ಮದವೇರಿದ ಬಿಜೆಪಿ ನಾಯಕರಿಗೆ ತಕ್ಕಪಾಠ
ನಮ್ಮ ಸರಕಾರ 2 ಸಾವಿರ ಕೋಟಿ ರೂ. ಕೊಟ್ಟರೂ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿದ್ದಾರೆ.
Team Udayavani, Apr 9, 2021, 6:51 PM IST
ಸಿಂಧನೂರು: ಹಣ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಇತ್ತೀಚಿನ ಉಪಚುನಾವಣೆಗಳಲ್ಲಿ ಗೆಲುವು ಪಡೆದ ಬಿಜೆಪಿಯವರಿಗೆ ಮದವೇರಿದೆ. ಮಸ್ಕಿ ಕ್ಷೇತ್ರದಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಿ ಸೊಕ್ಕು ಇಳಿಸಲಿದ್ದಾರೆ ಎಂದು ಶಾಸಕ ಡಾ| ಯತೀಂದ್ರ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿಲ್ಲ.
ಕೋವಿಡ್ ಹೆಸರಿನಲ್ಲಿ ಹಣ ಜೇಬಿಗೆ ಇಳಿಸುತ್ತಿದ್ದಾರೆ. ಈ ಸರಕಾರ ಲೂಟಿಯಲ್ಲಿ ತೊಡಗಿಸಿಕೊಂಡಿದೆ. ವಿಜಯೇಂದ್ರ ಅವರು ಉಪಚುನಾವಣೆಗಳಲ್ಲಿ ಹಣದ ಹೊಳೆ
ಹರಿಸುತ್ತಿದ್ದಾರೆ. ಪ್ರತಾಪ್‌ಗೌಡ ಅವರಿಗೆ ನಮ್ಮ ಸರಕಾರ 2 ಸಾವಿರ ಕೋಟಿ ರೂ. ಕೊಟ್ಟರೂ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿದ್ದಾರೆ.ಅವರಿಗೆ ಮತದಾರ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ಸ್ವಜಾತಿ ವಿರೋಧಿಯಲ್ಲ: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರುಬ ಸಮುದಾಯದ ವಿರೋಧಿ ಎಂದು
ಟೀಕಿಸುವ ಪರಂಪರೆ ಬೆಳೆಯುತ್ತಿದೆ. ಇದರಲ್ಲಿ ಹುರುಳಿಲ್ಲ. ಅವರು ಎಲ್ಲ ವರ್ಗದ ಎಳ್ಗೆಗೆ ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಅವರೇ ಕನಕಗುರುಪೀಠ ನಿರ್ಮಿಸಿದವರು. ಸಮ್ಮಿಶ್ರ ಸರಕಾರದಲ್ಲಿ ಕುರುಬ ಸಮಾಜದ ಮೂರು ಜನರನ್ನು ಮಂತ್ರಿ ಮಾಡಿದ್ದರು. ಅನೇಕರಿಗೆ ಟಿಕೆಟ್ ಕೊಡಿಸಿದ್ದರು. ಕೆಲವರು ಆತುರ ನಿರ್ಧಾರ ತೆಗೆದುಕೊಂಡು ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.
ಬೊಕ್ಕಸಕ್ಕೆ ಹಾನಿ: ಮಾಜಿ ಮಂತ್ರಿ ಎಚ್.ಆಂಜನೇಯ ಮಾತನಾಡಿ, ಉಪಚುನಾವಣೆಗಳಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದನ್ನು ಜನರು ಗಮನಿಸಬೇಕು. ಪ್ರತಾಪಗೌಡ ಪಾಟೀಲ್ ವಿಭೂತಿ ಹಚ್ಚಿಕೊಂಡು ಮಾರಾಟವಾಗಿದ್ದಾರೆ. ಈಗ ನಾಮ ಹಾಕಿಕೊಳ್ಳಲು ಹೊರಟಿದ್ದಾರೆ. ಅವರು ವೃದ್ಧಾಶ್ರಮ ಸೇರಿ ಬಡ್ಡಿ ವ್ಯವಹಾರ ಮಾಡುವದೇ ಲೇಸು. ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಅನುದಾನವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಅವರನ್ನು ಕೆಲವೊಂದು ಗ್ರಾಮಕ್ಕೆ ಜನರೇ ಬಿಟ್ಟುಕೊಳ್ಳುತ್ತಿಲ್ಲ. ಅವರಿಗೆ ಬುದ್ಧಿ ಕಲಿಸಲು ಕಾಂಗ್ರೆಸ್‌ಗೆ ಜನ ಬೆಂಬಲಿಸಬೇಕು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ, ಶಾಸಕ ಅನಿಲ ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್ ವಕೀಲರು, ಪ್ರಧಾನ ಕಾರ್ಯದರ್ಶಿ ವೈ. ಅನಿಲಕುಮಾರ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಡುಗೆ ಅನಿಲ ಸಿಲಿಂಡರ್ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್ಪಿಜಿ ದರ!
ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು
ದ.ಕ., ಉಡುಪಿಯಲ್ಲಿ ಇಂದು ರೆಡ್ ಅಲರ್ಟ್: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ
ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!
ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್. ಅಶೋಕ್