5.24 ಲಕ್ಷರೂ. ಉಳಿಕೆ ಬಜೆಟ್‌


Team Udayavani, Feb 23, 2018, 3:30 PM IST

ray-2.jpg

ಸಿಂಧನೂರು: ಸ್ಥಳೀಯ ನಗರಸಭೆಯಲ್ಲಿ ನಡೆದ 2018-19ನೇ ಸಾಲಿನ ಬಜೆಟ್‌ ಮಂಡನೆ ಸಭೆಯಲ್ಲಿ 5,24,591 ಲಕ್ಷ ರೂ. ಗಳ ಉಳಿತಾಯದ ಆಯವ್ಯಯವನ್ನು ಸ್ಥಾಯಿ ಸಮಿತಿ ಅಧ್ಯಕ್ಷ ನಬಿಸಾಬ್‌ ಮಂಡಿಸಿ ಚರ್ಚೆಯಿಲ್ಲದೇ ಹತ್ತೇ ನಿಮಿಷದಲ್ಲಿ ಅನುಮೋದನೆ ಪಡೆದದ್ದು ವಿಶೇಷವಾಗಿತ್ತು.

ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಮಂಜುಳಾ ಪಾಟೀಲ್‌ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಸಭೆಯಲ್ಲಿ 2018-19ನೇ ಸಾಲಿನ ಆಯವ್ಯಯ ಮಂಡಿಸಲಾಯಿತು. 53,71,90,881 ರೂ.ಗಳ ನಿರೀಕ್ಷಿತ ಆದಾಯ ಹಾಗೂ 53,66,66,290 ರೂ.ಗಳ ನಿರೀಕ್ಷಿತ ಖರ್ಚು ತೆಗೆದು 5,24,591 ರೂ.ಗಳ ಉಳಿಕೆ ಬಜೆಟ್‌ ಮಂಡಿಸಲಾಯಿತು.

ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ 5.40 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ 4 ಕೋಟಿ, 14ನೇ ಹಣಕಾಸು ಅನುದಾನ 6 ಕೋಟಿ, ಕುಡಿಯುವ ನೀರಿನ ಅನುದಾನ 50 ಲಕ್ಷ, ಸಂಸದರ ಅನುದಾನ 10 ಲಕ್ಷ, ಶಾಸಕರ ಅನುದಾನ 5 ಲಕ್ಷ, ಪ್ರಕೃತಿ ವಿಕೋಪ ಅನುದಾನ 1 ಕೋಟಿ ರೂ., ಎಚ್‌ ಕೆಆರ್‌ಡಿಬಿ ಅನುದಾನ 2 ಕೋಟಿ, ಸ್ವತ್ಛ ಭಾರತ ಮಿಷನ್‌ ಅನುದಾನ 25 ಲಕ್ಷ, ಎಸ್‌ ಸಿಪಿ/ಟಿಎಸ್‌ಪಿ ಅನುದಾನ 2 ಕೋಟಿ ಸೇರಿ ಇನ್ನಿತರ ಅನುದಾನ ನಿರೀಕ್ಷಿತ ಆದಾಯದ ಮೂಲಗಳಾಗಿವೆ.

ಇನ್ನು ಸಿಬ್ಬಂದಿ ವೇತನ, ಭತ್ಯೆ, ಸೌಲಭ್ಯಗಳು 60 ಲಕ್ಷ, ಕೂಲಿ 10 ಲಕ್ಷ, ವಂತಿಗೆ 2 ಲಕ್ಷ, ಸೇವಾಂತ್ಯದ ಹಾಗೂ ಪಿಂಚಣಿ ಸೌಲಭ್ಯಗಳು 5 ಲಕ್ಷ, ಬಾಡಿಗೆ, ದರಗಳು, ತೆರಿಗೆಗಳು, ವಿಮೆಗಳು 20 ಲಕ್ಷ, ಜಾಹೀರಾತು ಮತ್ತು ಪ್ರಚಾರ 10 ಲಕ್ಷ, ಕಚೇರಿ ವೆಚ್ಚ 9 ಲಕ್ಷ, ಕೌನ್ಸಿಲ್‌ ಸಿಬ್ಬಂದಿ ವೆಚ್ಚ 5 ಲಕ್ಷ, ದುರಸ್ತಿ, ನಿರ್ವಹಣೆ ವೆಚ್ಚ 10 ಲಕ್ಷ, ಹೊರಗುತ್ತಿಗೆ ಕಾರ್ಯಾಚರಣೆ ವೆಚ್ಚ 30 ಲಕ್ಷ, ಪ್ರಯಾಣ ಹಾಗೂ ವಾಹನ ಭತ್ಯೆ 12.5 ಲಕ್ಷ, ಪುಸ್ತಕ, ನಿಯತಕಾಲಿಕೆಗಳು, ಮುದ್ರಣ, ಲೇಖನ ಸಾಮಗ್ರಿಗಳು 25 ಲಕ್ಷ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಅನುದಾನ ಬಳಕೆ ಸೇರಿದಂತೆ ಒಟ್ಟು 53,66,66,290 ಖರ್ಚಾಗಬಹುದಾಗಿದೆ ಎಂದು ಸಭೆಗೆ ವಿವರಿಸಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಸಮ್ಮತಿ ಸೂಚಿಸಿತು. ಬೃಹತ್‌ ಕುಡಿಯುವ ನೀರಿನ ಯೋಜನೆ ಝೋನ್‌ 1, 4, 6 ಕಾಮಗಾರಿ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಗಳಿಂದ ಉದ್ಘಾಟನೆ ಮಾಡಿಸಲಾಗಿದೆ.

