಲದುರ್ಗ ಸೇತುವೆ ಮುಳುಗಡೆಯಾಗಲಿದೆ. ಕಳೆದ ವರ್ಷ ಈ ಸೇತುವೆಗಳು ಮುಳುಗಡೆಯಾಗಿದ್ದವು. ಜಲಾಶಯದಿಂದ ಹರಿಸುವ ನೀರಿನ ವೈಭವ ನೋಡಲು ಕಳೆದ 15 ದಿನಗಳಿಂದ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಲಾಶಯಕ್ಕೆ ಆಗಮಿಸುತ್ತಿದ್ದರಿಂದ ಜಲಾಶಯದ ಕೆಲಭಾಗದ ಸೇತುವೆಯ ಮೇಲೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ.

ಸಣ್ಣ ಪುಟ್ಟ ವ್ಯಾಪಾರಿಗಳು ತಳ್ಳು ವಾಹನದೊಂದಿಗೆ ಹಣ್ಣು, ಮಿರ್ಚಿ ಬಜಿ, ಕುಡಿಯುವ ನೀರು ಸೇರಿ ಇತರೆ ತಿಂಡಿ ತಿನಿಸು ಮಾರಾಟದ ವ್ಯಾಪಾರ ವಹಿವಾಟು ಭರ್ಜರಿಯಾಗಿಯೇ ನಡೆಯುತ್ತಿದೆ. ಜಲಾಶಯದ ಸುತ್ತಮುತ್ತ ಏನೂ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ವ್ಯಾಪಾರಿಗಳೇ ಆಸರೆಯಾಗಿದ್ದಾರೆ. ಜಲಾಶಯ ನೋಡಲು ಕುಟುಂಬ ಸಮೇತ ಬರುವ ಪ್ರವಾಸಿಗರು ತಮ್ಮ ಕುಟುಂಬದೊಂದಿಗೆ ಸೆಲ್ಫಿ  ತೆಗೆದುಕೊಳ್ಳುತ್ತಿರುವುದು ಕಂಡು ಬಂತು.

ಟಾಪ್ ನ್ಯೂಸ್

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ : ಅರ್ಜಿ ಹಾಕಲು ಜ. 21 ಕೊನೆ ದಿನ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ : ಅರ್ಜಿ ಹಾಕಲು ಜ. 21 ಕೊನೆ ದಿನ

ಶಾಲೆ ವಿದ್ಯಾರ್ಥಿನಿ ಸೇರಿ ಕುರುಗೋಡು ತಾಲೂಕಿನಲ್ಲಿ 17 ಕೋವಿಡ್ ಪ್ರಕರಣಗಳು ಪತ್ತೆ

ಶಾಲೆ ವಿದ್ಯಾರ್ಥಿನಿ ಸೇರಿ ಕುರುಗೋಡು ತಾಲೂಕಿನಲ್ಲಿ 17 ಕೋವಿಡ್ ಪ್ರಕರಣಗಳು ಪತ್ತೆ

ಮೂರು ಕಣ್ಣುಳ್ಳ ಕರುವಿಗೆ ಜನ್ಮವಿತ್ತ ಗೋ ಮಾತೆ !

ಮೂರು ಕಣ್ಣುಳ್ಳ ಕರುವಿಗೆ ಜನ್ಮವಿತ್ತ ಗೋ ಮಾತೆ !

ಯುವತಿಯನ್ನು ರೈಲು ಹಳಿಗೆ ತಳ್ಳಿದ ಪಾಪಿ! ವಿಡಿಯೋ ವೈರಲ್‌ 

ಯುವತಿಯನ್ನು ರೈಲು ಹಳಿಗೆ ತಳ್ಳಿದ ಪಾಪಿ! ವಿಡಿಯೋ ವೈರಲ್‌ 

akhilesh

ಯೋಗಿ ಸ್ಪರ್ಧಿಸುವ ಗೋರಖ್‌ಪುರ್ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಗೆ ಎಸ್‌ಪಿ ಟಿಕೆಟ್ ಆಫರ್

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

ನಿಷೇಧದ ನಡುವೆಯೂ ರಥೋತ್ಸವ : ಸಾವಿರಾರು ಜನ ಭಾಗಿ, ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19school

ಏಳು ಪ್ರೌಢಶಾಲೆ ಕಾಲೇಜುಗಳಾಗಿ ಮೇಲ್ದರ್ಜೆಗೆ

12MLA

ಶಾಸಕರ ನಿವಾಸಕ್ಕೆ ಅನ್ನದಾತರ ದಂಡು

23paddy

ತಿಂಗಳಾಂತ್ಯಕ್ಕೆ ಜೋಳ-ಭತ್ತ ಖರೀದಿ ಮಿತಿ ತೆರವು

22tribes

ಗಿರಿಜನರು ಸರಕಾರದ ಸೌಲಭ್ಯ ಪಡೆಯಲಿ

21ambulance

ಗುರುಗುಂಟಾ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ಸೇವೆಗೆ ಚಾಲನೆ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ : ಅರ್ಜಿ ಹಾಕಲು ಜ. 21 ಕೊನೆ ದಿನ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ : ಅರ್ಜಿ ಹಾಕಲು ಜ. 21 ಕೊನೆ ದಿನ

ದುಕಮನಬವಚಷ

ಜಮಖಂಡಿಯಲ್ಲಿ ವೀಕೆಂಡ್‌ ಕರ್ಫ್ಯೂ ಯಶಸ್ವಿ

ದತೆಹಜಬವಚಷಱ

ವೀಕೆಂಡ್‌ ಕರ್ಫ್ಯೂ 2ನೇ ದಿನವೂ ಯಶಸ್ವಿ

ಯಲ್ಲಾಪುರ : 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಯಲ್ಲಾಪುರ : 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.