ಚನ್ನಮ್ಮ ಪುತ್ಥಳಿ ಸ್ಥಾಪನೆಗೆ ಸರ್ವ ಪ್ರಯತ್ನ: ಸಿದ್ರಾಮೇಶ

Team Udayavani, Oct 22, 2021, 3:46 PM IST

20-chennamma

ಸಿಂಧನೂರು: ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಕಿತ್ತೂರು ಚನ್ನಮ್ಮ ಅವರ ಕಂಚಿತ ಪುತ್ಥಳಿ ನಿರ್ಮಾಣಕ್ಕಾಗಿ ಎಲ್ಲ ಸಮುದಾಯ ಒಳಗೊಂಡಂತೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಸಿದ್ರಾಮೇಶ ಮನ್ನಾಪುರ ಹೇಳಿದರು.

ನಗರದ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ವೀರಭದ್ರಪ್ಪ ಗಸ್ತಿ ಅವರ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಿಂಧನೂರು ನಗರಕ್ಕೆ ಕಿತ್ತೂರು ಚನ್ನಮ್ಮ ಸರ್ಕಲ್‌ ಹಿರಿಮೆಯಾಗಿದೆ. ಅಂತಹ ಜಾಗದಲ್ಲಿ ಕಂಚಿನ ಪುತ್ಥಳಿ ಸ್ಥಾಪನೆಯಾಗಬೇಕಿದೆ. ಚನ್ನಮ್ಮ ಒಂದು ಸಮಾಜಕ್ಕೆ ಸೀಮಿತವಲ್ಲ. ಅವರು ಎಲ್ಲ ವರ್ಗದವರು ಗೌರವಿಸುವ ವೀರರಾಣಿ. ಅವರನ್ನು ಸ್ಮರಿಸಿಕೊಳ್ಳುವ ಭಾಗವಾಗಿ ಎಲ್ಲ ಸಮಾಜದವರ ಸಭೆ ಕರೆದು ಪುತ್ಥಳಿ ನಿರ್ಮಾಣಕ್ಕೆ ಧನ ಸಂಗ್ರಹ ಮಾಡಲಾಗುವುದು. ಪುತ್ಥಳಿ ಸ್ಥಾಪಿಸಿ ಭತ್ತದ ನಾಡಿನಲ್ಲಿ ಚನ್ನಮ್ಮನವರ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಅಕ್ಟೋಬರ್‌ 23ರಂದು ಕಿತ್ತೂರು ಚನ್ನಮ್ಮನವರ ಜಯಂತ್ಯುತ್ಸವ ಇದೆ. ತಾಲೂಕಾಡಳಿತದಿಂದ ಮಿನಿ ವಿಧಾನಸೌಧದಲ್ಲಿ ಸರಳವಾಗಿ ಆಚರಿಸಿ, ನಂತರ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗುವುದು. ಕೋವಿಡ್‌ ನಿಯಮಗಳನ್ವಯ ಹೆಚ್ಚಿನ ಜನಸಂಖ್ಯೆ ಸೇರಬಾರದು ಎನ್ನುವುದನ್ನು ಪಾಲನೆ ಮಾಡಲಾಗುತ್ತದೆ. ನಾವು ಸಮಾಜದ ಸಂಘಟನೆಗೆ ಒತ್ತು ನೀಡಲಿದ್ದು, ಗ್ರಾಮೀಣ ಭಾಗದ ಪ್ರತಿ ಮನೆ-ಮನೆಗೆ ತೆರಳಲಾಗುವುದು. ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಚೈತನ್ಯ ಬಂದಿದೆ. ಹೆಸರುಗಳನ್ನು ಅ.23ರಂದು ಘೋಷಣೆ ಮಾಡಲಾಗುವುದು ಎಂದು ಸಮಾಜದ ನಿಯೋಜಿತ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೂರು ಹೇಳಿದರು.

ಇದನ್ನೂ ಓದಿ: ಡಿಎಪಿ ಸಿಗದೆ ಹಿಂಗಾರಲ್ಲಿ ಕಂಗಾಲಾದ ರೈತ!

ಸಮಾಜದ ಗೌರವಾಧ್ಯಕ್ಷ ವೀರಭದ್ರಪ್ಪ ಗಸ್ತಿ, ಪ್ರಧಾನ ಕಾರ್ಯದರ್ಶಿ ಬಸನಗೌಡ ಬುಕ್ಕನಟ್ಟಿ, ಕಾನೂನು ಸಲಹೆಗಾರ ವೀರಭದ್ರಪ್ಪ ವಕೀಲರು, ಶೇಖರಪ್ಪ ದೋಟಿಹಾಳ, ಶಿವುಕುಮಾರ, ನಾಗರಾಜ ಗಸ್ತಿ, ಅಮರೇಶ ಮುಳ್ಳೂರು, ಮಲ್ಲಿಕಾರ್ಜುನ ಪಲ್ಲೇದ್‌, ಬಸವರಾಜ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಸಿಕೆ ಪಡೆಯದಿದ್ದರೂ ಸಕ್ಸಸ್‌ಫುಲ್‌ ಸಂದೇಶ!

ಲಸಿಕೆ ಪಡೆಯದಿದ್ದರೂ ಸಕ್ಸಸ್‌ಫುಲ್‌ ಸಂದೇಶ!

ರೂಪಾಂತರಿ ಭೀತಿ ; ಮತ್ತದೇ ನಿರ್ಲಕ್ಷ್ಯ ನೀತಿ! ಮಾಸ್ಕ್ ಕಡ್ಡಾಯವಿಲ್ಲ

ರೂಪಾಂತರಿ ಭೀತಿ ; ಮತ್ತದೇ ನಿರ್ಲಕ್ಷ್ಯ ನೀತಿ! ಮಾಸ್ಕ್ ಕಡ್ಡಾಯವಿಲ್ಲ

mosale

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ!: ಜನರಲ್ಲಿ ಆತಂಕ

27protest

ಮಕ್ಕಳನ್ನು ಉತ್ತಮ ಪ್ರಜೆ ಮಾಡಿ

26protest

ಕಾಯಂ ತಜ್ಞ ವೈದ್ಯಾಧಿಕಾರಿ ನೇಮಕಕ್ಕೆ ಆಗ್ರಹ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.