ಆದರೆ ಝೋನ್‌-1ರ ವ್ಯಾಪ್ತಿಯಲ್ಲಿ ಬರುವ 29ನೇ ವಾರ್ಡಿಗೆ 10 ದಿನಗಳಾದರೂ ನೀರು ಬರುತ್ತಿಲ್ಲ ಎಂದು ಸದಸ್ಯ ಬಸವರಾಜ ನಾಡಗೌಡ ಅಧ್ಯಕ್ಷರು, ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಆರ್‌.ವಿರೂಪಾಕ್ಷಮೂರ್ತಿ, ಉದ್ಘಾಟನೆಗೊಂಡ ವಾರ್ಡ್‌ಗಳಲ್ಲಿ ಪ್ರಾಯೋಗಿಕ ವಾಗಿ ನೀರು ಬಿಡಲಾಗಿತ್ತು. ಸಣ್ಣಪುಟ್ಟ ಸಮಸ್ಯೆಗಳಿವೆ ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡಿದರು. 

ನಗರದ ಮಹಿಬೂಬ್‌ ಕಾಲೋನಿಯಲ್ಲಿ ಮಳೆಯಿಂದ ಹಾಳಾದ ರಸ್ತೆ ಅಭಿವೃದ್ಧಿಗೆ ಜೆಡಿಎಸ್‌ ಪಕ್ಷದಿಂದ ದುರಸ್ತಿಗೆ ಮುಂದಾದಾಗ ಪೌರಾಯುಕ್ತರೇ ವಾರದಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿದ್ದರು. ಪಕ್ಷದ ಬ್ಯಾನರ್‌ನಲ್ಲಿ ಮಾಡಬೇಡಿ ಎಂದು ಮನವಿ ಮಾಡಿದ್ದರು. ಮೂರು ತಿಂಗಳು ಕಳೆದರೂ ಕೆಲಸ ಆರಂಭವಾಗಿಲ್ಲ. ಇನ್ನೂ ನನ್ನ ವಾರ್ಡನಲ್ಲಿ ಶಾಸಕರು, ಅಧ್ಯಕ್ಷರು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಭೂಮಿಪೂಜೆ ಮಾಡಿ ಕೇವಲ 3 ಟ್ರಿಪ್‌ ಮರಂ ಹಾಕಿದ್ದೇ ನಿಮ್ಮ ಸಾಧನೆಯಾಗಿದೆ ಎಂದು ಬಸವರಾಜ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.  

ಇದಕ್ಕೆ ಉತ್ತರಿಸಿದ ಪೌರಾಯುಕ್ತರು ಬೃಹತ್‌ ಕುಡಿಯುವ ನೀರಿನ ಯೋಜನೆಯ ರೆಸ್ಟೋರೇಶನ್‌ಗೆ 3.5 ಕೋಟಿ ಅನುದಾನದಲ್ಲಿ ರಸ್ತೆ ದುರಸ್ತಿಗೆ ನೀಲನಕ್ಷೆ ಸಿದ್ದಪಡಿಸಲಾಗಿತ್ತು. ಆದರೆ ಯೋಜನೆಗೆ ಹೆಚ್ಚುವರಿ ಅನುದಾನ ಬೇಕಾಗಿದ್ದರಿಂದ ರೆಸ್ಟೋರೇಶನ್‌ ಅನುದಾನದ ಬದಲಾಗಿ ನಗರಸಭಾ ಅನುದಾನದಲ್ಲಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಸಭೆ ಗಮನಕ್ಕೆ ತಂದರು. ಆದರೂ ಸುಮ್ಮನಾಗದ ನಾಡಗೌಡ ರಸ್ತೆ ಸುಧಾರಣೆ ಯಾವಾಗ ಪ್ರಾರಂಭ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇನ್ನೂ 15
ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಪೌರಾಯುಕ್ತರು ಭರವಸೆ ನೀಡಿದರು. ನಗರದ ವಿವಿಧ ವಾರ್ಡ್‌ಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. 

ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಲಿಂಗರಾಜ ಹೂಗಾರ ಆಗ್ರಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಅನ್ವರ ಬೇಗಂ, ಎಇಇ ಶ್ಯಾಮಲಾ, ವ್ಯವಸ್ಥಾಪಕ ಗುರುರಾಜ ಸೌದಿ ಸೇರಿದಂತೆ ನಗರಸಭೆ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.