ಸಾರ್ವಜನಿಕರ ಕೆಲಸಗಳಿಗೆ ಲಂಚ ಸ್ವೀಕಾರ ಆರೋಪ: ಸಿಂಧನೂರು ನಗರಸಭೆ ಮೇಲೆ ಎಸಿಬಿ ದಾಳಿ
Team Udayavani, Jun 30, 2020, 1:43 PM IST
ರಾಯಚೂರು: ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಅನಗತ್ಯ ವಿಳಂಬ ಮಾಡುವುದರ ಜತೆಗೆ ಹಣ ಪಡೆದು ಕೆಲಸ ಮಾಡುತ್ತಿರುವ ಆರೋಪದಡಿ ಸಿಂಧನೂರು ನಗರಸಭೆ ಕಚೇರಿ ಸಿಬ್ಬಂದಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸುಮಾರು 40 ಜನರ ತಂಡ ಕಚೇರಿಗೆ ದಾಂಗುಡಿ ಇಟ್ಟಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಸಣ್ಣ ಕೆಲಸ ಮಾಡಿಕೊಡಲು ಪೀಡಿಸುವುದು, ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ದಾಳಿ ನಡೆಸಲಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಲಂಚ ಹಾವಳಿ ಬಗ್ಗೆ ಎಸಿಬಿಗೆ ದೂರುಗಳು ಸಲ್ಲಿಕೆಯಾಗಿದ್ದವು ಎಂದು ತಿಳಿದು ಬಂದಿದೆ. ಡಿಎಸ್ಪಿ ಸಂತೋಷ ಬನಹಟ್ಟಿ ನೇತೃತ್ವದಲ್ಲಿ 10 ಜನ ಪಿಎಸ್ಐ 40 ಜನ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಶೋಧ ಕಾರ್ಯ ಮುಂದುವರಿದಿದೆ.